
ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ ಅಂತ ಎಣ್ಣೆ ಹೊಡೆದು ಕಿಕ್ ಕೊಡ್ತಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಆ ಸಹವಾಸವೇ ಬೇಡ ನಾನು ಗ್ಲಾಮರ್ ಕಡೆ ಮುಖನು ಹಾಕಲ್ಲ ಅಂತ ಬಣ್ಣ ಬದಲಿಸಿದ್ದಾರೆ. ನಾನು ಬುಲ್ ಬುಲ್ ಡಿಂಪಲ್ ಅಲ್ಲ. ನಿಮ್ಮೆಲ್ಲರ ನಿಂಗವ್ವ ಅನ್ನುತ್ತಿದ್ದಾರೆ. ಹಾಗಾದ್ರೆ ಏನಿದು ರಚಿತಾ ಹೊಸ ವರಸೆ..? ಲ್ಯಾಂಡ್ ಲಾರ್ಡ್.. ಸದ್ಯ ಸ್ಯಾಂಡಲ್ವುಡ್ನಲ್ಲಿ ಹೊಸ ಫೈಯರ್ ಬ್ರ್ಯಾಂಡ್ ತರ ಕಾಣ್ತಾ ಇರೋ ಸಿನಿಮಾ. ವಿಜಯ್ ಹಾಗು ರಾಜ್ ಬಿ ಶೆಟ್ಟಿಯ ಟೀಸರ್ ಲ್ಯಾಂಡ್ ಲಾರ್ಡ್ನ ರೂಲಿಂಗ್ ಬಗ್ಗೆ ಹಿಂಟ್ ಕೊಟ್ಟಿದೆ. ಲ್ಯಾಂಡ್ ಲಾರ್ಡ್ ಅಳಿದು ಉಳಿದವರ ಕತೆಯ ಸಿನಿಮಾ. ದುನಿಯಾ ವಿಜಯ್ ಹಾಗು ರಾಜ್ ಬಿ ಶೆಟ್ಟಿಯ ಮಾಸ್ ಮೂವಿ.
1980ರ ದಶಕದ ಗ್ರಾಮೀಣ ಹಿನ್ನೆಲೆಯ ರಗಡ್ ಕಥೆ ಸಿನಿಮಾದಲ್ಲಿದೆ. ಅಷ್ಟೆ ಅಲ್ಲ ಅಲ್ಲೊಂದು ರೆಟ್ರೋ ಲವ್ ಸ್ಟೋರಿ ಕೂಡ ಇದೆ. ಆ ಪ್ರೇಮದ ಕಾವಲ್ಲಿ ಬೆಂದಿರೋದು ರಾಚಯ್ಯ ಹಾಗು ನಿಂಗವ್ವ. ಅಂದ್ರೆ ದುನಿಯಾ ವಿಜಯ್ ಹಾಗು ರಚಿತಾ ರಾಮ್. ಸ್ಟಾರ್ ಡೈರೆಕ್ಟರ್ ಜಡೇಶ್ ಹಂಪಿಯ ಲ್ಯಾಂಡ್ ಲಾರ್ಡ್ ಸ್ಯಾಂಪಲ್ಸ್ಗಳು ಸಿನಿಮಾ ಮೇಲಿನ ನಿರೀಕ್ಷೆ ಬೆಟ್ಟದಷ್ಟು ಮಾಡಿದೆ. ಈಗ ಇದೇ ಲ್ಯಾಂಡ್ಸ್ ಲಾರ್ಡ್ನ ರಾಜಯ್ಯ ನಿಂಗವ್ವನ ಸಾಂಗ್ ಬಿಡುಗಡೆ ಮಾಡಿದ್ದಾರೆ. ದುನಿಯಾ ವಿಜಯ್ ರಾಚಯ್ಯನಾದ್ರೆ, ನಿಂಗವ್ವನಾಗಿ ರಚಿತಾ ನಟಿಸಿದ್ದಾರೆ. ಈ ಕಾಂಬಿನೇಷನ್ ಕಮಿಸ್ಟ್ರಿ ಸ್ಕ್ರೀನ್ ಮೇಲೆ ಸಕ್ಕತ್ತಾಗೆ ವರ್ಕ್ ಆಗಿದೆ.
