ಕನ್ನಡಕ್ಕೆ ಬರ್ತಾರಂತೆ ಕೀರ್ತಿ ಸುರೇಶ್: ಸೋಲುಗಳ ನಂತರ ಗೆಲುವಿಗಾಗಿ ಸ್ಯಾಂಡಲ್‌ವುಡ್‌ ಎಂಟ್ರಿ

Published : May 31, 2022, 05:34 PM IST
ಕನ್ನಡಕ್ಕೆ ಬರ್ತಾರಂತೆ ಕೀರ್ತಿ ಸುರೇಶ್: ಸೋಲುಗಳ ನಂತರ ಗೆಲುವಿಗಾಗಿ ಸ್ಯಾಂಡಲ್‌ವುಡ್‌ ಎಂಟ್ರಿ

ಸಾರಾಂಶ

Keerthi Suresh: ತೆಲುಗು ನಟಿ ಕೀರ್ತಿ ಸುರೇಶ್‌ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರಂತೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಕೀರ್ತಿ ಸುರೇಶ್‌ ಸಿನೆಮಾ ರಂಗದಲ್ಲಿ ಕಾಲಿಟ್ಟ ಹೊಸತರಲ್ಲಿ ಸಾಲು ಸಾಲು ಹಿಟ್‌ ಚಿತ್ರಗಳಲ್ಲಿ ಕಾಣಿಸಿಕೊಂಡರು. ಆದರೆ ಇತ್ತೀಚೆಗೆ ಅವರ ಚಿತ್ರಗಳು ನೆಲ ಕಚ್ಚುತ್ತಿವೆ. ಈ ಸಂದರ್ಭದಲ್ಲಿ ಅವರು ಕನ್ನಡ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಸ್ಯಾಂಡಲ್ ವುಡ್ ನಲ್ಲಿ (Sandalwood) ನಾಯಕಿಯರೇ ಕಮ್ಮಿ ಅನ್ನೋ ಮಾತಿದೆ. ಹೊಸ ಮುಖಗಳನ್ನ ಕರೆತರಬೇಕು ಅಂತ ನಿರ್ದೇಶಕರು ಹುಡುಕಾಟ ನಡೆಸುತ್ತಲೇ ಇರ್ತಾರೆ. ಸದ್ಯ ಈಗ ಕನ್ನಡದ ನಿರ್ದೇಶಕರೊಬ್ಬರು ಟಾಲಿವುಡ್ ನ ಮಹಾನಟಿಯನ್ನ ಕರೆತರಲು ಸಿದ್ದತೆ ನಡೆಸಿದ್ದಾರಂತೆ.

ಅಭಿಷೇಕ್ 4ನೇ ಚಿತ್ರಕ್ಕೆ ಮಹಾನಟಿ ನಾಯಕಿ:
ಅಭಿಷೇಕ್ ಅಂಬರೀಶ್ (Abhishek Ambareesh) ಅಭಿನಯದ ಮುಂದಿನ ಸಿನಿಮಾ ಅಂದರೆ ಅವ್ರ ನಾಲ್ಕನೇ ಸಿನಿಮಾ ಸೆಟ್ಟೇರಲು ಸಿದ್ದವಾಗಿದೆ...ಅಂಬರೀಶ್ ಹುಟ್ಟುಹಬ್ಬದ ವಿಶೇಷವಾಗಿ ಅಭಿಷೇಕ್ ಹೊಸ ಸಿನಿಮಾಗಳು ಅನೌನ್ಸ್ ಆಗಿದೆ. ಅದ್ರಲ್ಲಿ ಒಂದು ಚಿತ್ರಕ್ಕೆ ಟಾಲಿವುಡ್ ನ ಮಹಾನಟಿ ಕೀರ್ತಿ ಸುರೇಶ್ ಬರ್ತಾರಂತೆ ಅದು ನಾಯಕಿಯಾಗಿ ಅನ್ನೋದು ಸ್ಪೆಷಲ್. ಹೌದು ಅಯೋಗ್ಯ ಹಾಗೂ ಮದಗಜ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳ್ತಿರೋ ಅಭಿಷೇಕ್ ಅಂಬರೀಶ್ ಅಭಿನಯದ 4ನೇ ಸಿನಿಮಾ ಇದಾಗಿದ್ದು ಈ ಚಿತ್ರದಲ್ಲಿ ಕೀರ್ತಿ ಅವ್ರೇ

ಇದನ್ನೂ ಓದಿ: ಡಾ.ರಾಜ್‌ ಜೊತೆ ಸ್ಟಾರ್ ನಟಿ ಬಾಲ್ಯದ ಪೋಟೋ ವೈರಲ್; ಅಣ್ಣಾವ್ರ ಕುಟುಂಬದ ಜೊತೆ ನಂಟು!

