
ಸೆಲೆಬ್ರಿಟಿಗಳಾಗೋದು ಸುಲಭ ಅಲ್ಲ, ಯಾಕಂದ್ರೆ, ಅವರು ಹೋದಲ್ಲೆಲ್ಲಾ ಕ್ಯಾಮೆರಾಗಳು ಹಿಂಬಾಲಿಸಿಕೊಂಡು ಬರುತ್ತವೆ. ಅವರು ಏನು ಮಾಡಿದ್ರೂ ಸುದ್ದಿಯಾಗುತ್ತದೆ. ಸೆಲೆಬ್ರಿಟಿಗಳು ಮಾತ್ರವಲ್ಲ, ಅವರ ಮಕ್ಕಳು, ಮನೆಯವರ ಮೇಲೆ ಸಹ ಕ್ಯಾಮೆರಾ ಕಣ್ಣು ಯಾವಾಗಲೂ ಇರುತ್ತದೆ. ಸಿನಿಮಾಕ್ಕೂ ಹೋದರೂ, ಮಾಲ್ ಗೆ ಹೋದರೂ ಪಾಪರಾಜಿಗಳು ಸಹ ಹಿಂದೆಯೇ ಬರುತ್ತಾರೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರ ಮಗಳ ಮೇಲೆ ಪಾಪರಾಜಿ ಕಣ್ಣು ಬಿದ್ದಿದೆ. ಒಂದೇ ಸಮನೆ ಮಗಳ ವಿಡಿಯೋ ಮಾಡುತ್ತಿದ್ದ ಪಾಪಾರಾಜಿಗಳಿಗೆ ಉಪೇಂದ್ರ ಏನು ಹೇಳಿದ್ರು ನೋಡಿ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಉಪೇಂದ್ರ ಅವರ ಪುತ್ರಿ ಐಶ್ವರ್ಯ, ಸಾಧ್ಯವಾದಷ್ಟು ಕ್ಯಾಮೆರಾದಿಂದ ದೂರ ಇರಲು ಪ್ರಯತ್ನಿಸುತ್ತಿರುತ್ತಾರೆ. ಕ್ಯಾಮೆರಾ ಕಂಡೊಡಣೆ ಮುಖಕ್ಕೆ ಮಾಸ್ಕ್ ಹಾಕೋದು, ಕ್ಯಾಮೆರಾದಿಂದ ದೂರ ಓಡೋದು, ಮುಖ ಮುಚ್ಚೋದು ಇದನ್ನ ಮಾಡುತ್ತಿರುತ್ತಾರೆ. ಕ್ಯಾಮೆರಾ ಕಣ್ಣೆದುರು ಸಿಕ್ಕಿದೇ ಕಡಿಮೆ. ಆದರೆ ಈ ಬಾರಿ ತಮ್ಮ ಕುಟುಂಬದ ಜೊತೆ ಅಣ್ಣ ನಿರಂಜನ್ ಅವರ ‘ಸ್ಮಾರ್ಕ್’ ಸಿನಿಮಾ ನೋಡಲು ಥಿಯೇಟರ್ ಗೆ ಬಂದಿದ್ದಾಗ ಕ್ಯಾಮೆರಾ ಕಣ್ಣಿಗೆ ನೇರ ನೇರವಾಗಿ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಮಗಳ ಬೆಂಬಲಕ್ಕೆ ಉಪೇಂದ್ರ ಹೇಗೆ ಬಂದರೂ ಅನ್ನೋದನ್ನು ನೀವೇ ನೋಡಬಹುದು.
ಸಾಕು ಬಿಡ್ರಪ್ಪಾ… ಉಪ್ಪಿ ಹೇಳಿಕೆ ವೈರಲ್
‘ಸ್ಪಾರ್ಕ್’ ಸಿನಿಮಾ ಸ್ಕ್ರೀನಿಂಗ್ ಬಳಿಕ ಐಶ್ವರ್ಯ ತಮ್ಮ ಅಜ್ಜಿ ಜೊತೆ ಅಂದ್ರೆ ಉಪೇಂದ್ರ ಅವರ ತಾಯಿಯನ್ನು ಗಟ್ಟಿಯಾಗಿ ಹಿಡಿದು, ಮಾತನಾಡುತ್ತಿದ್ದರು. ಈ ವೇಳೆ ಪಾಪರಾಜಿ ಐಶ್ವರ್ಯ ಅವರ ಈ ಮುದ್ದಾದ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದರು. ಈ ಕ್ಷಣದಲ್ಲಿ ಇದ್ದಕ್ಕಿದ್ದಂತೆ, ಕ್ಯಾಮೆರಾ ಎದುರು ಬಂದು ಕೈ ಅಡ್ಡ ಹಿಡಿದ ಉಪೇಂದ್ರ, “ಹೇ ಸಾಕ್ರೋ ಬಿಡ್ರಪ್ಪ, ದೃಷ್ಟಿಯಾಗುತ್ತೆ ನನ್ನ ಮಗಳಿಗೆ” ಎಂದು ತಮಾಷೆಯಾಗಿ ಹೇಳಿದ್ದಾರೆ. ಇದನ್ನು ಕೇಳಿ ಅಲ್ಲಿದ್ದವರೆಲ್ಲಾ ನಕ್ಕಿದ್ದಾರೆ. ಬಳಿಕ ಉಪೇಂದ್ರ ತಾಯಿ, ಹೋ ಎಷ್ಟು ಪ್ರೀತಿ ನೋಡಿ ಮಗಳ ಮೇಲೆ ಎಂದು ಮುದ್ದಾಗಿ ಮಗನಿಗೆ ಹೇಳಿದ್ದಾರೆ. ಇದೀಗ ಈ ವಿಡೀಯೋ ವೈರಲ್ ಆಗುತ್ತಿದೆ. ಅಪ್ಪ-ಮಗಳ ಮುದ್ದಾದ ಬಾಂಧವ್ಯ ಹಾಗೂ ಮಗಳನ್ನು ಕ್ಯಾಮೆರಾ ಕಣ್ಣಿನಿಂದ ತಪ್ಪಿಸಲು ಉಪೇಂದ್ರ ತೆಗೆದುಕೊಂಡಿರುವ ಈ ಮುದ್ದಾದ ಆಕ್ಷನ್ ನೆಟ್ಟಿಗರ ಗಮನ ಸೆಳೆದಿದೆ.
ಸಿನಿಮಾ ವಿಚಾರಕ್ಕೆ ಬಂದರೆ, ಐಶ್ವರ್ಯ ಈಗಾಗಲೇ ತಮ್ಮ ಅಮ್ಮನ ಜೊತೆ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ತಮ್ಮ ವಿದ್ಯಾಬ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಆದರೆ ಉಪೇಂದ್ರ ಮಗ ಆಯುಷ್ ಉಪೇಂದ್ರ ಶೀಘ್ರದಲ್ಲಿ ಹೊಸ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಲಿದ್ದಾರೆ. ಉಪೇಂದ್ರ ಹಾಗೂ ಪ್ರಿಯಾಂಕಾ ಅವರು ಸಹ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.