ಡಿಂಪಲ್ ಕ್ವೀನ್ ರಚಿತಾ ರಾಮ್ ಸಿಕ್ಕ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳುತ್ತಿರೋ ರಚಿತಾ ರಾಮ್ ಗ್ಲಾಮರ್ ಬಿಟ್ಟು ಡಿ ಗ್ಲಾಮರ್ ಕಡೆ ವಾಲಿದ್ದಾರೆ. ಲ್ಯಾಂಡ್ ಲಾರ್ಡ್ನಲ್ಲಿ ವಿಜಯ್ರ ಹೆಂಡತಿ ರೋಲ್ ಮಾಡಿರೋ ರಚಿತಾ 18 ವರ್ಷದ ಮಗಳ ತಾಯಿ ಪಾತ್ರ ಮಾಡಿದ್ದಾರೆ. ದುನಿಯಾ ವಿಜಯ್ ಪುತ್ರಿ ರಿತನ್ಯ ನಟಿ ಉಮಾಶ್ರೀ, ಶಿಶಿರ್, ರಾಕೇಶ್ ಅಡಿಗ, ಅಚ್ಯುತ್ ಕುಮಾರ್, ಮಿತ್ರ, ಅಭಿಷೇಕ್ ದಾಸ್ ಸೇರಿದಂತೆ ಲ್ಯಾಂಡ್ಲಾರ್ಡ್ ಅಡ್ಡಾದಲ್ಲಿ ಪ್ರತಿಭಾನ್ವಿತ ಕಲಾವಿದರ ಬಳಗ ಇದೆ. ಮಾಸ್ತಿ ಸಂಭಾಷಣೆ, ಅಜನೀಶ್ ಲೋಕನಾಥ್ ಮ್ಯೂಸಿಕ್ ಸಿನಿಮಾಗಿದೆ. 2026ರಕ್ಕೆ ತೆರೆಗೆ ಬರೋ ಈ ಲ್ಯಾಂಡ್ ಲಾರ್ಡ್ ಬೆಂಚ್ ಮಾರ್ಕ್ ಸಿನಿಮಾ ಆಗೋ ಎಲ್ಲಾ ಭರವಸೆಯೂ ಮೂಡಿಸಿದೆ.
ಇನ್ನು ಸಿನಿಮಾದಲ್ಲಿ ರೂಲರ್ ಆಗಿ ರಾಜ್ ಶೆಟ್ರು ಮತ್ತು ಸರ್ವೈವರ್ ಆಗಿ ದುನಿಯಾ ವಿಜಯ್ ಇಬ್ಬರಿಗೂ ಸಮಾನ ಪಾತ್ರ ಇದೆ. ಇಬ್ಬರ ನಡುವಿನ ಸಂಘರ್ಷವೇ ಲ್ಯಾಂಡ್ಲಾರ್ಡ್ ಕಹಾನಿ. ನಮ್ಮದೇ ಮಣ್ಣಿನ ಹಲವು ನೈಜ ಘಟನೆಗಳ ಸ್ಪೂರ್ತಿಯೊಂದಿಗೆ ಈ ಸಿನಿಮಾವನ್ನ ರೆಡಿಮಾಡಿದ್ದಾರೆ ನಿರ್ದೇಶಕ ಜಡೇಶ್ ಹಂಪಿ. ಸಾರಥಿ ಖ್ಯಾತಿಯ ಕೆವಿ ಸತ್ಯಪ್ರಕಾಶ್ ಈ ರೆಟ್ರೋ ಕಾಲದ ಕಥೆಯನ್ನ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಇದೂವರೆಗೂ ಬಂದಿದ್ದ ಟೀಸರ್ಸ್ ಲ್ಯಾಂಡ್ಲಾರ್ಡ್ ಬಗ್ಗೆ ನಿರೀಕ್ಷೆ ಮೂಡಿಸಿದ್ವು. ಆದ್ರೆ ಈಗ ಬಂದಿರೋ ಇತ್ತೀಚೆಗಿನ ಟೀಸರ್ ಇದೂವರೆಗಿನ ನಿರೀಕ್ಷೆಯನ್ನ ಡಬಲ್ ಮಾಡಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.