'ಅಪರೂಪದ ಬೆಳದಿಂಗಳು' ಎಂದು ಪತ್ನಿ ಪ್ರಗತಿಗೆ ರೋಮ್ಯಾಂಟಿಕ್ ಬರ್ತ್‌ಡೇ ವಿಶ್ ಮಾಡಿದ 'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ

Published : Feb 28, 2026, 12:01 PM ISTUpdated : Feb 28, 2026, 12:07 PM IST
Rishab Shetty Pragathi Shetty

ಸಾರಾಂಶ

ಅಬ್ಬರದ ನಟನೆಯಿಂದಲೇ ಸುದ್ದಿಯಾಗುವ ರಿಷಬ್, ಪತ್ನಿಯ ವಿಚಾರಕ್ಕೆ ಬಂದರೆ ತುಂಬಾ ಭಾವುಕರಾಗುತ್ತಾರೆ. ಪ್ರಗತಿ ಶೆಟ್ಟಿ ಅವರಿಗೆ ಹುಟ್ಟಹಬ್ಬಕ್ಕೆ ಶುಭ ಕೋರಿರುವ ರಿಷಬ್, ಪತ್ನಿಯ ವ್ಯಕ್ತಿತ್ವದ ಅಪರೂಪದ ಗುಣಗಳನ್ನು ಸುಂದರವಾಗಿ ವರ್ಣಿಸಿದ್ದಾರೆ. ಏನಂದ್ರು ನೋಡಿ..!

ಬೆಳದಿಂಗಳಂತಿರುವ ಪತ್ನಿ ಪ್ರಗತಿಗೆ 'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ ರೋಮ್ಯಾಂಟಿಕ್ ಬರ್ತ್‌ಡೇ ವಿಶ್

ಕನ್ನಡ ಚಿತ್ರರಂಗದ ಹೆಮ್ಮೆ, 'ಕಾಂತಾರ' ಖ್ಯಾತಿಯ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಕೇವಲ ಬೆಳ್ಳಿತೆರೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಒಬ್ಬ ಆದರ್ಶ ವ್ಯಕ್ತಿ ಎಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಲೇ ಇರುತ್ತಾರೆ. ಇಂದು ಅವರ ಜೀವನದ ಅವಿಭಾಜ್ಯ ಅಂಗ, ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಅವರ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರು ತಮ್ಮ ಪ್ರೀತಿಯ ಪತ್ನಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ಮತ್ತು ಅದಕ್ಕೆ ಬರೆದಿರುವ ಸಾಲುಗಳು ಈಗ ಅಭಿಮಾನಿಗಳ ಹೃದಯ ಗೆಲ್ಲುತ್ತಿವೆ.

ಪತ್ನಿಯ ಶಕ್ತಿಗೆ ಬೆರಗಾದ ರಿಷಬ್:

