Latest Videos

ಅವತ್ತು ತಾಳ್ಮೆಯಿಂದ ಇದ್ದಿದ್ದಕ್ಕೆ ಇವತ್ತು ಉತ್ತರ ಸಿಕ್ಕಿದೆ; ಉಮಾಪತಿ ಗೌಡ ಸ್ಟೇಟಸ್ ಏನ್ ಹೇಳ್ತಿದೆ..?

By Shriram BhatFirst Published Jun 17, 2024, 3:15 PM IST
Highlights

ಉಮಾಪತಿ ಗೌಡ 'ಅವತ್ತು ತಾಳ್ಮೆಯಿಂದ ಇದ್ದಿದ್ದಕ್ಕೆ ಇವತ್ತು ಉತ್ತರ ಸಿಕ್ಕಿದೆ' ಎಂದು ಬರೆದುಕೊಂಡಿದ್ದಾರೆ. ದರ್ಶನ್ ನಟನೆಯ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಗೌಡ ಇತ್ತೀಚೆಗೆ ಯಶಸ್ಸು ಕಂಡಿದ್ದ ದರ್ಶನ್ ನಟನೆಯ 'ಕಾಟೇರ' ಚಿತ್ರದ ಕಥೆಯ ಬಗ್ಗೆ..

ರಾಬರ್ಟ್ ಚಿತ್ರದ ಸಕ್ಸಸ್ ಬಳಿಕ ನಟ ದರ್ಶನ್ (Actor Darshan) ಹಾಗೂ ನಿರ್ಮಾಪಕ ಉಮಾಪತಿ ಗೌಡ (Umapathy Gowda) ನಡುವೆ ಕಥೆಯ ವಿಷಯಕ್ಕೆ ನಡೆದಿದ್ದ ಜಟಾಪಟಿ ಬಹುತೇಕರಿಗೆ ಗೊತ್ತಿದೆ. ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಆರೋಪ ಸಾಬೀತಾದರೆ ನಟ ದರ್ಶನ್ ಕಾನೂನಿನ ಪ್ರಾಕರ ಕಠಿಣ ಶಿಕ್ಷೆ ಎದುರಿಸಲಿದ್ದಾರೆ. ಈ ವಿದ್ಯಮಾನ ನಡೆದ ಬೆನ್ನಲ್ಲೇ ಬಹಿರಂಗವಾಗಿ ಏನೂ ಹೇಳಿಕೆ ನೀಡದಿರುವ ನಿರ್ಮಾಪಕ ಉಮಾಪತಿ ಗೌಡ ಅವರು ತಮ್ಮ ಸ್ಟೇಟಸ್‌ನಲ್ಲಿ, ಘಟನೆಗೆ ಪ್ರತಿಕ್ರಿಯೆ ಎಂಬಂತೆ ಸ್ಟೇಟಸ್ ಹಾಕಿಕೊಂಡಿದ್ದಾರೆ. 

ಈ ಬಗ್ಗೆ ಉಮಾಪತಿ ಗೌಡ 'ಅವತ್ತು ತಾಳ್ಮೆಯಿಂದ ಇದ್ದಿದ್ದಕ್ಕೆ ಇವತ್ತು ಉತ್ತರ ಸಿಕ್ಕಿದೆ' ಎಂದು ಬರೆದುಕೊಂಡಿದ್ದಾರೆ. ದರ್ಶನ್ ನಟನೆಯ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಗೌಡ ಇತ್ತೀಚೆಗೆ ಯಶಸ್ಸು ಕಂಡಿದ್ದ ದರ್ಶನ್ ನಟನೆಯ 'ಕಾಟೇರ' ಚಿತ್ರದ ಕಥೆಯ ಬಗ್ಗೆ ಮಾತನಾಡಿದ್ದರು. 'ಕಾಟೇರ ಕತೆ ಕತೆ ನನ್ನದು ಎಂದಿದ್ದರು. ಅದಕ್ಕೆ ಕಾಟೇರ ಸಕ್ಸಸ್ ಮೀಟಲ್ಲಿ ದರ್ಶನ್ ಉಮಾಪತಿಗೆ 'ತಗಡೆ, ಯಾವಾಗ್ಲೂ ನನ್ ಹತ್ರಾನೆ ಯಾಕೆ ಗುಮ್ಮಿಸ್ಕೋತೀಯಾ' ಎಂದು ಮಾತನಾಡಿದ್ದರು ದರ್ಶನ್. 

ಒಬ್ಬ ನನ್‌ ಹಾರ್ಟ್‌ ಚೂರ್ ಮಾಡಿದ, ಇನ್ನೊಬ್ಬ ಬಂದು ಎಲ್ಲಾ ಸರಿ ಮಾಡಿದ: ದೀಪಿಕಾ ಪಡುಕೋಣೆ ಉವಾಚ!

