ಗೌರಿ ಅಬ್ಬರಕ್ಕೆ ಕೌಂಟ್‌ಡೌನ್: ಸಮರ್ಜಿತ್ ಜೊತೆ ನಿಂತು ಸಿನಿಮಾ ಗೆಲ್ಲಿಸಿ ಎಂದ ಕಿಚ್ಚ ಸುದೀಪ್- ರಿಯಲ್ ಸ್ಟಾರ್ ಉಪೇಂದ್ರ!

By Govindaraj S  |  First Published Aug 13, 2024, 4:49 PM IST

ಆಗಸ್ಟ್ 15 ಕ್ಕೆ ಗೌರಿ ಸಿನಿಮಾ ತೆರೆ ಮೇಲೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ. ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಹೀರೋ ಆಗಿ ಡೆಬ್ಯು ಆಗುತ್ತಿದ್ದಾರೆ. ಆ ಕಡೆ ಬಿಗ್ ಬಾಸ್ ಮನೆಯಲ್ಲಿ ಮೋಡಿ ಮಾಡಿದ್ದ  ಬೆಂಕಿ ಬ್ಯುಟಿ ಸಾನ್ಯ ಅಯ್ಯರ್‌ಗೂ ಇದು ಫಸ್ಟ್ ಸಿನಿಮಾ.


ಒಬ್ಬ ಹೊಸ ಹುಡುಗ ಸಿನಿಮಾ ಜಗತ್ತಲ್ಲಿ ಮಿಂಚಿ ಸ್ಟಾರ್ ಆಗಬೇಕು ಅಂತ ಕನಸು ಕಾಣ್ತಾನೆ. ಅದೆ ಆ ಹುಡುಗನಿಗೆ ದಿಗ್ಗಜ ಕಲಾವಿಧರ ಸಪೋರ್ಟ್ ಸಿಕ್ಕಿದ್ರೆ ಹೇಗಿರುತ್ತೆ ಹೇಳಿ. ಖುಷಿ ಸಂತೋಷಕ್ಕೆ ಪಾರವೇ ಇರೋದಿಲ್ಲ. ನಾನು ಗೆದ್ದೇ ಗೆಲ್ಲುತ್ತೇನೆ ಅನ್ನೋ ದೊಡ್ಡ ಭರವಸೆ ಆ ಹುಡುಗನಲ್ಲಿ ಬಂದು ಬಿಡುತ್ತೆ. ಈಗ ಕನ್ನಡ ಚಿತ್ರರಂಗದ ಬೆಳ್ಳಿ ಪರದೆ ಮೇಲೆ ಗ್ರ್ಯಾಂಡ್ ಡೆಬ್ಯು ಮಾಡೋಕೆ ಸಜ್ಜಾಗಿರೋ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಗೂ ಆ ನಂಬಿಕೆ ಬಂದಿಕೆ ಅದಕ್ಕೆ ಕಾರಣ ಕನ್ನಡದ ಇಬ್ಬರು ದಿಗ್ಗಜರು ಸಮರ್ಜಿತ್ ಬೆನ್ನ ಹಿಂದೆ ನಿಂತು ನೀನು ಮುಂದೆ ಹೋಗು ಅಂತ ಬೆನ್ನು ತಟ್ಟಿದ್ದಾರೆ. ಮೊನಾಲಿಸಾ ಫೇಮ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಸಿನಿಮಾ ರಿಲೀಸ್ ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. 

