Rishab Shetty ಮಂಗಳೂರಿನಲ್ಲಿ ಥಿಯೇಟರ್‌ ಸಿಕ್ಕಿರಲಿಲ್ಲ; ಸಹಾಯ ಮಾಡಿದ ಆರ್‌ಜೆಗೆ ರಿಟರ್ನ್‌ ಶೋ ಕೊಟ್ಟ ಶೆಟ್ರು

By Vaishnavi Chandrashekar  |  First Published Nov 17, 2022, 11:01 AM IST

ಮೊದಲ ಸಿನಿಮಾಗೆ ಸಾಥ್‌ ಕೊಟ್ಟ ಸ್ನೇಹಿತನನ್ನು ದುಬೈನಲ್ಲಿ ಭೇಟಿ ಮಾಡಿದ ರಿಷಬ್ ಶೆಟ್ಟಿ. ರಿಕ್ಕಿ ಸಿನಿಮಾ ಸಮಯದಲ್ಲಿ ನಡೆದ ಘಟನೆ ಇದು...........


ಸ್ಯಾಂಡಲ್‌ವುಡ್‌ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡ ಭಾಷೆಯಲ್ಲಿ ಮಾತ್ರ ಚಿತ್ರೀಕರಣ ಮಾಡಿದ ಸಿನಿಮಾ ಈಗ ಪ್ಯಾನ್ ಇಂಡಿಯಾ ಚಿತ್ರವಾಗಿ 1000 ಕೋಟಿ ಕಲೆಕ್ಷನ್‌ ಮಾಡಿದೆ. ಬಾಕ್ಸ್‌ ಆಫೀಸ್‌ನಲ್ಲಿ ಧೂಳ್ ಎಬ್ಬಿಸುತ್ತಿರುವ ಸಿನಿಮಾದ ಬಗ್ಗೆ ದುಬೈ ರೆಡಿಯೋ ಶೋವೊಂದರಲ್ಲಿ ಸಂದರ್ಶನ ನೀಡಿದ್ದಾರೆ. ಕಷ್ಟ ಕಾಲದಲ್ಲಿ ಕೈ ಹಿಡಿಯುವುದೇ ಗೆಳೆಯ ಎನ್ನುವ ಹಾಗೆ ರಿಷಬ್‌ಗೆ ಸಹಾಯ ಮಾಡಿದ ಎರೋಲ್‌ ಜೊತೆಗಿರುವ ವಿಡಿಯೋ ವೈರಲ್ ಆಗುತ್ತಿದೆ. 

' ಎಲ್ಲರಿಗೂ ನಾನು ಆರ್‌ಜೆ ಎರೋಲ್‌ನ ಪರಿಚಯ ಮಾಡಿ ಕೊಡಬೇಕು. ಮಂಗಳೂರಿನಲ್ಲಿ ಎರೋಲ್‌ ಆರ್‌ಜೆ ಆಗಿದ್ದರು ಈಗ ದುಬೈನಲ್ಲಿ ಅರ್‌ಜೆ ಆಗಿದ್ದಾರೆ. ನನ್ನ ಹಳೆಯ ಸ್ನೇಹಿತರು. ಬಹಳ ವಿಶೇಷವಾಗಿ ಕಾಂತಾರ ಸಿನಿಮಾ ರಿಲೀಸ್ ಆದಾಗ ಬಹಳಷ್ಟು ಜನ ಒಂದು ವಿಚಾರ ವೈರಲ್ ಆಗಿದ್ದರ ಬಗ್ಗೆ ಮಾತನಾಡಿದ್ದರು ಈ ವ್ಯಕ್ತಿ ಒಂದು ಕಾಲದಲ್ಲಿ ಸಿನಿಮಾ ಮಾಡಿದಾಗ ಆ ಸಿನಿಮಾ ರಿಲೀಸ್ ಆದಾಗ ಮಂಗಳೂರಿನಲ್ಲಿ ಶೋ ಸಿಕ್ಕಿರಲಿಲ್ಲ. ಅದೇ ಮಂಗಳೂರಿನಲ್ಲಿ 80ಕ್ಕೂ ಹೆಚ್ಚು ಶೋಗಳು 5 ವಾರ ಹೌಸ್‌ಫುಲ್‌ ನಡೆದಿದೆ ...ಅದೇ ವಿಚಾರದ ಪೋಸ್ಟ್‌ ಸಖತ್ ವೈರಲ್ ಆಗಿತ್ತು ಅದರಲ್ಲಿ ನಾನು ಎರೋಲ್‌ಗೆ ಥ್ಯಾಂಕ್ಸ್‌ ಹೇಳಿದ್ದೆ. ಬಿಗ್ ಸಿನಿಮಾ ಬಾಲ ಶೆಟ್ಟಿಯನ್ನು ಹಿಡಿದು ನಮಗೆ ಶೋ ಕೊಡಿಸಿದ್ದವರು ಇವರೇ. ಅವತ್ತು ನನಗೆ ಶೋ ಕೊಟ್ಟಿದ್ದು ಎರೋಲ್‌ ಇವತ್ತು ನಾನು ಶೋ ಕೊಡ್ತಿದ್ದೀನಿ' ಎಂದು ರಿಷಬ್ ಶೆಟ್ಟಿ ಮಾತನಾಡಿದ್ದಾರೆ. 

