
ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ ಅನ್ನೋದು ಹಳೇ ಗಾದೆ. ಶಿವರಾತ್ರಿಗೂ ರಾಬರ್ಟ್ ಗೂ ಏನ್ ಸಂಬಂಧ ಅನ್ನೋದು ಈ ಹೊತ್ತಿನ ಗಾದೆ. ರಾಬರ್ಟ್ ಅನ್ನೋದು ಕ್ರಿಶ್ಚಿಯನ್ ಹೆಸ್ರು ಅಂತ ಮಗೂ ಕೂಡ ಹೇಳುತ್ತೆ. ಇನ್ನು ಸಿನಿಮಾದಲ್ಲಿ ಸಖತ್ ಮಿಂಚ್ತಾ ಇರೋದು ಜೈ ಶ್ರೀರಾಮ್ ಹಾಡು, ಸಿನಿಮಾ ರಿಲೀಸ್ ಆಗ್ತಿರೋದು ಇದೇ ಶಿವರಾತ್ರಿಗೆ. ಸೋ, ಎಲ್ಲಿಂದ ಎಲ್ಲಿಗೆ ಲಿಂಕ್ ಅಂತ ಗೊತ್ತಾಗ್ಬೇಕಾದ್ರೆ ನಾಳೆಯವರೆಗೂ ಕಾಯಲೇಬೇಕು.
ಈ ಬಾರಿಯ ಶಿವರಾತ್ರಿ ಹಬ್ಬ ಮತ್ತಷ್ಟು ಕಲರ್ ಫುಲ್ ಆಗ್ತಿರೋದು ರಾಬರ್ಟ್ ಆಗಮನದಿಂದ. ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ನಾಳೆ ಬೆಳಗಾದ್ರೆ ಇಡೀ ರಾಜ್ಯದ ಚಿತ್ರಮಂದಿರಗಳಲ್ಲಿ ಅಬ್ಬರಿಸೋದಕ್ಕೆ ರೆಡಿ ಇದೆ. ಆಂಧ್ರದಲ್ಲೂ ರಾಬರ್ಟ್ ಹವಾ ಹೆಚ್ಚಾಗ್ತಿದೆ. ಈಗಾಗಲೇ ಈ ಸಿನಿಮಾದ 'ಕಣ್ಣೇ ಅದಿರಿಂದಿ' ಸೂಪರ್ ಹಿಟ್ ಆಗಿ ಕೋಟ್ಯಂತರ ಜನ ಹಾಡನ್ನು ವೀಕ್ಷಿಸಿದ್ದಾರೆ. ಅಲ್ಲಿನ ನೂರಾರು ಥಿಯೇಟರ್‌ಗಳಲ್ಲಿ ರಾಬರ್ಟ್ ಮೂವಿ ನಾಳೆ ಸಕ್ಸಸ್‌ಫುಲ್ ಆಗಿ ಪ್ರದರ್ಶನಗೊಳ್ಳುವ ಎಲ್ಲ ಸಾಧ್ಯತೆಗಳೂ ನಿಚ್ಚಳವಾಗಿದೆ. ಇನ್ನುನಮ್ಮ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲೂರಾಬರ್ಟ್ ಸಿನಿಮಾ ಷೋ. ಬಾನೆತ್ತರದ ಡಿ ಬಾಸ್ ಕಟೌಟ್‌ಗಳು, ಅಭಿಮಾನಿಗಳ ಸಂಭ್ರಮಾಚರಣೆ, ಪಟಾಕಿ, ಸೌಂಡ್ ಅಂತ ಥಿಯೇಟರ್ ಹೊರಗೂ ಸಿನಿಮಾ ಹಬ್ಬದ ವಾತಾವರಣ. ಕೊರೋನಾ ನಂತರ ಬರುತ್ತಿರುವ ದಚ್ಚು ಫಸ್ಟ್ ಮೂವಿಯ ಫಸ್ಟ್ ಷೋ ನೋಡ್ಬೇಕು ಅಂತ ತುದಿಗಾಲಲ್ಲಿ ನಿಂತೋರು ಎಷ್ಟೋ ಜನ. ಕಳೆದವಾರವೇ ಬುಕ್ ಮೈ ಶೋದ ಬುಕ್ಕಿಂಗ್ ಲೀಸ್ಟ್‌ನಲ್ಲಿ ಸೀಟುಗಳು ಫಾಸ್ಟ್ ಫಿಲ್ಲಿಂಗ್ ಆಗ್ತಿದ್ದವು. ನಾಳೆ ಬುಕ್ಕಿಂಗ್ ಮಾಡಿ ಹೋಗ್ತೀವಿ ಅಂದ್ರೆ ಟಿಕೇಟ್ ಸಿಗೋದು ಕಷ್ಟ ಇದೆ.