ಆಗಸ್ಟ್ 15 ಕ್ಕೆ ಗೌರಿ ಸಿನಿಮಾ ತೆರೆ ಮೇಲೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ. ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಹೀರೋ ಆಗಿ ಡೆಬ್ಯು ಆಗುತ್ತಿದ್ದಾರೆ. ಆ ಕಡೆ ಬಿಗ್ ಬಾಸ್ ಮನೆಯಲ್ಲಿ ಮೋಡಿ ಮಾಡಿದ್ದ  ಬೆಂಕಿ ಬ್ಯುಟಿ ಸಾನ್ಯ ಅಯ್ಯರ್ ಗೂ ಇದು ಫಸ್ಟ್ ಸಿನಿಮಾ. ಗೌರಿ ಮೂಲಕ ಬಿಗ್ ಸ್ಟಾರ್ ಆಗೋ ಕನಸು ಕಾಣುತ್ತಿರೋ ಸಮರ್ಜಿತ್ ಲಂಕೇಶ್ ಬೆನ್ನ ಹಿಂದೆ ಇಬ್ಬರು ಕನ್ನಡದ ಬಿಗ್ ಸ್ಡಾರ್ ನಿಂತಿದ್ದಾರೆ. ಅವರೇ ಬಾದ್ ಷಾ ಕಿಚ್ಚ ಸುದೀಪ್ ಹಾಗು ರಿಯಲ್ ಸ್ಟಾರ್ ಉಪೇಂದ್ರ. ಬಾದ್ ಷಾ ಕಿಚ್ಚ ಸುದೀಪ್ ಗೌರಿ ಹೀರೋ ಸಮರ್ಜಿತ್ ಲಂಕೇಶ್ ನ ಬಿಗ್ ಸ್ಕ್ರೀನ್ ಮೇಲೆ ನೋಡೋಕೆ ಕಾಯುತ್ತಿದ್ದಾರೆ. ಹೀಗಾಗೆ ಕೆಲ ದಿನಗಳ ಹಿಂದಷ್ಟೆ ಗೌರಿ ಸಿನಿಮಾದ ಟ್ರೈಲರ್ ರಿಲೀಸ್ ಮಾಡೋಕೆ ಬಂದಿದ್ದ ಸುದೀಪ್ ಸಮರ್ಜಿತ್ ಬೆನ್ನು ತಟ್ಟಿ ಗೌರಿ ಟ್ರೈಲರ್ ರಿಲೀಸ್ ಮಾಡಿದ್ರು. 

Tap to resize

Latest Videos

ಈಗ ರಿಯಲ್ ಸ್ಟಾರ್ ಉಪೇಂದ್ರ ಗೌರಿ ಗೆಲ್ಲಬೇಕು ಸರ್ಮರ್ಜಿತ್ ಕಟೌಟ್ ಥಿಯೇಟರ್ ಮುಂದೆ ನಿಲ್ಲಬೇಕು ಅಂತ ಹೇಳಿದ್ದಾರೆ. ಅದು ಗೌರಿ ಸಿನಿಮಾ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ. ಸಮರ್ಜಿತ್ ರ ಗೌರಿ ಸಿನಿಮಾದ ಟೈಮ್ ಬರುತ್ತೆ ಹಾಡಿಗೆ ಡಾನ್ಸ್ ಮಾಡಿದ್ದ ಉಪೇಂದ್ರ ಗೌರಿ ಬಗ್ಗೆಯೂ ಮಾತನಾಡಿದ್ದಾರೆ. ಬೆಂಗಳೂರಿನಾ ಮಾಲ್ ಒಂದರಲ್ಲಿ ಗೌರಿ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ ನಡೆದಿದೆ. ಇಲ್ಲಿಗೆ ಸ್ಪೆಷಲ್ ಗೆಸ್ಟ್ ಆಗಿ ಬಂದಿದ್ದ ಉಪೇಂದ್ರ ತನ್ನ ಸಿನಿಮಾದ ಹಾಡಿಗೂ ತನ್ನ ಸಿಗ್ನೆಚರ್ ಸ್ಪೆಪ್ಸ್ ಹಾಕಿದ್ರು. ಇನ್ನೂ ಗೌರಿ ಸಿನಿಮಾದ ಕಾರ್ಯಕ್ರಮದಲ್ಲಿ ಫ್ಯಾಷನ್ ಲೋಕವೇ ಧರೆಗಿಳಿದಿತ್ತು. ಹುಡುಗಾ ಹುಡುಗಿಯರು ಚಂದದ ಸಂಪ್ರದಾಯಿಕ ಉಡುಗೆ ತೊಟ್ಟು ಬೆಕ್ಕಿನ ನಡುಗೆ ಪ್ರದರ್ಶಿಸಿದ್ರು. ಇವರುಗಳ ಮಧ್ಯೆ ಗೌರಿ ನಟ ಸಮರ್ಜಿತ್ ಹಾಗು ನಟಿ ಸಾನ್ಯ ಅಯ್ಯರ್ ರಾಜ ರಾಣಿಯಂತೆ ಕಂಗೊಳ್ಳಿಸಿದ್ರು.

click me!