Ego ಪಕ್ಕ ಇಡಿ,ಮಂಗಳೂರು ಜನರ ತಲೆಯಲ್ಲಿ ಕೂತು ಬಿಟ್ಟಿದೆ; ಶೆಟ್ರು ಗ್ಯಾಂಗ್‌ ವಿರುದ್ಧ ದಯಾಳ್ ಪದ್ಮನಾಭನ್

By Vaishnavi ChandrashekarFirst Published Nov 29, 2023, 10:16 AM IST
Highlights

ಬ್ಯಾಕ್ ಟು ಬ್ಯಾಕ್ ಹಿಟ್ ಕೊಡುತ್ತಿರುವ ಶೆಟ್ರು ಗ್ಯಾಂಗ್‌ಗೆ ಕಿವಿ ಮಾತು ಹೇಳಿದ ನಿರ್ದೇಶಕ. ಇಂಡಸ್ಟ್ರಿ ಮಾರ್ಕೆಟ್‌ ಬಿದ್ದು ಹೋಗಿದೆ.....

ಕನ್ನಡ ಚಿತ್ರರಂಗಕ್ಕೆ ಆ ಕರಾಳ ರಾತ್ರಿ, ಸರ್ಕಸ್, ಮಸಾಲಾ ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ದಯಾಳ್ ಪದ್ಮನಾಭನ್ ಈಗ ಶೆಟ್ರು ಗ್ಯಾಂಗ್ ಬಗ್ಗೆ ಮಾತನಾಡಿದ್ದಾರೆ. ಸದ್ಯಕ್ಕೆ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಮತ್ತು ರಾಜ್‌ ಬಿ ಶೆಟ್ಟಿ ನಿರ್ದೇಶನ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದೆ ಹೀಗಾಗಿ ಮಾರ್ಕೆಟ್‌ ರೂಲ್‌ ಮಾಡುತ್ತಿರುವುದು ಅವರೇ ಎಂದು ಎಲ್ಲೆಡೆ ಹೇಳಲಾಗುತ್ತಿದೆ. ನಿರ್ದೇಶಕ ದಯಾಳ್ ಪದ್ಮನಾಭನ್ ಶೆಟ್ರು ಗ್ಯಾಂಗ್‌ಗೆ ಸಣ್ಣ ಸಲಹೆ ಕೊಟ್ಟಿದ್ದಾರೆ. 

'ಪದೇ ಪದೇ ನಿಮ್ಮ ಸರ್ಕಲ್‌ ಒಳಗೆ ಸಿನಿಮಾ ಮಾಡಿದರೆ ನಿಮ್ಮ ಕಂಫರ್ಟ್ ಜೋನ್‌ನಲ್ಲಿ ಇರುತ್ತೀರ. ಬೇರೆ ಬೇರೆ ಸಿನಿಮಾಗಳು ಬರಲ್ಲ. ಹೀಗಾಗಿ ನಿಮ್ಮEgoಗಳನ್ನು ದೂರು ಮಾಡಿ ಎಲ್ಲರ ಜೊತೆ ಕೆಲಸ ಮಾಡುವುದಕ್ಕೆ ಶುರು ಮಾಡಿ. ಡೈರೆಕ್ಟರ್‌ಗಳು ತುಂಬಾ ಜನ ಇದ್ದಾರೆ. ಎಲ್ಲರ ಜೊತೆ ಕೆಲಸ ಮಾಡಿ ಎಂದು ಹೇಳುತ್ತಿರುವೆ.' ಎಂದು ಕನ್ನಡ ಖಾಸಗಿ  ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಫಸ್ಟ್‌ ಟೈಮ್‌ನಿಂದಲೂ ಪೀರಿಯಡ್ಸ್‌ ರೆಗ್ಯೂಲರ್ ಇಲ್ಲ, ಸೊಸೈಟಿಯಲ್ಲಿ ಪಾಠ ಮಾಡೋರಿಲ್ಲ: ಬಿಗ್ ಬಾಸ್ ಸಂಗೀತಾ ಶೃಂಗೇರಿ

