Kantara ಹಾಡಿನ ವಿವಾದ; ಯೂಟ್ಯೂಬ್​, ಮ್ಯೂಸಿಕ್ ಆ್ಯಪ್​ಗಳಿಂದ 'ವರಾಹ ರೂಪಂ..' ಹಾಡು ಡಿಲೀಟ್

By Shruthi Krishna  |  First Published Nov 12, 2022, 4:34 PM IST

ಕಾಂತಾರ ಸಿನಿಮಾದ ವರಾಹ ರೂಪಮ್ ಹಾಡನ್ನು ಎಲ್ಲಾ ಮ್ಯೂಸಿಕ್ ಆಪ್ ಮತ್ತು ಯೂಟ್ಯೂಬ್ ನಿಂದ ಡಿಲೀಟ್ ಮಾಡಲಾಗಿದೆ. 


ರಿಷಿಬ್ ಶೆಟ್ಟಿ ನಿರ್ದೇಶನ ಮಾಡಿ ನಟಿಸಿರುವ ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ದೇಶ ವಿದೇಶಗಳಲ್ಲಿ ಕಾಂತಾರ ಸಿನಿಮಾದ ಹವಾ ಜೋರಾಗಿದೆ. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ಸಿನಿಮಾದ ಗೆಲುವಿನ ಜೊತೆಗೆ ವಿವಾದ ಕೂಡ ಅಷ್ಟೆ ಸದ್ದು ಮಾಡಿತ್ತು. ಕಾಂತಾರ ಸಿನಿಮಾದ ಸೂಪರ್ ಹಿಟ್ 'ವರಾಹ ರೂಪಮ್..' ಹಾಡನ್ನು ಮಲಯಾಳಂ ಆಲ್ಬಂ ಸಾಂಗ್‌ನಿಂದ ಕಾಪಿ ಮಾಡಿದ್ದಾರೆ ಎನ್ನುವ ಆರೋಪ ಎದುರಾಗಿತ್ತು. ಮಲಯಾಳಂನ ಖ್ಯಾತ ಮ್ಯೂಸಿಕ್ ಬ್ಯಾಂಡ್ ‘ತೈಕುಡಂ ಬ್ರಿಡ್ಜ್’ ಅವರ ನವರಸಂ ಹಾಡನ್ನು ಕದಿಯಲಾಗಿದೆ ಎಂದು ಆರೋಪ ಮಾಡಿ ದೂರು ಸಹ ನೀಡಿದ್ದರು. ವಿಚಾರಣೆ ನಡೆಸಿದ ಕೇರಳದ ಸ್ಥಳಿಯ ಕೋರ್ಟ್ ಈ ಹಾಡನ್ನು ಪ್ರಸಾರ ಮಾಡದಂತೆ ಆದೇಶ ಹೊರಡಿಸಿತ್ತು. 

ಕೇರಳ ಕೋರ್ಟ್ ಆದೇಶ ಹೊರಡಿಸಿ ಕೆಲವು ದಿನಗಳ ಬಳಿಕ ವರಾಹ ರೂಪಮ್ ಹಾಡನ್ನು ಎಲ್ಲಾ ಮ್ಯೂಸಿಕ್ ಆಪ್ ಮತ್ತು ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿದೆ. ವರಾಹ ರೂಪಂ.. ಹಾಡಿಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದರು. ಈ ಹಾಡನ್ನು ಹೊಂಬಾಳೆ ಫಿಲ್ಮ್ಸ್​ ಯೂಟ್ಯೂಬ್ ಚಾನೆಲ್​ಗಳಲ್ಲಿ ರಿಲೀಸ್ ಮಾಡಲಾಗಿತ್ತು. ಈಗ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್​ನಿಂದ ಈ ಹಾಡನ್ನು ಡಿಲೀಟ್ ಮಾಡಲಾಗಿದೆ. 

Tap to resize

Latest Videos

ಕೋರ್ಟ್ ಹೇಳಿದ್ದೇನು?

