ಇಪ್ಪತ್ತೈದು ವರ್ಷಗಳ ಬಳಿಕ ಮತ್ತೆ ಬಂದ 'ನಾನು'..; ಉಪೇಂದ್ರ ಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ?

Published : Sep 14, 2024, 11:46 AM ISTUpdated : Sep 14, 2024, 11:47 AM IST
ಇಪ್ಪತ್ತೈದು ವರ್ಷಗಳ ಬಳಿಕ ಮತ್ತೆ ಬಂದ 'ನಾನು'..; ಉಪೇಂದ್ರ ಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ?

ಸಾರಾಂಶ

ಉಪೇಂದ್ರ ಚಿತ್ರ ಮತ್ತೆ ಬಿಡುಗಡೆಯಾಗಿದೆ. 'ನಾನು' ಜೊತೆ ಮೂರು ಸ್ತ್ರೀಯರು ಆಟ ಆಡುತ್ತಾರೆ. ಅಥವಾ, ನಾನು ಈ ಮೂವರು ಸ್ತ್ರೀಯರ ಜೊತೆ ಆಟ ಆಡುತ್ತಾರೆ. ಸ್ವಾತಿ, ರತಿ ಮತ್ತು ಕೀರ್ತಿ ಈ ಮೂವರು ನಾನು ಎಂಬ ವ್ಯಕ್ತಿಯೊಬ್ಬನ ಜೀವನದಲ್ಲಿ ಬರುತ್ತಾರೆ, ನಾನು ಜೀವನದಲ್ಲಿ ಹೇಗೆ ಆಟ ಆಡುತ್ತಾರೆ? 

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಿಸಿ ನಟಿಸಿರುವ 'ಉಪೇಂದ್ರ' ಸಿನಿಮಾ 1999ರಲ್ಲಿ (22 October 1999)  ಬಿಡುಗಡೆ ಕಂಡಿತ್ತು. ಹೆಚ್ಚೇನೂ ಬಜೆಟ್‌ ಖಾಲಿ ಮಾಡದ ಈ ಚಿತ್ರವು ಬರೋಬ್ಬರಿ 10 ಕೋಟಿ ಕಲೆಕ್ಷನ್ ಮಾಡಿತ್ತು ಎನ್ನಲಾಗಿದೆ. ಈ ಚಿತ್ರದಲ್ಲಿ ಉಪೇಂದ್ರ ಜೊತೆ ನಟಿಯರಾದ ಪ್ರೇಮಾ, ರವೀನಾ ಟಂಡನ್ ಹಾಗೂ ದಾಮಿನಿ ನಟಿಸಿದ್ದರು. ಇದೀಗ ಈ ಚಿತ್ರವು 25 ವರ್ಷಗಳ ಬಳಿಕ ಮತ್ತೆ ಬಿಡುಗಡೆ ಕಂಡಿದೆ. 

ಹೌದು, ಇಪ್ಪತೈದು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಉಪೇಂದ್ರ ಅವರ 'ಉಪೇಂದ್ರ' ಚಿತ್ರವು ರೀ-ರಿಲೀಸ್ ಆಗಿದ್ದು ಮತ್ತೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವು ಅಂದು ಸೂಪರ್ ಹಿಟ್ ದಾಖಲಿಸಿದ್ದೂ ಅಲ್ಲದೇ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿತ್ತು. 'ನಾನು' ಎಂಬ ಪಾತ್ರವನ್ನು ಸೃಷ್ಟಿಸಿ ಅದು 'ನಮ್ಮ ಅಹಂ' ಎಂದಿರುವ ಉಪೇಂದ್ರ ಅವರು, ಅದು ಪ್ರತಿಯೊಬ್ಬರಲ್ಲೂ ಇರುತ್ತದೆ ಎಂಬುದನ್ನು ವಿಭಿನ್ನವಾಗಿ ನಿರೂಪಿಸಿದ್ದರು. ಅಂದು ಈ ಚಿತ್ರವು ತೀರಾ ವಿಶೇಷ ಹಾಗೂ ವಿಭಿನ್ನ ಚಿತ್ರ ಎಂದು ಖ್ಯಾತಿ ಪಡೆದಿತ್ತು. 

ಬಿಡುಗಡೆಯಾಯ್ತು 'ಕರ್ಕಿ' ಹಾಡು, ಮತ್ತೊಂದು ಮಣ್ಣಿನ ಸೊಗಡಿನ ಚಿತ್ರಕ್ಕೆ ಕೌಂಟ್ ಡೌನ್!

