ಸಿನಿಮಾ ಶೂಟಿಂಗ್ ನಡುವೆ ರಾಜು ತಾಳಿಕೋಟೆ ನಿಧನ, ಆಸ್ಪತ್ರೆ ಮುಂದೆ ಶೈನ್ ಶೆಟ್ಟಿ ಕಣ್ಣೀರು

Published : Oct 13, 2025, 08:18 PM IST
Shie Shetty raju Talikote

ಸಾರಾಂಶ

ಸಿನಿಮಾ ಶೂಟಿಂಗ್ ನಡುವೆ ರಾಜು ತಾಳಿಕೋಟೆ ನಿಧನ, ಆಸ್ಪತ್ರೆ ಮುಂದೆ ಶೈನ್ ಶೆಟ್ಟಿ ಕಣ್ಣೀರು ಹಾಕಿದ್ದಾರೆ. ತಮ್ಮದೇ ಸಿನಿಮಾದಲ್ಲಿ ನಟಿಸುತ್ತಿದ್ದ ರಾಜು ತಾಳಿಕೋಟೆ ಅಗಲಿಕೆ ನಾಯಕ ನಟ ಶೈನ್ ಶೆಟ್ಟಿಗೆ ತೀವ್ರ ನೋವುಂಟು ಮಾಡಿದೆ.

ಉಡುಪಿ (ಅ.13) ಹಾಸ್ಯನಟ ರಾಜು ತಾಳಿಕೋಟ ನಿಧನ ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿಗೆ ತೀವ್ರ ನೋವುಂಟು ಮಾಡಿದೆ. ಶೈನ್ ಶೆಟ್ಟಿ ನಾಯಕ ನಟನಾಗಿ ಕಾಣಿಸಿಕೊಂಡಿರುವ ಸಿನಿಮಾ ಶೂಟಿಂಗ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾಜು ತಾಳಿಕೋಟೆಯನ್ನು ಉಳಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ ನಟ ಶೈನ್ ಶೆಟ್ಟಿ ಇದೀಗ ಮಣಿಪಾಲ ಆಸ್ಪತ್ರೆ ಮುಂದೆ ಕಣ್ಣೀರು ಹಾಕಿದ್ದಾರೆ. ನೆಚ್ಚಿನ ನಟ ಹಾಗೂ ಆತ್ಮೀಯರಾಗಿದ್ದ ರಾಜು ತಾಳಿಕೋಟೆ ಕಳೆದುಕೊಂಡ ನೋವಿನಲ್ಲಿ ಶೈನ್ ಶೆಟ್ಟಿ ಕಣ್ಣೀರಿಟ್ಟಿದ್ದಾರೆ.

ಬಿಗ್ ಬಾಸ್ ಆವೃತ್ತಿಯಿಂದ ಆತ್ಮೀಯ

ಬಿಗ್ ಬಾಸ್ 7ನೇ ಆವೃತ್ತಿಯಲ್ಲಿ ಶೈನ್ ಶೆಟ್ಟಿ ಹಾಗೂ ರಾಜು ತಾಳಿಕೋಟೆ ಜೊತೆಯಾಗಿ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಸಿದ್ದರು. ಬಿಗ್ ಬಾಸ್ ಬಳಿಕವೂ ಇವರ ಸ್ನೇಹ ಮುಂದುವರಿದಿತ್ತು. ಈ ಕುರಿತು ನೋವಿನಲ್ಲಿ ಶೈನ್ ಶೆಟ್ಟಿ ಮಾತನಾಡಿದ್ದಾರೆ. ರಾಜು ತಾಳಿಕೋಟೆ ತುಂಬಾ ತಮಾಷೆ ವ್ಯಕ್ತಿ. ಎಲ್ಲರನ್ನು ಪ್ರೀತಿಸುತ್ತಾ, ನಗಿಸುತ್ತಾ ಇರುವ ವ್ಯಕ್ತಿತ್ವ ಅವರದ್ದು. ಸಿನಿಮಾ ನಿರ್ಮಾಣ ಕಾಲ ಕೂಡಿ ಬಂದಾಗ ರಾಜು ತಾಳಿಕೋಟೆಯನ್ನು ಸಂಪರ್ಕ ಮಾಡಿದ್ದೆ. ನನ್ನ ಸಿನಿಮಾಗೆ ಮೊದಲು ಆಯ್ಕೆ ಮಾಡಿದ್ದು ರಾಜು ತಾಳಿಕೋಟೆ ಅವರನ್ನು ಎಂದು ಶೈನ್ ಶೆಟ್ಟಿ ಹೇಳಿದ್ದಾರೆ.