ಹೀರೋಯಿನ್ ಅನ್ನೋ ಸುದ್ದಿ ಜೋರಾಗಿದೆ:
ಕೀರ್ತಿ ಸುರೇಶ್ ಅಭಿಮಾನಿಯಾಗಿರೋ ಮಹೇಶ್ ಕುಮಾರ್ ನಿರ್ದೇಶಕ ಮಹೇಶ್ ಕುಮಾರ್ ಸ್ಯಾಂಡಲ್ ವುಡ್ ನಲ್ಲಿ ಸಕ್ಸಸ್ ಫುಲ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಅಯೋಗ್ಯ ಹಾಗೂ ಮದಗಜ ಎರಡು ಚಿತ್ರಗಳು ಸೂಪರ್ ಹಿಟ್ ಆಗಿದ್ದು ಈಗ ಹ್ಯಾಟ್ರಿಕ್ ಬಾರಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗ್ತಿದ್ದು ನಿರ್ದೇಶಕ ಮಹೇಶ್ ಕುಮಾರ್ ಅವ್ರಿಗೆ ಕೀರ್ತಿ ಸುರೇಶ್ ಅವ್ರನ್ನ ಈ ಹಿಂದಿನ ಚಿತ್ರಗಳಿಗೆ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ರು ಆದ್ರೆ ಅದು ಆಗಿರಲಿಲ್ಲ. ಈಗ ಮತ್ತೊಮ್ಮೆ ಈ ಪ್ರಯತ್ನಕ್ಕೆ ಮುಂದಾಗಿದ್ದು ಅದನ್ನ ಸಕ್ಸಸ್ ಮಾಡಿಕೊಳ್ತಾರಾ ಅನ್ನೋದು ಎಲ್ಲರಲ್ಲಿರೋ ಕುತೂಹಲ.

ಅಕ್ಟೋಬರ್ ನಲ್ಲಿ ಸಿನಿಮಾ ಅದ್ದೂರಿ ಮಹೂರ್ತ:
ಸದ್ಯ ಸಿನಿಮಾ ಅನೌನ್ಸ್  ಮಾಡಿರೋ ನಿರ್ದೇಶಕರು ಪ್ರೀ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿದ್ದಾರೆ...ಇನ್ನು ಕೆಲವು ದಿನಗಳು ಎಲ್ಲಾ ರೀತಿಯ ತಯಾರಿ ಮಾಡಿಕೊಂಡು ಅಕ್ಟೋಬರ್ ಮೊದಲ ವಾರದಲ್ಲಿ ಸಿನಿಮಾ ಮಹೂರ್ತ ಪ್ಲಾನ್ ಮಾಡಿದ್ದು ಅದೇ ತಿಂಗಳಲ್ಲಿ ಚಿತ್ರೀಕರಣವನ್ನೂ ಶುರು ಮಾಡಲಿದೆ.

ಇದನ್ನೂ ಓದಿ: ಮಹಾನಟಿ ಕೀರ್ತಿಗೆ ಕೂಡಿ ಬಂದ ಕಂಕಣ ಭಾಗ್ಯ; ಮದುವೆ ಆಗ್ತಾ ಇರೋ ಹುಡುಗ ಯಾರು?

ಕಾಳಿ ಚಿತ್ರದಲ್ಲಿ ಅಭಿಷೇಕ್ ಬ್ಯುಸಿ:
ಸದ್ಯ ಅಭಿಷೇಕ್ ಅಂಬರೀಶ್ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದು ಇನ್ನು ಕೆಲವೇ ದಿನಗಳಲ್ಲಿ ಬ್ಯಾಡ್ ಮ್ಯಾನರ್ಸ್ ಶೂಟಿಂಗ್ ಕಂಪ್ಲೀಟ್ ಆಗಲಿದ್ದು ಅದಾದ ನಂತ್ರ ಹೆಬ್ಬುಲಿ ಸಿನಿಮಾ ನಿರ್ದೇಶಕ ಕೃಷ್ಣ ಅವ್ರ ಕಾಳಿ ಚಿತ್ರತಂಡ ಸೇರಿಕೊಳ್ಳಲಿದ್ದಾರೆ..ಕಾಳಿ ಶೂಟಿಂಗ್ ಮುಗಿಸಿದ ನಂತ್ರ ಮಹೇಶ್ ಕುಮಾರ್ ನಿರ್ದೇಶನ ಚಿತ್ರತಂಡ ಸೇರಲಿದ್ದಾರೆ ಅಭಿಷೇಕ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಒಂದೇ ದಿನದಲ್ಲಿ ದಾಖಲೆ ಬರೆದ ಸುದೀಪ್​ Mark ಟ್ರೈಲರ್​: ಇಷ್ಟೊಂದು ವ್ಯೂವ್ಸ್​ ಆಗಿದ್ದು ನಿಜನಾ? ಏನಿದು ಚರ್ಚೆ?
ಸಲಗ Vs ರೂಲರ್: ಅಳಿದು ಉಳಿದವರ ಲ್ಯಾಂಡ್ ಲಾರ್ಡ್ ದುನಿಯಾದಲ್ಲಿ ಶೆಟ್ಟರ ವಾರ್!