ಕೇರಳದ ಕೋಝಿಕ್ಕೋಡ್‌ ಕೋರ್ಟ್‌, ಚಿತ್ರದ ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ಅಮೇಜಾನ್‌, ಯೂಟ್ಯೂಬ್‌, ಸ್ಫೋಟಿಫಿ, ವಿಂಕ್‌ ಮ್ಯೂಸಿಕ್‌, ಜಿಯೋ ಸಾವನ್‌ ಹಾಗೂ ಇತರ ಮ್ಯೂಸಿಕ್‌ ಆಪ್‌ಗಳ ವೇದಿಕೆಗಳಿಗೆ ವರಾಹ ರೂಪಂ ಹಾಡನ್ನು ಪ್ಲೇ ಮಾಡದಂತೆ ತಡೆಯಾಜ್ಞೆ ನೀಡಿತ್ತು. ಇದನ್ನು ಪ್ಲೇ ಮಾಡುವುದಾದರೆ ಅದಕ್ಕೆ ತೈಕುಡಂ ಬ್ರಿಡ್ಜ್‌ನ ಅನುಮತಿ ಬೇಕು ಎಂದು ಕೋರ್ಟ್‌ ತಿಳಿಸಿತ್ತು. ತೈಕುಡಂ ಬ್ರಿಡ್ಜ್‌ ಬ್ಯಾಂಡ್‌, ಸುಪ್ರೀಂ ಕೋರ್ಟ್‌ ಮ್ಯೂಸಿಕ್‌ ಅಟಾರ್ನಿ ಸತೀಶ್‌ ಮೂರ್ತಿ ಅವರಿಂದ ತಡೆಯಾಜ್ಞೆ ಅರ್ಜಿಯನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಿತ್ತು.

Kantara; ರಶ್ಮಿಕಾ ಮಂದಣ್ಣ 'ಪುಷ್ಪ' ಚಿತ್ರದ ಕಲೆಕ್ಷನ್ ಬ್ರೇಕ್ ಮಾಡಿದ ರಿಷಬ್ ಶೆಟ್ಟಿ ಸಿನಿಮಾ

ಹಾಡಿನ ವಿವಾದ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು? 

ಇತ್ತೀಚಿಗಷ್ಟೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ನಟ ರಿಷಬ್ ಶೆಟ್ಟಿ ಹಾಡಿನ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. 'ಸಿನಿಮಾದ ಜನಪ್ರಿಯ ವರಾಹ ರೂಪಂ... ನಮ್ಮ ಸಂಗೀತ ನಿರ್ದೇಶಕರು ಸ್ವಂತ ಮಾಡಿದ ಹಾಡು ಅದು. ಸಿನಿಮಾ ಹಿಟ್‌ ಆದಾಗ ಇಂಥ ಆರೋಪಗಳು ಬರುವುದು ಸಹಜ. ಈ ವಿವಾದಕ್ಕೆ ನಮ್ಮ ನಿರ್ಮಾಪಕರು ಹಾಗೂ ಸಂಗೀತ ನಿರ್ದೇಶಕರು ಸೂಕ್ತ ಉತ್ತರ ನೀಡುತ್ತಾರೆ' ಎಂದಿದ್ದರು. 

ದಲಿತ ಸಮುದಾಯ ಅವಹೇಳನ: ‘ಕಾಂತಾರ’ ಚಿತ್ರಪ್ರದರ್ಶನ ಸ್ಥಗಿತಕ್ಕೆ ಜಿಲ್ಲಾ ಮ್ಯಾಜಿಸ್ಪ್ರೇಟ್‌ಗೆ ಮನವಿ

ಕಾಂತಾರ ಬಗ್ಗೆ, 

ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಟ ಕಿಶೋರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೂ ನಾಯಕಿಯಾಗಿ ಸಪ್ತಮಿ ಗೌಡ ಬಣ್ಣ ಹಣ್ಣ ಹಚ್ಚಿದ್ದಾರೆ. ಅಚ್ಯುತ್ ಕುಮಾರ್ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅನೇಕ ರಂಗಭೂಮಿ ಕಲಾವಿದರು ನಟಿಸಿದ್ದಾರೆ.  ಪ್ರತಿಯೊಂದು ಪಾತ್ರಗಳು ಸಹ ಪ್ರೇಕ್ಷಕರ ಹೃದಯ ಗೆದ್ದಿವೆ. ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿಬಂದಿದೆ.  

click me!