ಯೂಟ್ಯೂಬ್‌ನಲ್ಲಿ ಟ್ರೆಂಡ್ ಸೆಟ್ ಮಾಡಿದ ಕಾಂತಾರ ಪ್ರೀಕ್ವೆಲ್ ಟೀಸರ್: 24 ಗಂಟೆಯಲ್ಲಿ ಎಷ್ಟು ವಿವ್ಸ್?

By Govindaraj S  |  First Published Nov 29, 2023, 11:30 AM IST

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ಹೊಂಬಾಳೆ ಪ್ರೊಡಕ್ಷನ್ ನಿರ್ಮಾಣ ಮಾಡಿರುವ ಕಾಂತಾರ ಪ್ರೀಕ್ವೆಲ್ ಟೀಸರ್ ಹೊಸ ಸೆನ್ಸೇಷನ್ ಹುಟ್ಟಿಹಾಕಿದೆ.  ಟೀಸರ್ ರಿಲೀಸ್ ಆದ 24 ಗಂಟೆಗಳಲ್ಲಿ1 2 ಮಿಲಿಯನ್ ವೀಕ್ಷಣೆ ಕಂಡು ಹೊಸಾ ರೆಕಾರ್ಡ್ನ್ನೆ ಮಾಡಿದೆ.  


ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ಹೊಂಬಾಳೆ ಪ್ರೊಡಕ್ಷನ್ ನಿರ್ಮಾಣ ಮಾಡಿರುವ ಕಾಂತಾರ ಪ್ರೀಕ್ವೆಲ್ ಟೀಸರ್ ಹೊಸ ಸೆನ್ಸೇಷನ್ ಹುಟ್ಟಿಹಾಕಿದೆ.  ಟೀಸರ್ ರಿಲೀಸ್ ಆದ 24 ಗಂಟೆಗಳಲ್ಲಿ1 2 ಮಿಲಿಯನ್ ವೀಕ್ಷಣೆ ಕಂಡು ಹೊಸಾ ರೆಕಾರ್ಡ್ನ್ನೆ ಮಾಡಿದೆ.  ಯೂ ಟ್ಯೂಬ್ನಲ್ಲಿ ಹೊಸಾ ರೆಕಾರ್ಡ್ ಬರೆದು ಬಿರುಗಾಳೀ ಎಬ್ಬಿಸಿದೆ. ಕೆಜಿಎಫ್ ನಂತರ ಈ ಮಟ್ಟಿಗೆ ಸೌಂಡ್ ಮಾಡಿದ ಮತ್ತೊಂದು ಟೀಸರ್ ಇಲ್ಲವೆ ಇಲ್ಲ. ಅದೂ ಎಲ್ಲ ಭಾಷೆಯವರಿಗೂ ಸಲ್ಲುವಂತೆ ಟೀಸರ್ ಮಾಡಿದ್ದು ರಿಷಬ್ ಜಾಣತನ. ಕಾಂತಾರ ಚಾಪ್ಟರ್ 1 ಟೀಸರ್ ಕುರಿತು ಇದೀಗ ಗೂಗಲ್ ಇಂಡಿಯಾವು ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದೆ. 

ತನ್ನ ಟ್ವೀಟ್ನಲ್ಲಿ ಕಾಂತಾರ ಎಂದು ಕನ್ನಡದಲ್ಲೇ ಬರೆದ ಗೂಗಲ್ ನಡೆಯು ಕನ್ನಡಿಗರನ್ನು ರೋಮಾಂಚನಗೊಳಿಸಿದೆ. "2024 ಇನ್ನಷ್ಟು ರೋಚಕವಾಗಿದೆ. ಕಾಂತಾರ ಟೀಸರ್ ನೋಡಿದೆ. ವಾಹ್ ಎಂದು ಹೇಳಬೇಕಿನಿಸಿದೆ" ಎಂದು ಗೂಗಲ್ ಇಂಡಿಯಾ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಗೂಗಲ್ ಇಂಡಿಯಾವು ಮಾಡಿರುವ ಟ್ವೀಟ್ ನೆಟ್ಟಿಗರನ್ನು ಸೆಳೆದಿದೆ. "ಬಹುಶಃ ಇದು ಸುಂದರ್ ಪಿಚೈ ಅವರೇ ಟ್ವೀಟ್ ಮಾಡಿರಬೇಕು" ಎಂದು ಎಕ್ಸ್ ಬಳಕೆದಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. "ಕನ್ನಡ ಪವರ್" ಎಂದು ಇನ್ನೊಬ್ಬರು ಬರೆದಿದ್ದಾರೆ.