ಸಾಮಾನ್ಯವಾಗಿ ಅಬ್ಬರದ ನಟನೆಯಿಂದಲೇ ಸುದ್ದಿಯಾಗುವ ರಿಷಬ್, ಪತ್ನಿಯ ವಿಚಾರಕ್ಕೆ ಬಂದರೆ ತುಂಬಾ ಭಾವುಕರಾಗುತ್ತಾರೆ. ಪ್ರಗತಿ ಶೆಟ್ಟಿ ಅವರಿಗೆ ಶುಭ ಕೋರಿರುವ ರಿಷಬ್, ಅವರ ವ್ಯಕ್ತಿತ್ವದ ಅಪರೂಪದ ಗುಣಗಳನ್ನು ಸುಂದರವಾಗಿ ವರ್ಣಿಸಿದ್ದಾರೆ. 'ತನ್ನ ಸುಕೋಮಲತೆಯನ್ನೆ ಶಕ್ತಿಯಾಗಿಸಿಕೊಂಡ ನಿನ್ನೊಳಗಿರುವ ಅಪರೂಪದ ಛಲ, ಮಾತೃತ್ವದ ಮಮತೆ, ವೃತ್ತಿಯೆಡಗಿನ ಏಕಾಗ್ರತೆ, ಏಕಕಾಲದಲ್ಲಿ ಎಲ್ಲವನ್ನೂ ನಿಭಾಯಿಸುವ ಕಾರ್ಯಕ್ಷಮತೆ ನನ್ನಲ್ಲಿ ಬೆರಗು ಮೂಡಿಸುತ್ತದೆ. ಅಷ್ಟೇ ಹೆಮ್ಮೆಯನ್ನೂ ತರುತ್ತದೆ. ಈ ಬಣ್ಣದ ಬದುಕಿನಲ್ಲಿ ಹೀಗೆ ಅಪರೂಪದ ಬೆಳದಿಂಗಳಿನಂತೆ ಸದಾ ಕಂಗೊಳಿಸುತ್ತಾ.. ಪ್ರೀತಿ ಬೆಳೆಸುತ್ತಿರು.. ಕೀರ್ತಿ ಗಳಿಸುತ್ತಿರು.. Happy Birthday Pragathi' ಎಂದು ಡಿವೈನ್ ಸ್ಟಾರ್ ತಮ್ಮ ಪತ್ನಿ ಪ್ರಗತಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.

ಹಿಂದೊಮ್ಮೆ ಹೀಗೆ ವಿಶ್ ಮಾಡಿದ್ದರು ರಿಷಬ್- 'ಸುಕೋಮಲತೆಯನ್ನೇ ಶಕ್ತಿಯಾಗಿಸಿಕೊಂಡ ನಿನ್ನೊಳಗಿರುವ ಅಪರೂಪದ ಛಲ, ಮಾತೃತ್ವದ ಮಮತೆ, ವೃತ್ತಿಯೆಡೆಗಿನ ಏಕಾಗ್ರತೆ, ಏಕಕಾಲದಲ್ಲಿ ಎಲ್ಲವನ್ನೂ ನಿಭಾಯಿಸುವ ಕಾರ್ಯಕ್ಷಮತೆ ನನ್ನಲ್ಲಿ ಬೆರಗು ಮೂಡಿಸುತ್ತದೆ. ಅಷ್ಟೇ ಹೆಮ್ಮೆಯನ್ನೂ ತರುತ್ತದೆ" ಎಂದು ಬರೆಯುವ ಮೂಲಕ ಪ್ರಗತಿ ಅವರು ಒಬ್ಬ ಪತ್ನಿಯಾಗಿ, ತಾಯಿಯಾಗಿ ಮತ್ತು ವೃತ್ತಿಪರ ಕಾಸ್ಟ್ಯೂಮ್ ಡಿಸೈನರ್ ಆಗಿ ಹೇಗೆ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಶ್ಲಾಘಿಸಿದ್ದಾರೆ.

ಬಣ್ಣದ ಬದುಕಿನ 'ಬೆಳದಿಂಗಳು':

ಚಿತ್ರರಂಗದ ಲಕಲಕಿಸುವ ಬಣ್ಣದ ಬದುಕಿನ ನಡುವೆ ಪ್ರಗತಿ ಶೆಟ್ಟಿ ಅವರು ಸದಾ ಸರಳತೆ ಮತ್ತು ಸೌಮ್ಯತೆಗೆ ಹೆಸರಾದವರು. ಇದನ್ನು ಗುರುತಿಸಿರುವ ರಿಷಬ್, "ಈ ಬಣ್ಣದ ಬದುಕಿನಲ್ಲಿ ಹೀಗೆ ಅಪರೂಪದ ಬೆಳದಿಂಗಳಿನಂತೆ ಸದಾ ಕಂಗೊಳಿಸುತ್ತಾ.. ಪ್ರೀತಿ ಬೆಳೆಸುತ್ತಿರು.. ಕೀರ್ತಿ ಗಳಿಸುತ್ತಿರು.." ಎಂದು ಹಾರೈಸಿದ್ದಾರೆ. ರಿಷಬ್ ಶೆಟ್ಟಿ ಅವರ ಪ್ರತಿಯೊಂದು ಸಾಧನೆಯ ಹಿಂದೆಯೂ ಪ್ರಗತಿ ಅವರ ಬೆಂಬಲ ಬೆಟ್ಟದಂತಿದೆ. 'ಕಾಂತಾರ'ದಂತಹ ಜಾಗತಿಕ ಮಟ್ಟದ ಸಿನಿಮಾದ ಕಾಸ್ಟ್ಯೂಮ್ ಡಿಸೈನಿಂಗ್ ಜವಾಬ್ದಾರಿಯನ್ನು ಹೊತ್ತು ಪ್ರಗತಿ ಅವರು ರಿಷಬ್ ಅವರ ಕನಸಿಗೆ ಬಣ್ಣ ತುಂಬಿದವರು.