'ಅವರ ತಲೆಗಳಲ್ಲಿ ಕುಳಿತು ಬಿಟ್ಟಿದೆ ನಾವು ಮಂಗಳೂರು ಜನರು ಒಟ್ಟಾಗಿ ಬಂದು ಎಲ್ಲ ಸಿನಿಮಾನೂ ಹಿಟ್ ಕೊಡುತ್ತಿದೆ ಎಂದು. ಆಮೇಲೆ ನಾವು ಇಂಡಸ್ಟ್ರಿಯನ್ನು ಸೇವ್ ಮಾಡುತ್ತಿದ್ದೀವಿ ಅನ್ನೋದು ತಲೆಯಲ್ಲಿದೆ. ಅವರು ಅಂದುಕೊಂಡಿರುವುದರಲ್ಲಿ ತಪ್ಪಿಲ್ಲ. ಆ ಫೀಲ್ ಮತ್ತು ಪ್ರಿವಿಲೇಜ್ ಅವರಿಗೆ ಇದ್ದರೆ ತಪ್ಪಲ್ಲಿ ಆದರೆ ಅದು ತಲೆಯಲ್ಲಿ ದೊಡ್ಡದಾಗ ಕೂರ ಬಾರದು. ಈಗ ಮಾಧ್ಯಮಗಳಲ್ಲಿ ನೋಡಿರುತ್ತಾರೆ ಜನರು ಈಗ ಕನ್ನಡ ಇಂಡಸ್ಟ್ರಿನ ಸೇವ್ ಮಾಡುತ್ತಿರುವುದೇ ಶೆಟ್ಟಿ ಗ್ಯಾಂಗ್ ಅಂತ. ಅದನ್ನು ಓದಿದ್ದಾಗ ನನಗೆ ನಿಜ ಬೇಸರ ಆಗುತ್ತದೆ. ಒಬ್ರು ವಿಮರ್ಶೆ ಬರೆಯುವವರು ಸಿನಿಮಾ ಚೆನ್ನಾಗಿಲ್ಲ ಅಂದ್ರುನೂ ಶೆಟ್ರು ಗ್ಯಾಂಗ್ ಸಿನಿಮಾ ಸೂಪರ್ ಎನ್ನುತ್ತಾರೆ. ನಿಮ್ಮ ಜಾತಿಗಳನ್ನು ಹೊರ ಇಟ್ಟು ಇಂಡಸ್ಟ್ರಿಗೆ ಬನ್ನಿ. ಸಿನಿಮಾ ಚೆನ್ನಾಗಿಲ್ಲ ಅಂದ್ರೂ ಸಾಫ್ಟ್ ಆಗಿ ಹೇಳುತ್ತಾರೆ. ಆ ವ್ಯಕ್ತಿಗಳ ಮೇಲೆ ನನಗೆ ಕೋಪ ಇಲ್ಲ ಆದರೆ ನಮ್ಮ ಇಂಡಸ್ಟ್ರಿ ಪರವಾಗಿ ಇಂಡಸ್ಟ್ರಿಗೆ ಒಳ್ಳೆಯದಾಗಲಿ ಎಂದು ಧ್ವನಿ ಎತ್ತುತ್ತಿರುವೆ. ಅವರನ್ನು ಬೈದರೆ ನನಗೆ ಏನು ಆಗುತ್ತದೆ? 500 ಜನ ಲೈಕ್ ಮತ್ತು ಕಾಮೆಂಟ್ ಮಾಡಿ ಸುಮ್ಮನಾಗುತ್ತಾರೆ' ಎಂದು ದಯಾಳ್ ಹೇಳಿದ್ದಾರೆ.  

ತಂಡ ಬದಲಾಯಿಸಿ ಕಣ್ಣೀರಿಟ್ಟ ನಮ್ರತಾ ಗೌಡ; ಚಮಚಗಳಿಗೆ ಸರಿಯಾದ ಪಾಠ ಕಲಿಸಿದ ಡ್ರೋನ್ ಪ್ರತಾಪ್?

'ಬ್ಯಾಡ್ ಮ್ಯಾನರ್ಸ್ ಸಿನಿಮಾದ ಬಗ್ಗೆ ಒಂದು ಪೋಸ್ಟ್‌ ಹಾಕಿದ್ದೆ. ಸ್ಯಾಟಿಲೈಟ್, ಡಿಜಿಟಲ್, ಡಬ್ಬಿಂಗ್ ರೈಟ್ಸ್, ವರ್ಲ್ಡ್‌ ವೈಡ್‌ ಥ್ರಿಯೇಟಿಕಲ್‌ ಸಂಪೂರ್ಣ ಹಕ್ಕು ಜಯಣ್ಣ ಅವರು ಖರೀದಿಸಿದ್ದಾರೆ. ಒಳ ಸತ್ಯ ಏನೆಂದರೆ ಮಾರ್ಕೆಟ್‌ನಲ್ಲಿ ಯಾರೂ ಖರೀದಿ ಮಾಡಿಲ್ಲ ಹೀಗಾಗಿ ಜಯಣ್ಣ ಒಬ್ರು ಖರೀದಿಸಿದ್ದಾರೆ ಅಂತ.  ಇದನ್ನು ಗಮನಿಸಿ. ನಮ್ಮ ಸಿನಿಮಾ ಇಂಸ್ಟ್ರಿಯಲ್ಲಿ ಬ್ಯುಸಿನೆಸ್‌ ಹೀಗೆ ಇದೆ ದಯವಿಟ್ಟು ಸಿನಿಮಾ ನೋಡಿ ಎಂದು ಹೇಳಿದೆ. ಸಿನಿಮಾ ನೋಡಿ ನನಗೆ ಖುಷಿ ಆಗಿಲ್ಲ ಅದಿಕ್ಕೆ ವಿಮರ್ಶೆ ಬರೆದಿಲ್ಲ. ಒಳ್ಳೆ ಒಳ್ಳೆ ಕನ್ನಡ ಸಿನಿಮಾ ನೋಡಿ ಬೆಳೆಸಿ' ಎಂದು ಕನ್ನಡ ಚಿತ್ರರಂಗದ ಮಾರ್ಕೆಟ್‌ ಪರಿಸ್ಥಿತಿ ವಿವರಿಸಿದ್ದಾರೆ.  

click me!