ನಾನು ಜೊತೆ ಮೂರು ಸ್ತ್ರೀಯರು ಆಟ ಆಡುತ್ತಾರೆ. ಅಥವಾ, ನಾನು ಈ ಮೂವರು ಸ್ತ್ರೀಯರ ಜೊತೆ ಆಟ ಆಡುತ್ತಾರೆ. ಸ್ವಾತಿ, ರತಿ ಮತ್ತು ಕೀರ್ತಿ ಈ ಮೂವರು ನಾನು ಎಂಬ ವ್ಯಕ್ತಿಯೊಬ್ಬನ ಜೀವನದಲ್ಲಿ ಬರುತ್ತಾರೆ. ಅವರು ನಾನು ಜೀವನದಲ್ಲಿ ಹೇಗೆ ಆಟ ಆಡುತ್ತಾರೆ? ಅಥವಾ ನಾನು ಜೀವನ ಅವರ ಎಂಟ್ರಿಯಿಂದ ಹೇಗೆಲ್ಲಾ ಬದಲಾವಣೆಗೆ ಒಳಗಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ನಟ-ನಿರ್ದೇಶಕ ಉಪೇಂದ್ರ ಅವರು ಮನಮುಟ್ಟುವಂತೆ ನಿರ್ದೇಶಿಸಿದ್ದಾರೆ. ನಾನು ಎನ್ನುವುದು ಸತ್ಯವನ್ನು ಹೇಳುವ ಪಾತ್ರವೆಂದು ಈ ಚಿತ್ರದಲ್ಲಿ ಉಪ್ಪಿಯವರು ಬಿಂಬಿಸಿದ್ದಾರೆ. 

ಒಟ್ಟಿನಲ್ಲಿ, ರಿಯಲ್ ಸ್ಟಾರ್ ಉಪೇಂದ್ರ ಅವರು 25 ವರ್ಷಗಳ ಹಿಂದೆ ನಟಿಸಿ-ನಿರ್ದೇಶಿಸಿದ್ದ ಉಪೇಂದ್ರ ಚಿತ್ರವು ಅಂದು ಯುವ ಸಮೂಹವನ್ನು ಹುಚ್ಚೆಬ್ಬಿಸಿತ್ತು. ಟ್ರೆಂಡ್ ಸೆಟ್ಟರ್ ಎನಿಸಿಕೊಂಡಿದ್ದ ಉಪೇಂದ್ರ ಚಿತ್ರವು ಮತ್ತೆ ರೀ-ರಿಲೀಸ್ ಮೂಲಕ ಇಂದಿನ ಯುವ ಸಮೂಹವನ್ನು ರೀಚ್ ಆಗಲಿದೆ. ಈಗ ಈ ಚಿತ್ರದ ಬಗ್ಗೆ, ನಾನು ಪಾತ್ರ ಹಾಗೂ ಅಲ್ಲಿ ಹೇಳಿರುವ ಸಂಭಾಷಣೆ ಬಗ್ಗೆ ಇಂದಿನ ಯುವ ಸಮೂಹದ ಅಭಿಪ್ರಾಯ ಏನಿದೆ ಎಂಬುದು ಸದ್ಯದಲ್ಲೇ ತಿಳಿಯಲಿದೆ. 

ಕಾಲಾಪತ್ಥರ್ ಚಿತ್ರ ವಿಮರ್ಶೆ: ಅಹಂಕಾರದ ಅಂತರ್ಯದ್ಧದಲ್ಲಿ ದಡ ಸೇರಲು ಅಣ್ಣಾವ್ರೇ ದೇವ್ರು..!

ಅಂದಹಾಗೆ, ಈ ಚಿತ್ರದ ಬಿಡುಗಡೆ ವೇಳೆ ಉಪೇಂದ್ರ ಚಿತ್ರದ ನಟ-ನಿರ್ದೇಶಕ ಉಪೇಂದ್ರ ಅವರು ಹೀಗೆ ಬರೆದು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಪೋಸ್ಟ್ ಮಾಡಿದ್ದಾರೆ- ನಾನು 'ನಾನು' ಬಿಡಕ್ ಟ್ರೈ ಮಾಡ್ತಿದೀನಿ ….। ಆದ್ರೆ ನೀನು… 'ನಾನು'ನ ಬಿಡ್ತಿಲ್ಲ.. ನಿಮ್ಮ 'ನಾನು' ರೀ ರಿಲೀಸ್ …ಇದೇ ಸೆಪ್ಟೆಂಬರ್ 20 ಕ್ಕೆ …25 ವರ್ಷ ಆದರೂ ಇನ್ನೂ ಈ ಚಿತ್ರದ ಹಾಡು, ಸಂಭಾಷಣೆ ಜೀವಂತವಾಗಿ ಇಟ್ಟಿರುವ ನಿಮಗೆ 🙏❤️🙏.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?