ಅಭಿಮಾನಿಗಳ ಹಾರೈಕೆ:

ರಿಷಬ್ ಶೆಟ್ಟಿ ಹಂಚಿಕೊಂಡಿರುವ ಈ ಭಾವುಕ ಪೋಸ್ಟ್ ಅಡಿಯಲ್ಲಿ ಸಾವಿರಾರು ಅಭಿಮಾನಿಗಳು ಪ್ರಗತಿ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. "ಮಾದರಿ ದಂಪತಿಗಳು", "ಅಣ್ಣ-ಅತ್ತಿಗೆ ಜೋಡಿ ಸದಾ ಹೀಗೆ ಸುಖವಾಗಿರಲಿ" ಎಂಬ ಕಾಮೆಂಟ್‌ಗಳು ಹರಿದು ಬರುತ್ತಿವೆ. ವಿಡಿಯೋದಲ್ಲಿ ರಿಷಬ್ ಮತ್ತು ಪ್ರಗತಿ ಅವರ ಖಾಸಗಿ ಕ್ಷಣಗಳು, ಮಕ್ಕಳಾದ ರನ್ವಿತ್ ಮತ್ತು ರಾಧ್ಯಾ ಜೊತೆಗಿನ ಸುಂದರ ದೃಶ್ಯಗಳು ಅಭಿಮಾನಿಗಳ ಮನಸ್ಸಿಗೆ ಹತ್ತಿರವಾಗಿವೆ.

ರಿಷಬ್ ಶೆಟ್ಟಿ ಅವರು ಹೇಳಿದಂತೆ, ಪ್ರಗತಿ ಅವರ ಮೃದು ಸ್ವಭಾವವೇ ಅವರ ದೊಡ್ಡ ಶಕ್ತಿಯಾಗಿದೆ. ವೃತ್ತಿಜೀವನದ ಒತ್ತಡದ ನಡುವೆಯೂ ಕುಟುಂಬವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ, ರಿಷಬ್ ಶೆಟ್ಟಿಯವರ ಯಶಸ್ಸಿನ ಹಾದಿಯಲ್ಲಿ ನೆರಳಾಗಿ ನಿಂತಿರುವ ಪ್ರಗತಿ ಶೆಟ್ಟಿ ಅವರಿಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಬಣ್ಣದ ಲೋಕದ ಈ ಸುಂದರ ಜೋಡಿ ಸದಾ ಕಾಲ ಹೀಗೆ ಪ್ರೀತಿಯಿಂದ ಬೆಳಗಲಿ!

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಿಲ್ಲಿ ನಟನ Superhit Movie ಹೇಗಿದೆ? Bigg Boss ಥರ ಇಲ್ಲೂ ಕಮಾಲ್‌ ಮಾಡಿದ್ರಾ ಪಳಾರ್‌ ಗಿಲ್ಲಿ?
ವೀರಕಂಬಳ ಸಿನಿಮಾ ವಿಮರ್ಶೆ: ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ ಸಿನಿಮಾ ಗೆದ್ದಿತೆ? ಹೇಗಿದೆ?