ಆ ಘಟನೆ ಆಗ ನಡೆದಿದ್ದಕ್ಕೆ ಯಶ್ ತಮ್ಮದೇ ಆದ ರೀತಿಯಲ್ಲಿ ಅಂದು ಕೌಂಟರ್ ಕೊಟ್ಟಿದ್ದರು. ಆದ್ರೆ ಇಂದು ಯಶ್ ಅವರ ತಂಟೆಗೆ ಹೋಗೋದ್ದಕ್ಕೇ ಯಾರೇ ಆದ್ರೂ ಭಯ ಪಡ್ತಾರೆ. ಒಮ್ಮೆ ಫಿಟ್ಟಿಂಗೂ ಗಿಟ್ಟಿಂಗೂ ಅಂಥ ಈಗೇನಾದ್ರೂ ಶುರುವಾದ್ರೆ, ಬಹುಶಃ..
ಇದೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಸುದ್ದಿ ಇರೋದು ಕನ್ನಡದ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಬಗ್ಗೆ.. ಆದ್ರೆ ಇದು ಹಳೆಯ ಸುದ್ದಿಯೇ ಎಂಬುದು ಕನ್ಪರ್ಮ್. ಯಾಕಂದ್ರೆ, ನಟಿ ನಿಧಿ ಸುಬ್ಬಯ್ಯ (Nidhi Subbaiah) ಚಿತ್ರರಂಗದಲ್ಲಿ ಆಕ್ಟಿವ್ ಇದ್ದ ಕಾಲ ಯಾವುದು ಎಂಬುದು ಬಹುತೇಕರಿಗೆ ಗೊತ್ತು..! ಹೀಗಾಗಿ, ಇದು ಹಳೆಯ ಸುದ್ದಿಯೇ ಆದರೂ ಇದ್ರಲ್ಲಿ ಒಂಥರಾ 'ಘಮ್' ಇದೆ, ಗಮ್ಮತ್ತೂ ಇದೆ.. ಏನಂತೀರಾ?
ಹೌದು, ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಓಡಾಡ್ತಾ ಇರೋದು ಸತ್ಯ. ನಟಿ ನಿಧಿ ಸುಬ್ಬಯ್ಯ ಅದ್ಯಾವತ್ತೋ ಯಾವುದೋ ಕಾರಣಕ್ಕೆ ನಟ ಯಶ್ ವಿರುದ್ಧ ಫಿಟ್ಟಿಂಗ್ ಇಟ್ಟಿದ್ದಾರೆ. ಅದಕ್ಕೆ ಕೋಪಗೊಂಡ ಯಶ್ ನಿಧಿ ಮನೆಯ ಗೇಟ್‌ಗೆ ಪಟಾಕಿ ಕಟ್ಟಿ ಸಿಡಿಸಿ ಸೇಡು ತೀರಿಸಿಕೊಂಡಿದ್ದರಂತೆ. ಹಾಗಂತ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.. ಇದ್ದರೂ ಇರಬಹುದು, ಕನ್ಫರ್ಮ್ ಇಲ್ಲ. ಆದರೆ, ಈ ಸುದ್ದಿ ತಿಳಿದರೆ ಯಶ್ ಫ್ಯಾನ್ಸ್ ಅಂತೂ ಖುಷಿಯಾಗೋದು ಖಂಡಿತ..
Rocking Star ಯಶ್ ಚಿತ್ರಕ್ಕೆ 'ಬ್ಯಾಂಗರ್' ಎಂದ ಹಾಲಿವುಡ್ ಡೈರೆಕ್ಟರ್;.. ಇಡೀ ಜಗತ್ತೇ ತಲ್ಲಣ..!!
