ಕಾಂತಾರ ಸಿನಿಮಾ ಮತ್ತೊಂದು ಹಿಟ್ ಸಿನಿಮಾದ ದಾಖಲೆ ಪುಡಿ ಪುಡಿ ಮಾಡಿದೆ. ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ನಟನೆಯ ತೆಲುಗಿನ ಪುಷ್ಪ ಸಿನಿಮಾದ ಕಲೆಕ್ಷನ್ ಅನ್ನು ರಿಷಬ್ ಶೆಟ್ಟಿ ಸಿನಿಮಾ ಬ್ರೇಕ್ ಮಾಡಿದೆ.
ಕಾಂತಾರ ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಈಗಾಗಲೇ ದೇಶದಾದ್ಯಂತ ಸದ್ದು ಮಾಡುತ್ತಿರುವ ಕಾಂತಾರ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈಗಲೂ ಕಾಂತಾರ ಸಿನಿಮಾ ಅನೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲೂ ಸಿನಿಮಾಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಕಾಂತಾರ ಸಿನಿಮಾ 350 ಕೋಟಿ ಕಲೆಕ್ಷನ್ ಮಾಡಿದೆ ಎನ್ನುವ ವರದಿಯಾಗಿದೆ. ಸದ್ಯ ರಿಷಬ್ ಶೆಟ್ಟಿ ಸಿನಿಮಾ 400 ಕೋಟಿಯತ್ತ ಮುನ್ನುಗ್ಗುತ್ತಿದೆ.
ಸದ್ಯ ಕಾಂತಾರ ಸಿನಿಮಾ ಮತ್ತೊಂದು ಹಿಟ್ ಸಿನಿಮಾದ ದಾಖಲೆ ಪುಡಿ ಪುಡಿ ಮಾಡಿದೆ. ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ನಟನೆಯ ತೆಲುಗಿನ ಪುಷ್ಪ ಸಿನಿಮಾದ ಕಲೆಕ್ಷನ್ ಅನ್ನು ರಿಷಬ್ ಶೆಟ್ಟಿ ಸಿನಿಮಾ ಬ್ರೇಕ್ ಮಾಡಿದೆ. ಪುಷ್ಪ ಚಿತ್ರದ ವರ್ಲ್ಡ್ ವೈಡ್ ಗಳಿಕೆಯನ್ನು ಕನ್ನಡದ ಕಾಂತಾರ ಹಿಂದಿಕ್ಕಿದೆ. ಪುಷ್ಪ ಸಿನಿಮಾದ ಕಲೆಕ್ಷನ್ ಬ್ರೇಕ್ ಮಾಡಿ 400 ಕೋಟಿಯತ್ತ ನುಗ್ಗುತ್ತಿದೆ ರಿಷಬ್ ಶೆಟ್ಟಿ ಸಿನಿಮಾ. ಅಂದಹಾಗೆ ಪುಷ್ಪ ಸಿನಿಮಾ ವರ್ಲ್ಡ್ ವೈಡ್ 350 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದೀಗ ಪುಷ್ಪಕ ಕಲೆಕ್ಷನ್ ಅನ್ನು ಬ್ರೇಕ್ ಮಾಡಿದೆ ಕಾಂತಾರ. ಇನ್ನು ಬಾಲಿವುಡ್‌ನಲ್ಲೇ ಸಿನಿಮಾ ಬರೋಬ್ಬರಿ 70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸದ್ಯದಲ್ಲೇ ಸಿನಿಮಾ 100 ಕೋಟಿ ರೂ. ಕ್ಲಬ್ ಸೇರುವ ಸಾದ್ಯತೆ ಇದೆ.
ಬಾಲಿವುಡ್‌ನಲ್ಲಿ ಮುಂದುವರೆದ ಕಾಂತಾರ ಅಬ್ಬರ; 4 ವಾರಕ್ಕೆ ರಿಷಬ್ ಶೆಟ್ಟಿ ಸಿನಿಮಾ ಗಳಿಸಿದೆಷ್ಟು?
ಅಂದಹಾಗೆ ಕಾಂತಾರ ಅನೇಕ ಸಿನಿಮಾಗಳ ಕಲೆಕ್ಷನ್ ಬ್ರೇಕ್ ಮಾಡುವ ಮೂಲಕ ಸಾಕಷ್ಟು ದಾಖಲೆಗಳನ್ನು ಬರೆದಿದೆ. ಕರ್ನಾಟಕದಲ್ಲಿ ಕಾಂತಾರ ಸಿನಿಮಾದ 1 ಕೋಟಿ ರೂಪಾಯಿ ಟೆಕೆಟ್ ಮಾರಾಟವಾಗಿದೆ. ಈ ಬಗ್ಗೆ ಸಿನಿಮಾತಂಡ ಅಧಿಕೃತವಾಗಿ ಬಹಿರಂಗ ಪಡಿಸಿದೆ. ಈ ಮೂಲಕ ಅತೀ ಹೆಚ್ಚು ಟಿಕೆಟ್ ಮಾರಾಟವಾದ ಸಿನಿಮಾ ಕಾಂತಾರ ಎನ್ನುವ ಹೆಗ್ಗಳಿಕೆ ಗಳಿಸಿದೆ. ಈಗಾಗಲೇ ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿರುವ ಕಾಂತಾರಗೆ ಈ ದಾಖಲೆ ಮತ್ತಷ್ಟು ಖುಷಿ ತಂದಿದೆ.
Kantara ಶಿವನ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್; ಫ್ಯಾನ್ ಮೇಡ್ ಪೋಸ್ಟರ್ ವೈರಲ್
ಕಾಂತಾರ ಬಗ್ಗೆ,
ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಟ ಕಿಶೋರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೂ ನಾಯಕಿಯಾಗಿ ಸಪ್ತಮಿ ಗೌಡ ಬಣ್ಣ ಹಣ್ಣ ಹಚ್ಚಿದ್ದಾರೆ. ಅಚ್ಯುತ್ ಕುಮಾರ್ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅನೇಕ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಪ್ರತಿಯೊಂದು ಪಾತ್ರಗಳು ಸಹ ಪ್ರೇಕ್ಷಕರ ಹೃದಯ ಗೆದ್ದಿವೆ. ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿಬಂದಿದೆ.