
ಮೊದಲ ಬಾರಿಗೆ ಫೈಟ್: ನೂರು ಚಿತ್ರಗಳನ್ನುದಾಟಿದ್ದೇನೆ. ಇದುವರೆಗೂ ಯಾವ ಚಿತ್ರದಲ್ಲೂ ದೈಹಿಕವಾಗಿ ನಾನು ವಿಲನ್‌ಗಳ ಜತೆಗೆ ಫೈಟ್ ಮಾಡಿಲ್ಲ. ಹಾಗೆ ನೋಡಿದರೆ ನನ್ನ ಚಿತ್ರಗಳಲ್ಲಿ ಸನ್ನಿವೇಶ ಹಾಗೂ ಸಂದರ್ಭಗಳೇ ವಿಲನ್ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಅಲ್ಲಿ ನಾನು ಮಾನಸಿಕವಾಗಿ ಫೈಟ್ ಮಾಡಿದ್ದೇನೆ ಹೊರತು, ಫೈಟ್ ಮಾಸ್ಟರ್‌ಗಳನ್ನು ಇಟ್ಟುಕೊಂಡು ಪ್ರತ್ಯೇಕವಾಗಿ ಸಾಹಸಗಳನ್ನು ಕಂಪೋಸ್ ಮಾಡಿಲ್ಲ.
ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್ ಟೀಸರ್ ಸೂಪರ್‌ಹಿಟ್
ಆದರೆ, ಮೊದಲ ಬಾರಿಗೆ ‘100’ ಇಬ್ಬರು ಫೈಟ್ ಮಾಸ್ಟರ್‌ಗಳನ್ನು ಇಟ್ಟುಕೊಂಡು ನಾಲ್ಕು ಅದ್ದೂರಿ ಫೈಟ್ ಮಾಡಿದ್ದೇನೆ. ವಿಲನ್‌ಗಳ ಜತೆಗೆ ಮುಖಾಮುಖಿ ಆಗಿ ಫೈಟ್ಮಾಡಿದ್ದು, ನನ್ನ ಚಿತ್ರಗಳಲ್ಲಿ ನೇರವಾಗಿ ವಿಲನ್ ಪಾತ್ರ ಇರುವುದು ಈ ಚಿತ್ರದಲ್ಲಿ ಮಾತ್ರ. ಅದರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಫೈಟ್ ಅನ್ನು ರವಿರ್ಮ ಮಾಡಿದ್ದಾರೆ ತುಂಬಾ ರೋಚಕವಾಗಿದೆ.
ನಾನು ತ್ಯಾಗರಾಜ ಅಲ್ಲ: ಚಿತ್ರರಂಗದಲ್ಲಿ ನನಗೆ ತ್ಯಾಗರಾಜನ ಪಟ್ಟ ಕೊಟ್ಟು ತುಂಬಾ ವರ್ಷಗಳೇ ಆಗಿವೆ. ಆದರೆ, ಇಲ್ಲಿ ನಾನು ತ್ಯಾಗರಾಜ ಅಲ್ಲ. ಮೊದಲ ಬಾರಿಗೆ ನನ್ನ ಆ ದಿನಗಳ ಇಮೇಜ್ ಅನ್ನು ಕಳಚಿಟ್ಟಿದ್ದೇನೆ. ಪೊಲೀಸ್ ಪಾತ್ರವಾದರೂ ಈ ಸಿನಿಮಾ ನನಗೆ ಒಂದು ರೀತಿಯಲ್ಲಿ ಆ್ಯಕ್ಷನ್ ಇಮೇಜ್ ನೀಡಿದೆ. ಈ ಚಿತ್ರದಿಂದ ನನಗೆ ಗೊತ್ತಾಗಿದ್ದು, ನಾನೂ ಕೂಡ ಫೈಟ್ ದೃಶ್ಯಗಳನ್ನು ನಿಭಾಯಿಸಬಹುದು, ಫೈಟ್ ಮಾಸ್ಟರ್‌ಗಳು ಹೇಳಿದ್ದನ್ನು ತೆರೆ ಮೇಲೆ ತೋರುವ ಶಕ್ತಿ ನನಗೂ ಇದೆ ಎನ್ನುವ ನಂಬಿಕೆ ಮೂಡಿಸಿದ್ದು ‘100’ ಸಿನಿಮಾ. ಆ್ಯಕ್ಷನ್ ಇಮೇಜ್ ನೀಡುತ್ತಿರುವ ಕಾರಣಕ್ಕೆ ನನಗೆ ಇದು ವಿಶೇಷ ಸಿನಿಮಾ ಅನಿಸಿದೆ.
ರಮೇಶ್ ಹೇಳುವ ಸೋಷಲ್ ಕ್ರೈಮ್ ಕಥೆ: ನೂರು ಮಾತು,100 ದಿನ ಭರವಸೆ!
ಕ್ರೈಮ್ ಮನೆಗೇ ಬಂದರೆ?: ಇದು ಡಿಜಿಟಲ್ ಯುಗ. ಸೈಬರ್ ಕ್ರೈಮ್ ಗಳದ್ದೇ ದೊಡ್ಡ ಕತೆ. ಪ್ರತಿ ನಿತ್ಯ ನಾವು ಬೇರೆ ಬೇರೆ ರೀತಿಯ ಸೈಬರ್ ಕ್ರೈಮ್‌ಗಳನ್ನು ಕೇಳುತ್ತಿದ್ದೇವೆ, ಆ ಬಗ್ಗೆ ಬರುವ ಸುದ್ದಿಗಳನ್ನು ಓದುತ್ತಿದ್ದೇವೆ. ಒಂದು ವೇಳೆ ಅಂಥ ಸೈಬರ್ ಕ್ರೈಮ್ ನೆರಳೊಂದು ನಮ್ಮ ಮನೆಗೇ ಬಂದರೆ ಏನಾಗುತ್ತದೆ, ಪೊಲೀಸ್ ಮನೆಯೇ ಸೈಬರ್ ಕ್ರೈಮ್‌ಗೆ ಗುರಿಯಾದರೆ ಹೇಗಿರುತ್ತದೆ ಎಂಬುದನ್ನು ಹೇಳುವ ಸಿನಿಮಾ ‘100’. ಯಾವುದು ಆ ಕ್ರೈಮ್ ನೆರಳು ಎಂಬುದನ್ನು ತೆರೆ ಮೇಲೆ ನೋಡಬೇಕು. ಇಲ್ಲಿವರೆಗೂ ಫ್ಯಾಮಿಲಿ ಸಿನಿಮಾಗಳನ್ನು ನಿರ್ದೇಶಿಸಿದ್ದೇನೆ, ನಟಿಸಿದ್ದೇನೆ. ಆದರೆ, ಫ್ಯಾಮಿಲಿ ಜತೆಗೆ ಕ್ರೈಮ್ ಥ್ರಿಲ್ಲರ್ ಕತೆಯನ್ನು ನಿಭಾಯಿಸಿದ್ದು ಈ ಚಿತ್ರದ ಸವಾಲು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.