
ಮೈಸೂರು (ಅ.16): ನಾನು ದೈವವನ್ನ ನಂಬುವಂತವನು. ದೈವದ ಅನುಮತಿಯನ್ನ ಪಡೆದು ಸಿನಿಮಾ ಮಾಡಿದ್ದೇನೆ ಎಂದು ಮೈಸೂರಿನಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು. ನಂತರ ಮಾತನಾಡಿದ ಅವರು, ನಾಡಿನ ಜನತೆ ತುಂಬಾ ಅದ್ಬುತವಾತ ಯಶಸ್ಸು ಕೊಟ್ಟಿದ್ದಾರೆ. ಗಳಿಕೆಯ ಬಗ್ಗೆ ನಾನು ಮಾತನಾಡುವುದಿಲ್ಲ. ಕನ್ನಡಿಗರಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದರು. ದೈವರಾದಕರು ಸಿನಿಮಾ ಬಗ್ಗೆ ವಿರೋಧ ವಿಚಾರವಾಗಿ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದುಕೊಂಡಿದ್ದೇನೆ. ದೈವ ದೇವರ ವಿಚಾರಗಳನ್ನ ಸಿನಿಮಾದಲ್ಲಿ ಮಾತ್ರ ಮಾತನಾಡುತ್ತೇನೆ. ಯಾರು ಏನು ಬೇಕಾದರೂ ಮಾತನಾಡಲಿ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ.
ಇಡೀ ತಂಡದ ಮೇಲೆ ದೈವದ ಆಶೀರ್ವಾದ ಇದೆ. ನಾನು ದೈವವನ್ನ ನಂಬುತ್ತೇನೆ ಆರಾಧನೆ ಮಾಡುತ್ತೇನೆ. ಎಲ್ಲಿಯೂ ತಪ್ಪುಗಳು ಆಗದಂತೆ ಹಿರಿಯರ ಮಾರ್ಗದರ್ಶನ ಪಡೆದು ಸಿನಿಮಾ ಮಾಡಿದ್ದೇನೆ. ನಾನು ಹೊಸಬನಲ್ಲ. ದೈವದ ಸಿನಿಮಾ ಮಾಡುವವರು ಸರಿಯಾದ ರೀತಿಯಲ್ಲಿ ಸಿನಿಮಾ ಮಾಡಬೇಕು. ಕುಂದಾಪುರದ ಕೆರಾಡಿ ಗ್ರಾಮದಿಂದ ಬಂದು ಜನರಿಗೆ ರೀಚ್ ಆಗುವ ರೀತಿ ಸಿನಿಮಾ ಮಾಡುತ್ತಿದ್ದೇನೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನಿಮಾಗೆ ಒಳ್ಳೆಯ ಹೆಸರು ಬಂದಿದೆ. ಇದರಿಂದ ತುಂಬಾ ಖುಷಿಯಾಗಿದೆ. ಕಾಂತಾರ ನೆಕ್ಸ್ಟ್ ಚಾಪ್ಟರ್ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ನನ್ನ ಮುಂದಿನ ಚಿತ್ರ ಜೈ ಹನುಮಾನ್. ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಅಮಿತಾಭ್ ಬಚ್ಚನ್ ಭೇಟಿಯಾದ ವಿಚಾರವಾಗಿ ಕನ್ನಡದಲ್ಲಿ ಅಣ್ಣಾವ್ರು ಹೇಗೊ ಅದೇ ರೀತಿ ಬಾಲಿವುಡ್‌ನಲ್ಲಿ ಅಮಿತಾಭ್ ಬಚ್ಚನ್. ಅಣ್ಣಾವ್ರನ್ನ ಯಾವ ರೀತಿ ನೋಡುತ್ತೇವೆ ಅದೇ ರೀತಿ ಅಮಿತಾಭ್ ಬಚ್ಚನ್ ಅವರನ್ನ ಅಲ್ಲಿಯ ಜನ ನೋಡುತ್ತಾರೆ. ಅವರು ವಿಶೇಷ ವ್ಯಕ್ವಿತ್ವವನ್ನ ಹಂಚಿಕೊಂಡಿದ್ದಾರೆ. ಕಾಂತಾರಕ್ಕೆ ನಾನು ಚಿರ ಋಣಿಯಾಗಿದ್ದೇನೆ ಎಂದು ತಿಳಿಸಿದರು. ಫ್ಯಾನ್ ವಾರ್ ವಿಚಾರವಾಗಿ, ಸಲಹೆ ಕೊಡುವುಷ್ಷು ದೊಡ್ಡವನು ನಾನಲ್ಲ. ಎಲ್ಲ ನಟರನ್ನ ಅಭಿಮಾನಿಯಾಗಿ ನೋಡುತ್ತೇನೆ. ಕನ್ನಡ ಚಿತ್ರರಂಗದ ಬಗ್ಗೆ ಎಲ್ಲರೂ ಹೆಮ್ಮೆ ಪಡುವ ಕಾಲ ಬಂದಿದೆ ಎಂದರು.
ದೈವದ ರೀತಿ ಚಿತ್ರ ಮಂದಿರದ ಮುಂದೆ ನಟನೆ ಮಾಡುತ್ತಿರುವ ವಿಚಾರವಾಗಿ, ಯಾರು ಕೂಡ ದೈವದ ರೀತಿ ನಟನೆ ಮಾಡಬಾರದು. ಶ್ರದ್ಧೆ ಭಕ್ತಿಯಿಂದ ಸಿನಿಮಾ ಮಾಡಿರುತ್ತೇವೆ. ಇದರಿಂದ ನನಗೂ ಸಹ ಬೇಜರಾಗಿದೆ. ಯಾರೂ ಕೂಡ ಈ ರೀತಿ ಮಾಡಬೇಡಿ. ಇದರಿಂದ ಬೇಸರವಾಗುತ್ತೆ ಎಂದರಲ್ಲದೇ ಲೆಕ್ಕಚಾರದ ವಿಚಾರವಾಗಿ ನಾನು ಮಾತನಾಡುವುದಿಲ್ಲ. ನಾನು ಸಿನಿಮಾ ಡೈರೆಕ್ಟರ್ ಅಷ್ಟೇ. ನಿರ್ಮಾಪಕ ವಿಜಯ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಚಾಮುಂಡಿ ಬೆಟ್ಟದಲ್ಲಿ ರಿಷಬ್ ಶೆಟ್ಟಿ ತಿಳಿಸಿದರು. ಮುಖ್ಯವಾಗಿ ಚಾಮುಂಡಿ ತಾಯಿಯ ಗರ್ಭಗುಡಿಯಲ್ಲಿ ನಿಂತು ನಾಲ್ಕು ನಿಮಿಷ ರಿಷಬ್ ಶೆಟ್ಟಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ನಂತರ ಹುಂಡಿಗೆ ಕಾಣಿಕೆ ಹಾಕಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿ ಜೊತೆ ಫೋಟೊ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳ ಜೊತೆ ಫೋಟೋಗೆ ರಿಷಬ್ ಶೆಟ್ಟಿ ಪೋಸ್ ನೀಡಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.