'ರಂಡಂ ಪಟ್ಟಾಕ' ಎಂದು ಹೇಳುತ್ತಾ ಬಿಜಲಿ ಪಟಾಕಿಯಂತೆ ಕನ್ನಡ ಚಿತ್ರರಂಗದಲ್ಲಿ ಬಜಾರಿ ಹುಡುಗಿಯ ಅಲೆ ಎಬ್ಬಿಸಿದ ನಟಿಯ ಸಂಭಾವನೆ ಈಗ ಟಾಲಿವುಡ್‌ಗೆ ಹಾರಿದಂತೆ ಹೆಚ್ಚಾಗಿದೆ. ಹಾಗಾದ್ರೆ ಸ್ಯಾಂಡಲ್‌ವುಡ್‌ಗೆ ಕೈ ಕೊಟ್ರಾ?
'ವಜ್ರಕಾಯ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಭಾ ನಟೇಶ್ ಈಗ ಟಾಲಿವುಡ್‌ನ ಬಹು ಬೇಡಿಕೆಯ ನಟಿಯಾಗಿದ್ದಾರೆ.
ಹೌದು ಟಾಲಿವುಡ್ ಮಾಸ್ಟರ್ ಮೈಂಡ್ ಪುರಿ ಜಗನ್ನಾಥ್ ನಿರ್ದೇಶನದ ಚಿತ್ರ 'ಇಸ್ಮಾರ್ಟ್ ಶಂಕರ್' ಚಿತ್ರದಲ್ಲಿ ಮಿಂಚಿದ ನಭಾ ನಟೇಶ್‌ಗೆ ಸಿಕ್ಕಿದ್ದು ದೊಡ್ಡ ಮಟ್ಟದ ಫೇಮ್ ಹಾಗೂ ಅವಕಾಶಗಳು.
ಇನ್ನು ಅವಕಾಶ ಹೆಚ್ಚಾಗ್ತಾ ಹೋದ ಹಾಗೆ ಸಂಭಾವನೆ ಒಂದು ಮಟ್ಟಕ್ಕೆ ಹೆಚ್ಚಾಗಲೇಬೇಕು ಅಲ್ವಾ? ತಮ್ಮ ಮೊದಲ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬ ಮಾಹಿತಿ ಇಲ್ಲ ಆದರೆ ರಾಮ್ ಗೋಪಾಲ್ ಚಿತ್ರಕ್ಕೆ 10 ಲಕ್ಷ ರೂ ಪಡೆದಿದ್ದರು. ಈಗ ತಮ್ಮ ಮುಂದಿನ ಚಿತ್ರಗಳಿಗೆ 40-50 ಲಕ್ಷ ಪಡೆಯುತ್ತಿದ್ದಾರೆ ಎಂದು ಕೆಲ ಮೂಲಗಳ ಪ್ರಕಾರ ತಿಳಿದು ಬಂದಿದೆ.
ಈ ಹಿಂದೆ ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌ಯಿಂದ ಟಾಲಿವುಡ್ ಹಾಗೂ ಕಾಲಿವುಡ್‌ಗೆ ಹಾರಿದಾಗ ಮೊದ ಮೊದಲು ಕಡಿಮೆ ಸಂಭಾವನೆ ಪಡೆಯುತ್ತಿದ್ದರು. ಆದರೀಗ 80 ಲಕ್ಷದಿಂದ 1 ಕೋಟಿ ಪಡೆಯುತ್ತಿದ್ದಾರೆ ಎಂಬ ಮಾತಿದೆ.