ಇಷ್ಟೆಲ್ಲ ಬಿಲ್ಡಪ್ ಕೊಟ್ಟ ಮೇಲೆ ಈ ಸಿನಿಮಾನ ಯಾವ ಕಾರಣಕ್ಕೆ ನೋಡ್ಬೇಕು ಅಂತ ಹೇಳಲೇಬೇಕಲ್ವಾ.
1. ಅದ್ಭುತ ಸೆಟ್‌ಗಳು
ಈ ಸಿನಿಮಾಗೋಸ್ಕರವೇ ಅದ್ಭುತ ಸೆಟ್ ಹಾಕಲಾಗಿದೆ. ಅದರಲ್ಲೂ ಶ್ರೀರಾಮನ ಹಾಡಲ್ಲಿ ಬರುವ ಸೆಟ್ ಸಖತ್ ಕಲರ್‌ಫುಲ್. ಬಿಗ್ ಸ್ಕ್ರೀನ್ ಮೇಲೆ ಅದನ್ನು ನೋಡೋದೇ ಕಣ್ಣಿಗೆ ಹಬ್ಬ. ರಾಮನ ಬೃಹದಾಕಾರದ ಕಟೌಟ್, ಉತ್ಸವದ ಜೋಶ್ ಎಲ್ಲ ಸ್ಕ್ರೀನ್ ಮೇಲೆ ಸಖತ್ತಾಗಿ ಕಾಣೋ ಸಾಧ್ಯತೆ ಇದೆ. ಈ ಸಿನಿಮಾದ ಸೆಟ್‌ಗಾಗಿ ಕೋಟ್ಯಂತರ ರು. ಖರ್ಚಾಗಿದೆ. ಅದರಲ್ಲೂ ಗ್ಯಾರೇಜ್ ಸೆಟ್ ಅಂತೂ ಸಖತ್ತಾಗಿ ಮೂಡಿ ಬಂದಿದೆ. ಮೊದಲು ಮಿನಿಯೇಚರ್‌ನಲ್ಲಿ ಸೆಟ್ ಮೂಡಿಸಿ ನಿರ್ದೇಶಕ ಓಕೆ ಅಂದ್ಮೇಲೆ ಸೆಟ್ ರೂಪಕ್ಕೆ ತರಲಾಗಿದೆ.
ವನ್ಯ ಜೀವಿ ಉಳಿಸುವಂತೆ ದರ್ಶನ್ ಮನವಿ; ತಾವೇ ತೆಗೆದ ಫೋಟೋ ಪ್ರಕಟಿಸಿದ ದಾಸ! ...
2. ಅಂಡರ್‌ವಾಟರ್ ಸೀಕ್ವೆನ್ಸ್
ಸ್ಯಾಂಡಲ್‌ವುಡ್‌ನಲ್ಲಿ ಬಾಲ ನಟನಾಗಿ ಮಿಂಚಿದ ಮಾಸ್ಟರ್ ಕಿಶನ್ ನೇತೃತ್ವದಲ್ಲಿ ರಾಬರ್ಟ್ ಟೀಮ್ ಅದ್ಭುತವಾಗಿ ಅಂಡರ್‌ವಾಟರ್ ಸೀಕ್ವೆನ್ಸ್ ಶೂಟ್ ಮಾಡಿದೆ. ಇದಕ್ಕಾಗಿ ಮುಂಬೈನಿಂದ ಎಕ್ಸ್‌ಪರ್ಟ್ ಗಳು ಬಂದಿದ್ದರು. ಇದರ ಮೇಕಿಂಗ್ ಹೇಗಿತ್ತು, ಈ ಶೂಟ್‌ಗಾಗಿ ನಾಯಕ ದರ್ಶನ್ ಸೇರಿದಂತೆ ಇಡೀ ಟೀಮ್ ಹೇಗೆ ಕಷ್ಟಪಟ್ಟಿತು ಅನ್ನೋನ್ನು ರಾಬರ್ಟ್ ಮೇಕಿಂಗ್ ಎಪಿಸೋಡ್‌ನಲ್ಲಿಚೆನ್ನಾಗಿ ಹೇಳಿದ್ದಾರೆ.
