
23 ವರ್ಷಗಳ ಹಿಂದೆ 100 ದಿನಗಳ ಯಶಸ್ವಿ ಪ್ರದರ್ಶನ ಪೂರೈಸಿದ್ದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರವರ ಅಪ್ಪು ಸಿನಿಮಾ. ರಕ್ಷಿತಾ ಮತ್ತು ಪುನೀತ್ ಜೋಡಿಯಾಗಿ ನಟಿಸಿದ ಮೊದಲ ಸಿನಿಮಾ ಹಾಗೂ ಇದು ಅವರಿಬ್ಬರ ಚೊಚ್ಚಲ ಸಿನಿಮಾ ಆಗಿತ್ತು. ಓಪನಿಂಗ್ ಚಿತ್ರವೇ 100 ದಿನ ಪ್ರದರ್ಶನ ಪಡೆದ ಪ್ರಯುಕ್ತ ಅಣ್ಣಾವ್ರು ಮತ್ತು ಪಾರ್ವತಮ್ಮನವರು ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ತಲಾ ರಜನಿಕಾಂತ್ ಸೇರಿಂದತೆ ದೊಡ್ಡ ಸ್ಟಾರ್‌ಗಳು ಭಾಗಿಯಾಗಿ 100 ಡೇಸ್ ಶೀಲ್ಡ್ ನೀಡಿದ್ದರು.
ಈಗ ಪುನೀತ್ 50ನೇ ಹುಟ್ಟುಹಬ್ಬದ ಪ್ರಯುಕ್ತ ಪಿಆರ್‌ಕೆ ಸ್ಟುಡಿಯೋಸ್ ಅಡಿಯಲ್ಲಿ ಅಪ್ಪು ಸಿನಿಮಾವನ್ನು ಮತ್ತೆ ರಿಲೀಸ್ ಮಾಡಲಾಗುತ್ತಿದೆ. ಇದರ ಬಗ್ಗೆ ನಟಿ ರಕ್ಷಿತಾ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.'ಫಸ್ಟ್ ಸಿನಿಮಾ ಅಂದಾಗ ಎಲ್ಲಾ ನೆನಪುಗಳು ತುಂಬಾ ಬ್ಯೂಟಿಫುಲ್ ಆಗಿರುತ್ತದೆ. ಆ ಎಕ್ಸ್‌ಪೀರಿಯನ್ಸ್ ತುಂಬಾ ಬ್ಯೂಟಿಫುಲ್ ಆಗಿರುತ್ತದೆ. ಅಪ್ಪು ಸಿನಿಮಾ ನನ್ನ ಜೀವನದಲ್ಲಿ ಡಬಲ್ ಸ್ಪೆಷಲ್ ಆಗಿರುತ್ತದೆ. ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ನಮ್ಮ ಅಪ್ಪ ಮತ್ತು ಅಮ್ಮ ಅವರವರ ಕರಿಯರ್ ಶುರು ಮಾಡಿದ್ರು. ನನ್ನ ಜೀವನದಲ್ಲಿ ದೊಡ್ಡ ಸ್ಫೂರ್ತಿ ಅಂದ್ರೆ ಪಾರ್ವತಮ್ಮ ರಾಜ್‌ಕುಮಾರ್ ಅವರು. ಅಪ್ಪು ಸಿನಿಮಾವನ್ನು ನೆನಪಿಸಿಕೊಂಡಾಗ ಅವರನ್ನು ನೆನಪಿಸಿಕೊಳ್ಳದೆ ಇರಲು ಆಗಲ್ಲ. ಅವರು ಸದಾ ನನ್ನ ಸ್ಫೂರ್ತಿಯಾಗಿರುತ್ತಾರೆ. ಅಪ್ಪು ಸಿನಿಮಾದಲ್ಲಿ ಸಾಕಷ್ಟು ಒಳ್ಳೆ ನೆನಪುಗಳನ್ನು ಕ್ರಿಯೇಟ್ ಮಾಡಿದ್ವಿ' ಎಂದು ರಕ್ಷಿತಾ ಪ್ರೇಮ್ ಮಾತನಾಡಿದ್ದಾರೆ.
