
ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟರಲ್ಲೊಬ್ಬರಾದ ರಮೇಶ್ ಅರವಿಂದ್. ಈಚೆಗಷ್ಟೇ ಅಂದ್ರೆ ಸೆಪ್ಟೆಂಬರ್ 10ರಂದು 59ನೇ ವರ್ಷವನ್ನೂ ಪೂರೈಸಿರುವ ರಮೇಶ್ ವೇದಿಕೆ ಮೇಲೆ ಅಡಿಯಿಟ್ಟರೆ ಯುವಕರನ್ನೂ ನಾಚಿಸುತ್ತಾರೆ. ಇಷ್ಟು ವಯಸ್ಸಾಗಿದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲದಷ್ಟು ದೇಹವನ್ನು ಮೆಂಟೇನ್ ಮಾಡಿದ್ದಾರೆ. ಇದೀಗ ದೈಜಿ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದಕ್ಕಾಗಿಯೇ ಲುಕ್ ಕೂಡ ಬದಲಿಸಿಕೊಂಡಿದ್ದು, ದೇಹದ ತೂಕವನ್ನ ಕೂಡ ಕಡಿಮೆ ಮಾಡಿಕೊಂಡಿದ್ದಾರಂತೆ. ಇವೆಲ್ಲವುಗಳ ನಡುವೆಯೇ ರಮೇಶ್ ಈಗ ಲಕಲಕ ಹೊಳೆಯುತ್ತಿದ್ದು, ಬಂಗಾರವ ಮನುಷ್ಯ ಆಗಿದ್ದಾರೆ! ಈ ಹೊಸ ಲುಕ್ ವಿಡಿಯೋ ಶೇರ್ ಮಾಡಿಕೊಂಡಿದ್ದು, ಹೊಸ ಚಿತ್ರನಾ ಅಂತ ಫ್ಯಾನ್ಸ್ ಕೇಳುತ್ತಿದ್ದಾರೆ. ಹಿಂದೆಂದೂ ಕಂಡರಿಯದ ವಿಶೇಷ ಲುಕ್ನಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದಾರೆ.
ಅಷ್ಟಕ್ಕೂ ಇದು ಯಾವ ಚಿತ್ರದ ಲುಕ್ ಅಲ್ಲ. ಬದಲಿಗೆ ಬೆಂಗಳೂರಿನಲ್ಲಿ ಬೆಂಗಳೂರು ಜ್ಯುವೆಲರ್ಸ್ ಅಸೋಸಿಯೇಷನ್ ಅವರು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಚರಿಸುತ್ತಿರುವ ಬೆಂಗಳೂರು ಗೋಲ್ಡ್ ಫೆಸ್ಟಿವಲ್‌ನ ಲುಕ್ ಇದು. ಹೌದು. ಈ ಉತ್ಸವಕ್ಕೆ ರಮೇಶ್ ಅವರು ರಾಯಭಾರಿ ಆಗಿದ್ದಾರೆ. ಇದಕ್ಕಾಗಿಯೇ ಮೈತುಂಬ ಚಿನ್ನಾಭರಣಗಳನ್ನು ಧರಿಸಿದ್ದು, ಬಂಗಾರ ವರ್ಣದ ಪ್ಯಾಂಟ್ ಮತ್ತು ಸೂಟ್‌ನಲ್ಲಿ ಮಿಂಚಿದ್ದಾರೆ ರಮೇಶ್ ಅರವಿಂದ್. ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ನಿನ್ನೆ ಅಂದರೆ ಅಕ್ಟೋಬರ್ 15ರಿಂದ ಈ ಉತ್ಸವ ಆರಂಭಗೊಂಡಿದ್ದು 45 ದಿನಗಳ ಕಾಲ ನಡೆಯಲಿದೆ.
SARIGAMAPA: ಕುರಿಗಾಹಿಯ ನಾಲಿಗೆ ಮೇಲೆ ಕಲಾಸರಸ್ವತಿ- ಕಂಠ ಮಾಧುರ್ಯಕ್ಕೆ ಕಣ್ಣೀರಾದ ಹಂಸಲೇಖ
ದುಬೈ ಗೋಲ್ಡ್ ಫೆಸ್ಟಿವಲ್ ಮಾದರಿಯಲ್ಲಿ ಈ ಉತ್ಸವ ಆಯೋಜನೆ ಮಾಡಲಾಗಿದೆ. ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಬೆಂಗಳೂರು ವೈವಿಧ್ಯತೆಯನ್ನು ಎತ್ತಿ ಹಿಡಿಯುವುದು ಮತ್ತು ಪ್ರವಾಸೋದ್ಯಮ ಉತ್ತೇಜಿಸುವುದು ಇದರ ಉದ್ದೇಶವಾಗಿದೆ. 'ಚಿನ್ನ ಉಳಿಸಿ, ಚಿನ್ನ ನಿಮ್ಮನ್ನು ಉಳಿಸುತ್ತದೆ' ಎಂಬ ಘೋಷವಾಕ್ಯದಡಿ 2ನೇ ಆವೃತ್ತಿಯ ಉತ್ಸವ ಇದಾಗಿದ್ದು, ಬೆಂಗಳೂರು ಮತ್ತು ತುಮಕೂರು, ಹಾಸನ ಮತ್ತು ಶಿವಮೊಗ್ಗ ಸೇರಿದಂತೆ ಎರಡನೇ ಶ್ರೇಣಿಯ ಸುಮಾರು 200 ಚಿನ್ನಾಭರಣ ಮಳಿಗೆಗಳಲ್ಲಿ ಪಾಲ್ಗೊಂಡಿವೆ.
ಇದಕ್ಕೆ ರಮೇಶ್ ಅರವಿಂದ ರಾಯಭಾರಿಯಾಗಿದ್ದಾರೆ. ಚಿನ್ನ ಖರೀದಿಸುವ ಗ್ರಾಹಕರಿಗೆ ಪ್ರತಿ 5 ಸಾವಿರ ರೂಪಾಯಿಗೆ ಒಂದು ಕೂಪನ್ ನೀಡಲಾಗುತ್ತದೆ. ಲಕ್ಕಿ ಡ್ರಾ ಮೂಲಕ ವಿಜೇತರಿಗೆ 2.5 ಕೆ.ಜಿ.ಬಂಗಾರ, 43 ಕೆ.ಜಿ. ಬೆಳ್ಳಿ, ಒಂದು ಐ10 ಕಾರು ಒಳಗೊಂಡಂತೆ ಅಂದಾಜು 2 ಕೋಟಿ ರೂ. ಬಹುಮಾನ ನೀಡಲಾಗುವುದು. ಲಕ್ಕಿ ಡ್ರಾ ಸಂಪೂರ್ಣವಾಗಿ ಡಿಜಿಟಲ್ ಮೂಲಕ ನಡೆಯಲಿದೆ.
ಕೈಲಾಸಕ್ಕೆ ಭೇಟಿ ಬೆನ್ನಲ್ಲೇ ಪ್ರಧಾನಿ ಮೋದಿಯಿಂದ ಅಮಿತಾಭ್ ಬಚ್ಚನ್ಗೆ ಬಂತೊಂದು ಆಹ್ವಾನ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.