
ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನ ‘ಕೆಜಿಎಫ್ 2’ ಚಿತ್ರದಲ್ಲಿ ಪ್ರಕಾಶ್ ರೈ ಪಾತ್ರ ಏನಾಗಿರಬಹುದು ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ.
ಚಿತ್ರದಲ್ಲಿ ಅವರು ವಿಜಯೇಂದ್ರ ಇಂಗಳಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 70 ಹಾಗೂ ೮೦ರ ದಶಕದ ಹಿನ್ನೆಲೆಯಲ್ಲಿ ಪ್ರಕಾಶ್ ರೈ ಪಾತ್ರ ಮೂಡಿ ಬರಲಿದೆ ಎಂಬುದನ್ನು ಪ್ರಶಾಂತ್ ನೀಲ್ ತಮ್ಮ ಟ್ವಿಟ್ಟರ್‌ನಲ್ಲಿ ಮಾ.26ರಂದು ಪ್ರಕಾಶ್ ರೈ ಹುಟ್ಟುಹಬ್ಬ ಪ್ರಯುಕ್ತ ಬಿಡುಗಡೆ ಮಾಡಿರುವ ಪೋಸ್ಟರ್ ಮೂಲಕ ತಿಳಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದ ದಂಡಿ ಚಿತ್ರದಲ್ಲಿ ತಾರಾ
‘ಹಿರಿಯ ನಟ ಅನಂತ್‌ನಾಗ್ ಅವರ ಪಾತ್ರವನ್ನೇ ಪ್ರಕಾಶ್ ರೈ ಮಾಡುತ್ತಿಲ್ಲ. ಆ ಪಾತ್ರ ಬೇರೆ, ಪ್ರಕಾಶ್ ರೈ ಅವರ ಪಾತ್ರವೇ ಬೇರೆ’ ಎಂದಿದ್ದರು ನಿರ್ದೇಶಕ ಪ್ರಶಾಂತ್ ನೀಲ್.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಚರ್ಚೆ, ವಾದ- ವಿವಾದ ನಡೆಯಿತು. ಕೊನೆಗೂ ರೈ ಅವರ ಪಾತ್ರವೇ ಬೇರೆ ಎಂಬುದನ್ನು ವಿಜಯೇಂದ್ರ ಇಂಗಳಗಿ ಹೆಸರು ಹೇಳುತ್ತಿದೆ. ಈ ಪಾತ್ರದ ಹಿನ್ನೆಲೆ ಏನು ಅನ್ನುವುದು ಸದ್ಯ ರಿವೀಲ್ ಆಗಿಲ್ಲ. ಅಂದಹಾಗೆ ಅನಂತ್‌ನಾಗ್ ಪಾತ್ರದ ಹೆಸರು ಆನಂದ್ ಇಂಗಳಗಿ ಎಂದಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.