'ಹೌದು ನಾನು ತಗಡೆ, ಆದ್ರೆ ಚಿನ್ನದ ತಗಡಾಗೋ ಸಮಯಾನೂ ಬರುತ್ತೆ..'ಎಂದು ತಾಳ್ಮೆ ಕಳೆದುಕೊಳ್ಳದೆ ಮಾತನಾಡಿದ್ದ ಉಮಾಪತಿ,
ಅವರು  ಮಾತಾಡಿ ದೊಡ್ಡವರಾಗಿದ್ದಾರೆ, ಆಗಲಿ' ಎಂದು ಸುಮ್ಮನಾಗಿದ್ದರು. ಉಮಾಪತಿ ಇದೀಗ ತಮ್ಮ ಇನ್ಸ್ಟಾ ಸ್ಟೊರಿ ಮೂಲಕ ದರ್ಶನ್ ಅವರಿಗೆ ಉತ್ತರ ಕೊಟ್ಟಿದ್ದಾರೆ. 'ವಿಷ್ಣುವಿನ ತಾಳ್ಮೆ ಇರಲಿ, ಆದ್ರೆ ನರಸಿಂಹನ ಕೋಪ ಮರೆಯಬೇಡ'  ಎಂದಿರವ ವೀಡಿಯೋವನ್ನು ಹಂಚಿಕೊಂಡಿದ್ದಾರೆ ನಿರ್ಮಾಪಕ ಉಮಾಪತಿ. ರಾಬರ್ಟ್ ಚಿತ್ರದ ನಂತರ ಕೆಲ ಘಟನೆಗಳಿಂದ  ದರ್ಶನ್ ಉಮಾಪತಿ ನಡುವೆ ವಿವಾದ ಸೃಷ್ಟಿಯಾಗಿ ದೂರವಾಗಿದ್ದರು.

ನನ್ನ ಹೆಸರಿಗೆ ತಾತನ ಹೆಸರು ಸೇರಿಸಿಕೊಂಡು ಈ ಲೆಗ್ಗಸಿಯನ್ನು ಗೌರವಿಸುತ್ತಿದ್ದೇನೆ: ಧೀರೆನ್ ಆರ್‌ ರಾಜ್‌ಕುಮಾರ್

ಸದ್ಯ ದರ್ಶನ್ (Actor Darshan), ಗೆಳತಿ ಪವಿತ್ರಾ ಗೌಡ (Pavithra Gowda) ಸೇರಿದಂತೆ ಹದಿನೇಳು ಆರೋಪಿಗಳು ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸಿನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಒಂಬತ್ತು ದಿನಗಳ ವಿಚಾರಣೆ ನಡೆಯಲಿದ್ದು ಅದರಲ್ಲಿ ಈಗಾಗಲೇ ಆರು ದಿನಗಳನ್ನು ಕಳೆದಿದ್ದು, ಏಳನೇ ದಿನದ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಬಳಿಕ ಎಲ್ಲ ಆರೋಪಿಗಳನ್ನೂ ಕೋರ್ಟ್‌ಗೆ ಹಾಜರು ಪಡಿಸಲಾಗುವುದು. ಆ ಬಳಿಕ ಆರೋಪ ಸಾಬೀತಾದರೆ ಕಾನೂನಿನ ಪ್ರಕಾರ ಮುಂದಿನ ಶಿಕ್ಷೆ ವಿಧಿಸಲಾಗುವುದು. ಇದು ಈ ಕೊಲೆ ಕೇಸಿಗೆ ಸಂಬಂಧಿಸಿದ ಸದ್ಯ ಹಾಗು ಮುಂದಿನ ನಡೆಯ ಮಾಹಿತಿ. 

ಹ್ಯಾಪಿ ಫಾದರ್ಸ್ ಡೇ ಅಪ್ಪಾ, ಯೂ ಆರ್ ಫಾರ್ ಎವರ್ ಮೈ ಹೀರೋ; ವಿನೀಶ್ ತೂಗುದೀಪ

ಇನ್ನು, ರೇಣುಕಾ ಸ್ವಾಮಿ ಹತ್ಯೆ ಆರೋಪ ಎದುರಿಸುತ್ತಿರುವ ನಟಿ ಪವಿತ್ರಾ ಗೌಡ ಹಾಗು ನಟ ದರ್ಶನ್ ಸೇರಿದಂತೆ ಹದಿನೇಳು ಜನರು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಮೊದಲು ಐದು ದಿನಗಳ ಕಾಲ ವಿಚಾರಣೆ ನಡಸಲು ಹೇಳಿದ್ದ ನ್ಯಾಯಾಲಯ ಬಳಿಕ ಮತ್ತೆ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿ ಮುಂದುವರೆಸಿದ್ದು, ಬಳಿಕ ಅಗತ್ಯವಿರುವ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎನ್ನಲಾಗಿದೆ. 

ಮೆಟ್ಟು ಮೇಲ್ಗಡೆ ಇಟ್ಟು ಇಳೀರಿ, ಗಂಗಮ್ಮ ತಾಯಿಗ್ ಹಿಂಗೆಲ್ಲಾ ಮಾಡ್ಬಾರ್ದು; ಶಾಕ್ ಆಗಿದ್ರಂತೆ ಡಾ ರಾಜ್‌!

click me!