3. ಕತೆಯಲ್ಲಿರುವ ಅಚ್ಚರಿ ಎಲಿಮೆಂಟ್
ರಾಬರ್ಟ್ ಸಿನಿಮಾದ ಕತೆಯ ಒನ್‌ಲೈನ್ ಅಪ್ಪಿತಪ್ಪಿ ಎಲ್ಲೂ ರಿವೀಲ್ ಆಗಿಲ್ಲ. ಅದು ಥಿಯೇಟರ್‌ಗೆ ಹೋದಮೇಲೆ ನಿಮಗೆಲ್ಲ ಸಿಗುವ ಪ್ಲೆಸೆಂಟ್ ಸರ್ಪೈಸ್. ರಾಬರ್ಟ್ ಟ್ರೇಲರ್, ಹಾಡುಗಳನ್ನೆಲ್ಲ ಗಮನಿಸಿದರೆ ಇದರಲ್ಲಿ ದರ್ಶನ್ ರಾಮಭಕ್ತನಾಗಿಯೂ ಕಾಣ್ತಾರೆ, ಕ್ರಿಶ್ಚಿಯನ್ ಯುವಕನಂತೆಯೂ ಕಾಣಿಸಿಕೊಂಡಿದ್ದಾರೆ. ಇದಕ್ಕೆಲ್ಲ ಏನು ಸಂಬಂಧ ಅನ್ನೋದು ಥಿಯೇಟರ್‌ನಲ್ಲೇ ರಿವೀಲ್ ಆಗ್ಬೇಕು.
ದರ್ಶನ್ ಧರಿಸೋ ಒಂದೊಂದು ಜೀನ್ಸ್ ಪ್ಯಾಂಟ್ ಬೆಲೆ ಎಷ್ಟು ಗೊತ್ತಾ? ...
4. ಡಿ ಬಾಸ್ ಆಕ್ಟಿಂಗ್
ಕೋವಿಡ್ ನಂತರ ತೆರೆಗೆ ಬರುತ್ತಿರುವ ದರ್ಶನ್ ಮೊದಲ ಸಿನಿಮಾ ಇದು. ಹೀಗಾಗಿ ಎಷ್ಟೋ ದಿನಗಳ ನಂತರ ತೆರೆ ಮೇಲೆ ದರ್ಶನ್ ಅಭಿನಯವನ್ನು ನೋಡೋ ಖುಷಿ ಡಿ ಬಾಸ್ ಅಭಿಮಾನಿಗಳದ್ದು. ಮಿಸ್ ಸುಪ್ರಾ ಇಂಟರ್‌ನ್ಯಾಶನಲ್ ಕಿರೀಟ ಧರಿಸಿರುವ ಬಾಲಿವುಡ್ ಚಿತ್ರಗಳಲ್ಲೂ ನಟಿಸಿರುವ ಆಶಾ ಭಟ್ ಜೊತೆಗೆ ದರ್ಶನ್ ರೊಮ್ಯಾನ್ಸ್ ಹೇಗಿರುತ್ತೆ ಅನ್ನೋದೂ ಸಖತ್ ಎಕ್ಸೈಟಿಂಗ್.
5. ಹಾಡುಗಳು
ಈಗಾಗಲೇ ರಿಲೀಸ್ ಆಗಿರುವ ಕಣ್ಣು ಹೊಡಿಯಾಕ ಇರಬಹುದು, ಅದರ ತೆಲುಗು ವರ್ಶನ್ ಇರಬಹುದು, ಸೂಪರ್ ಹಿಟ್ ಆಗಿದೆ. ಆದರೆ ವೀಡಿಯೋ ಸಾಂಗ್ ಇನ್ನೂ ಎಫೆಕ್ಟಿವ್ ಆಗಿರೋದು ಗ್ಯಾರೆಂಟಿ.
ದರ್ಶನ್ ಕೊಟ್ಟಷ್ಟು ಗೌರವ ಟಾಲಿವುಡ್‌ನಲ್ಲೂ ಸಿಕ್ಕಿಲ್ಲ ಎಂದ ತೆಲುಗು ನಟ ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.