Tap to resize

Latest Videos

Siddhashree National Award: ನಟ ರಿಷಬ್‌ ಶೆಟ್ಟಿಗೆ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ

'ಅವತ್ತು ನಿಮ್ಮ ಚಿತ್ರಕ್ಕೆ ಒಂದು ಶೋ ಸಿಗುತ್ತಿರಲಿಲ್ಲ ಆದರೆ ಇವತ್ತು ದೇಶಾದ್ಯಂತ ನಿಮ್ಮದೇ ಶೋಗಳು ತುಂಬಾ  ಚೆನ್ನಾಗಿ ನಡೆಯುತ್ತಿದೆ. 400 ಕೋಟಿಯಿಂದ 1000 ಕೋಟಿ ಆಗಿ ನಾಲ್ಕು ಸಾವಿರ ಕೋಟಿ ಆಗಲಿ' ಎಂದು ಎರೋಲ್ ಹೇಳಿದ್ದಾರೆ. ತಕ್ಷಣವೇ ಪಕ್ಕದಲ್ಲಿದ್ದ ರಿಷಬ್ 'ನಮ್ಮದೇನೂ ಇಲ್ಲ ಅದೆಲ್ಲಾ ನಿಮ್ಮದು' ಎಂದಿದ್ದಾರೆ.

ವೈರಲ್ ಪೋಸ್ಟ್‌:

'ಅಂತ ಇಂತು ಅವರಿವರ ಕೈಕಾಲು ಹಿಡಿದು ಮಂಗಳೂರಿನ ಬಿಗ್ ಸಿನಿಮಾಸ್‌ನಲ್ಲಿ ನಾಳೆಯಿಂದ ಸಂಜೆ 7 ಗಂಟೆ ಶೋ ಸಿಕ್ತು. ನೋಡಲು ಇಚ್ಚಿಸುವವರು ನಾಳೆಗೆ ಟಿಕೆಟ್‌ ಬುಕ್ ಮಾಡಿ ಥ್ಯಾಂಕ್ಸ್‌ ಆರ್‌ಜೆ ಎರೋಲ್' ಎಂದು ರಿಷಬ್ 2016ರಲ್ಲಿ ಫೆಬ್ರವರಿ 6ರಂದು ಬರೆದುಕೊಂಡಿದ್ದರು.

 2016 ಜನವರಿ 22ರಂದು ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ ರಿಕ್ಕಿ ಸಿನಿಮಾ ಬಿಡುಗಡೆಯಾಗಿತ್ತು. ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯಾ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಸಿನಿಮಾ ಇದಾಗಿದ್ದು ಒಂದು ಮಟ್ಟಕ್ಕೆ ಕಲೆಕ್ಷನ್ ಮಾಡಿತ್ತು. ಈ ಚಿತ್ರವು ಭಾರತದಲ್ಲಿ ನಕ್ಸಲಿಸಂನ ಪ್ರಾಬಲ್ಯದ ಬಗ್ಗೆ ವ್ಯವಹರಿಸುತ್ತದೆ, ಹಿನ್ನೆಲೆಯಲ್ಲಿ ಪ್ರೇಮಕಥೆಯೂ ಇದೆ. ರಿಷಬ್ ಶೆಟ್ಟಿ ವೃತ್ತಿ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ಆಗಿದ್ದು ಈ ಸಿನಿಮಾ ಏಕೆಂದರೆ ಸಿನಿ ಜರ್ನಿ ಶುರುವಾಯ್ತು ಹಾಗೂ ಬಾಲಸಂಗಾತಿ  ಸಿಕ್ಕಿದ್ದೂ ಈ ಸಿನಿಮಾ ರಿಲೀಸ್‌ನಲ್ಲಿ.

50 ದಿನ ಪೂರೈಸಿದ ಕಾಂತಾರ:

ಸಿನಿಮಾ ರಿಲೀಸ್ ಆಗಿ 50 ದಿನಗಳು ಕಳೆದರೂ ಅನೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕರಾವಳಿ ದೈವಾರಾಧನೆಯ ಕಥೆ ಹೇಳುವ ಕಾಂತಾರ ಚಿತ್ರಕ್ಕೆ ಭಾರತೀಯ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಣಿಪಾಲದ ಸ್ಯಾಂಡ್ ಹಾರ್ಟ್ ಕಲಾವಿದರು ಅದ್ಭುತ ಮರಳುಶಿಲ್ಪ ರಚಿಸಿದ್ದಾರೆ.

Kantara ಶಿವನ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್; ಫ್ಯಾನ್ ಮೇಡ್ ಪೋಸ್ಟರ್ ವೈರಲ್

ಉಡುಪಿಯ ಕಾಪು ಬೀಚ್‌ಗೆ ಭಾನುವಾರ ಭೇಟಿ ಕೊಟ್ಟವರಿಗೆ ಅಚ್ಚರಿ ಕಾದಿತ್ತು. ಕಡಲ ತೀರದ ಮರಳುರಾಶಿಯಲ್ಲಿ ಕಾಂತಾರ ಕಲಾಕೃತಿ ಪ್ರವಾಸಿಗರನ್ನು ಸ್ವಾಗತಿಸುತ್ತಿತ್ತು. ಕರಾವಳಿಯ ಕೌತುಕದ ಕತೆ ಹೇಳಿದ ಕಾಂತಾರ ಚಿತ್ರವು ಐವತ್ತು ದಿನ ಪೂರೈಸಿದ ಹಿನ್ನೆಲೆಯಲ್ಲಿ ಈ ಕಲಾಕೃತಿ ರಚಿಸಲಾಗಿತ್ತು. ಸ್ಯಾಂಡ್ ಹಾರ್ಟ್ ಕಲಾವಿದರು ಹೃದಯ ತುಂಬಿ ಈ ಕಲಾಕೃತಿ ರಚಿಸಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Errol Gonsalves (@rj_errol)

click me!