ಯಾಕಂದ್ರೆ, 'ಕೆಜಿಎಫ್ ಸಿನಿಮಾದಲ್ಲಿ ಮಾತ್ರ ಅಲ್ಲ, ನಮ್ ಬಾಸ್ ನಿಜ ಜೀವನದಲ್ಲಿ ಕೂಡ ಅನ್ಯಾಯ ಆದ್ರೆ ಸಹಿಸಲ್ಲ ಅನ್ನೋದಕ್ಕೆ ಇದೊಂದೇ ಉದಾಹರಣೆ ಸಾಕು' ಅಂತ ಯಶ್ ಅಭಿಮಾನಿಗಳು ಹೇಳ್ಕೊಂಡು ಓಡಾಡೋದು ಗ್ಯಾರಂಟಿ. ಆಗಿನ್ನೂ ಯಶ್ ಅವರು ಚಿತ್ರರಂಗಕ್ಕೆ ಹೊಸಬರು. ಆಗಿನ ಅವರ ಸಾಮರ್ಥ್ಯಕ್ಕೆ ಏನು ಮಾಡೋಕೆ ಆಗುತ್ತೋ ಅದನ್ನು ಮಾಡಿದ್ದಾರೆ ಎನ್ನಬಹುದು. ಒಮ್ಮೆ ಅದೇನಾದ್ರೂ ಈಗ ಆಗಿದ್ರೆ,,? ಘಟನೆಗೆ ರಾಕಿಂಗ್ ಸ್ಟಾರ್ ಯಶ್ ಕೊಡುವ ಕೌಂಟರ್ ಬೇರೇನೇ ಇರ್ತಿತ್ತಾ?
ಅದು ನಮಗೇನು ಗೊತ್ತು? ಆ ಬಗ್ಗೆ ಯಶ್ ಅವ್ರೇ ಹೇಳ್ಬೇಕು.. ಆದ್ರೆ, ನಿಜ ಹೇಳ್ಬೇಕು ಅಂದ್ರೆ.. ಆ ಘಟನೆ ಆಗ ನಡೆದಿದ್ದಕ್ಕೆ ಯಶ್ ತಮ್ಮದೇ ಆದ ರೀತಿಯಲ್ಲಿ ಅಂದು ಕೌಂಟರ್ ಕೊಟ್ಟಿದ್ದರು. ಆದ್ರೆ ಇಂದು ಯಶ್ ಅವರ ತಂಟೆಗೆ ಹೋಗೋದ್ದಕ್ಕೇ ಯಾರೇ ಆದ್ರೂ ಭಯ ಪಡ್ತಾರೆ. ಒಮ್ಮೆ ಫಿಟ್ಟಿಂಗೂ ಗಿಟ್ಟಿಂಗೂ ಅಂಥ ಈಗೇನಾದ್ರೂ ಶುರುವಾದ್ರೆ, ಬಹುಶಃ ಯಶ್ ಪಟಾಕಿ ರೂಪದಲ್ಲಿ ಅಲ್ಲ, ಬೇರೆಯದೇ ರೀತಿಯಲ್ಲಿ ಕೊಡ್ಬಹುದು.. ಅದೇನ್ ಆಗಿರ್ಬಹುದು ಅಂತ ನೀವೇ ಗೆಸ್ ಮಾಡಿ ಕಾಮೆಂಟ್ ಮಾಡಿ..
ಈ ಸ್ಟಾರ್ ಡೈರೆಕ್ಟರ್ '8'ರ ಹಿಂದೆ ಬಿದ್ದಿದ್ಯಾಕೆ..? ಇವ್ರು 'ಡಕಾಯಿತ್' ಆಗಿದ್ರು ಗೊತ್ತಿದ್ಯಾ..?!
ಅಂದಹಾಗೆ, ನಟ ಯಶ್ ಸದ್ಯ ಪ್ಯಾನ್ ವರ್ಲ್ಡ್ ಸಿನಿಮಾ ಟಾಕ್ಸಿಕ್ ಹಾಗೂ ಬಾಲಿವುಡ್‌ನ ಬಿಗ್ ಬಜೆಟ್ 'ರಾಮಾಯಣ' ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ರಾಮಾಯಣಕ್ಕೆ ಅವರು ನಿರ್ಮಾಪಕರೂ ಕೂಡ ಹೌದು. ಸದ್ಯ ಈ ಎರಡೂ ಚಿತ್ರದ ಶೂಟಿಂಗ್‌ಗಳು ನಡೆಯುತ್ತಿದ್ದು, ಭಾರೀ ನಿರೀಕ್ಷೆ ಮನೆ ಮಾಡಿವೆ. ಫಲಿತಾಂಶಕ್ಕೆ ಸಾಕಷ್ಟು ಸಮಯ ಕಾಯಬೇಕು..!