ಏನ್ ಮೇಡಂ ನೀವು ಇಷ್ಟೋಂದು ಸಿಂಪಲ್ಲಾಗಿ ಬರ್ತೀರಾ ಸ್ವಲ್ಪ ಸ್ಟೈಲ್ ಮಾಡಿ; ಸೋನಲ್ ಲುಕ್ ಮೆಚ್ಚಿದ ಜನರು
'ಮೊದಲ ಚಿತ್ರದಲ್ಲೇ ಅಪ್ಪು ಅದ್ಭುತ ನಟ, ಡ್ಯಾನ್ಸರ್ ಹಾಗೂ ಫೈಟರ್ ಆಗಿದ್ದರು....ಅಬ್ಬಾ ಆ ಡೈಲಾಗ್‌ಗಳನ್ನು ಎಷ್ಟು ಚೆನ್ನಾಗಿ ಮಾತನಾಡುತ್ತಿದ್ದರು ಗೊತ್ತಾ? ಅಪ್ಪು ಪಕ್ಕದಲ್ಲಿ ಯಾವುದಾದರೂ ಸೀನ್ ಅಕ್ಟ್ ಮಾಡುವುದಕ್ಕೆ ಅಥವಾ ಡ್ಯಾನ್ಸ್ ಮಾಡುವುದಕ್ಕೆ ತುಂಬಾ ಕಷ್ಟ ಆಗುತ್ತಿತ್ತು ಏಕೆಂದರೆ ಅವರು ನ್ಯಾಷನಲ್ ಅವಾರ್ಡ್ ವಿನ್ನರ್, ಫ್ಯಾಬುಲ್ಸ್ ಫೈಟರ್ ಹಾಗೂ ಡ್ಯಾನ್ಸರ್. ಇವತ್ತು ನಮ್ಮ ಕನ್ನಡ ಚಿತ್ರರಂಗ ಅಷ್ಟು ಬ್ಯೂಟಿಫುಲ್ ಆಗಿ ಡ್ಯಾನ್ಸ್ ಮಾಡುವವರು ಯಾರೂ ಇಲ್ಲ. ಯಾವ ಹೀರೋನೂ ಅಪ್ಪು ಅಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಲು ಆಗಲ್ಲ. ಅಪ್ಪು ಸಿನಿಮಾದಿಂದ ನೆನಪಾಗುವುದು ಅಶ್ವಿನಿ, ಪೂರಿ ಜಗನ್ನಾಥ್ ಸರ್, ಮಹೇಶ್ ಬಾಬು ಆ ಸಿನಿಮಾಗೆ ಅಸೋಸಿಯೇಟ್ ಆಗಿದ್ದರು ಹಾಗೂ ದತ್ತು ಸೋನು ಕ್ಯಾಮೆರಾ ಮೆನ್ ಆಗಿದ್ದರು. ಗುರು ಸರ್ ಮ್ಯೂಸಿಕ್ ಸೂಪರ್ ಆಗಿತ್ತು. ನಿಜ ಹೇಳಬೇಕು ಅಂದ್ರೆ ಅಪ್ಪು ಸಿನಿಮಾ ನನ್ನ ಜೀವನದ ಮರೆಯಲಾಗದ ಸಿನಿಮಾಗಳಲ್ಲಿ ಒಂದು. 23 ವರ್ಷಗಳ ಆದ್ಮೇಲೆ ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬಕ್ಕೆ ರಿಲೀಸ್ ಆಗುತ್ತಿದೆ ಅದಕ್ಕಿಂತ ಏನ್ ಸ್ಪೆಷಲ್ ಬೇಕು?ಖಂಡಿತಾ ಮೊದಲ ದಿನವೇ ಫಸ್ಟ್ ಶೋ ನೋಡಲು ಹೋಗುತ್ತೀನಿ' ಎಂದು ರಕ್ಷಿತಾ ಹೇಳಿದ್ದಾರೆ.
ರನ್ಯಾ ರಾವ್ ಜೀವನ ಘನಘೋರ ಆಗುತ್ತಿದ್ದಂತೆ ದುಬೈ ಟ್ರಿಪ್ ಫೋಟೋಗಳನ್ನು ಡಿಲೀಟ್ ಮಾಡಿದ ಸ್ಟಾರ್ ನಟಿಯರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.