ರಾಜು ತಾಳಿಕೋಟೆಗಾಗಿ ಡೈಲಾಗ್

ರಾಜು ತಾಳಿಕೋಟೆಗಾಗಿ ನನ್ನ ಸಿನಿಮಾದಲ್ಲಿ ಪಾತ್ರ ಹಾಗೂ ಡೈಲಾಗ್ ಬರೆದಿದ್ದೇವೆ. ಹೆಬ್ರಿಯಲ್ಲಿ ಮೂರು ದಿನದ ಶೂಟಿಂಗ್ ಕೂಡ ಮುಗಿಸಿದ್ದೆವು. ಉಡುಪಿ ಮಂಗಳೂರು ಸುತ್ತಾಡಲು ಮೀನು ತಿನ್ನಲು ಒಂದು ದಿನ ಮೊದಲೇ ಬಂದಿದ್ದರು ಎಂದು ಶೈನ್ ಶೆಟ್ಟಿ ಹೇಳಿದ್ದಾರೆ. ಗೆಳೆಯರ ಜೊತೆ ಬೇರೆ ಬೇರೆ ಜಾಗ ಸುತ್ತಾಡಿದ್ದಾರೆ. ರಾತ್ರಿ 11 ಗಂಟೆಗೆ ನಮ್ಮ ತಂಡದ ಜೊತೆಗೂ ಮಾತನಾಡಿದ್ದಾರೆ ಎಂದು ಶೈನ್ ಶೆಟ್ಟಿ ಹೇಳಿದ್ದಾರೆ.

ತಡ ರಾತ್ರಿ ಫೋನ್ ಮಾಡಿದ್ದ ರಾಜು ತಾಳಿಕೋಟೆ

ರಾತ್ರಿ 11.59ಕ್ಕೆ ರಾಜು ತಾಳಿ ಕೋಟೆ ಎದೆನೋವು ಎಂದು ಫೋನಿ ಮಾಡಿದ್ದಾರೆ. ಹೀಗಾಗಿ ತಕ್ಷಣವೇ ನಮ್ಮ ತಂಡ ರಾಜು ತಾಳಿಕೋಟೆಯನ್ನು ಹೆಬ್ರಿ ಹೆಲ್ತೆ ಕೇರ್ ಆಸ್ಪತ್ರೆಗೆ ದಾಖಲಿಸಿದ್ದೇವು. ಆದರೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ನೇರವಾಗಿ ಮಣಿಪಾಲ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ರಾತ್ರಿಯೇ ಕುಟುಂಬಸ್ಥರಿಗೂ ಮಾಹಿತಿ ನೀಡಿದ್ದೇವೆ. ರಾಜು ತಾಳಿಕೋಟೆ ಕುಟುಂಬಸ್ಥರು ಆಗಮಿಸಿದ್ದರು ಎಂದು ನಡೆದ ಘಟನೆಯನ್ನು ಶೈನ್ ಶೆಟ್ಟಿ ವಿವರಿಸಿದ್ದಾರೆ.

40 ದಿನದ ಶೂಟಿಂಗ್ ಫಿಕ್ಸ್ ಆಗಿತ್ತು

ರಾಜು ತಾಳಿಕೋಟೆ ಪ್ರಮುಖ ಪಾತ್ರ ಮಾಡುತ್ತಿದ್ದರು. 40 ದಿನದ ಶೂಟಿಂಗ್ ಶೆಡ್ಯೂಲ್ ಕೂಡ ಫಿಕ್ಸ್ ಮಾಡಲಾಗಿತ್ತು. ಅತೀವ ಉತ್ಸಾಹದಲ್ಲಿ ರಾಜುತಾಳಿ ಕೋಟೆ ಸಿನಿಮಾ ತಂಡದ ಜೊತೆ ಕೂಡಿಕೊಂಡಿದ್ದರು. ಇದೀಗ ಇಲ್ಲ ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ. ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ನಿನಗೋಸ್ಕರ ಈ ಸಿನಿಮಾ ಮಾಡುತ್ತಿದ್ದೇನೆ ಎಂದು ಹಲವು ಬಾರಿ ಹೇಳಿದ್ದರು ಎಂದು ಶೈನ್ ಶೆಟ್ಟಿ ಮಾತುಕತೆ ನೆನೆಪಿಸಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