Tap to resize

Latest Videos

ತೆಲುಗು ತಮಿಳು ಟೀಸರ್ ಕೂಡ ಇದಿಘ ಹೊಂಬಾಳೆ ಸಂಸ್ಥೆ ಬಿಡುಗಡೆ ಮಾಡಿದ್ದು ಅಲ್ಲಿಯೂ ಕಾಂಥಾರ ಧೂಳೆಬ್ಬಿಸೋ ಸೂಚನೆ ನೀಡಿದೆ. 7 ಭಾಷೆಯಲ್ಲಿ ಕಾಂತಾರ ಸಿದ್ಧವಾಗುತ್ತಿದೆ. ಈ ಬಾರಿ ಚಿತ್ರದಲ್ಲಿರುವ ಮುಖ್ಯ ಪಾತ್ರಧಾರಿಗಳು ಯಾರೆಲ್ಲ? ಅನ್ನೋ ಕುತೂಹಲವೂ ಇದೆ. ಯಾವುದಕ್ಕೂ ವೈಟ್ ಮಾಡಿ ಜಸ್ಟ್ ಮುಹೂರ್ಥ ಅಷ್ಟೆ ಅಆಗಿದೆ. ರಿಷಬ್ ರುದ್ರಾವತಾರದ ಹಿಂದಿನ ಕತೆ ಅಷ್ಟೆ ರೋಚಕವಾಗಿರುತ್ತೆ . 2024ರವರೆಗೂ ಕಾದು ನೋಡೋಣ. ಸದ್ಯ ಟೀಸರ್ ಸಂಭ್ರಮವನ್ನು ಸವಿಯೋಣ.

ಮಂತ್ರಮುಗ್ಧಗೊಳಿಸಿದ ಫಸ್ಟ್‌ ಲುಕ್‌: ಕಳೆದ ವರ್ಷ ಬಿಡುಗಡೆಯಾಗಿ ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುವುದರ ಜೊತೆಗೆ ದೊಡ್ಡ ಮಟ್ಟದ ಯಶಸ್ಸು ಕಂಡ ''ಕಾಂತಾರ'' ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್, ಈಗ ಇನ್ನೊಂದು ಅಂಥದ್ದೇ ಪ್ರಯತ್ನದೊಂದಿಗೆ ವಾಪಸ್ಸಾಗುತ್ತಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಮಹತ್ವಾಕಾಂಕ್ಷೆಯ ಮತ್ತು ಬಹುನಿರೀಕ್ಷಿತ ಚಿತ್ರವಾದ ''ಕಾಂತಾರ - ಅಧ್ಯಾಯ 1'' ರ ಫಸ್ಟ್‌ ಲುಕ್‌ ಬಿಡುಗಡೆಯಾಗಿದ್ದು, ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದೆ. ''ಕಾಂತಾರ'' ಜಗತ್ತನ್ನು ಪರಿಚಯಿಸುವ ಈ ಟೀಸರ್ ನಲ್ಲಿ ರಿಷಭ್ ಶೆಟ್ಟಿ ಅವರ ಪಾತ್ರ ಮತ್ತು ವೇಷ ಗಮನ ಸೆಳೆಯುತ್ತದೆ. 

ಆನೆಗುಡ್ಡೆ ನನಗೆ ಅದೃಷ್ಟದ ಬಾಗಿಲು, ಕಾಂತಾರದ ಮುನ್ನುಡಿ ಹೇಳಲು ಹೊರಟಿದ್ದೇನೆ: ರಿಷಬ್‌ ಶೆಟ್ಟಿ

ಮೊದಲ ಭಾಗದ ಆ ಆರ್ಭಟ ಇಲ್ಲೂ ಮರುಕಳಿಸಿದ್ದು, ಈ ಮೂಲಕ ಹೊಸದೊಂದು ದಂತಕಥೆಯ ಸೃಷ್ಟಿಗೆ ಮುನ್ನುಡಿ ಬರೆದಿದೆ. ಅಷ್ಟೇ ಅಲ್ಲ, ರಿಷಭ್ ಶೆಟ್ಟಿ ಅವರ ಪಾತ್ರ ವೀಕ್ಷಕರಲ್ಲಿ ಹೊಸದೊಂದು ಕೌತುಕವನ್ನು ಹುಟ್ಟುಹಾಕಿದೆ. ಮೊದಲ ಭಾಗದ ಯಶಸ್ಸಿಗೆ ಕಾರಣವಾಗಿದ್ದ ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಸಂಗೀತವು ಈ ಟೀಸರ್ ಮೂಲಕ ವಾಪಸ್ಸಾಗಿದೆ. ಈ ಟೀಸರ್ ನ ವೈಶಿಷ್ಟ್ಯವೆಂದರೆ, ಚಿತ್ರವು ಏಳು ಭಾಷೆಗಳಲ್ಲಿ ಮೂಡಿ ಬರುತ್ತಿದ್ದು, ಪ್ರತಿಯೊಂದು ಭಾಷೆಯ ಟೀಸರ್ ಒಂದೊಂದು ರಾಗದ ಮೂಲಕ ಅಂತ್ಯವಾಗಲಿದೆ.

click me!