ನನಗೆ ಯಾವುದೂ ಸುಲಭವಾಗಿ ಸಿಕ್ಕಿಲ್ಲ ಪ್ರತಿಯೊಂದಕ್ಕೂ ಕಷ್ಟ ಪಟ್ಟಿದ್ದೀನಿ: ನಟಿ ರಕ್ಷಿತಾ ಪ್ರೇಮ್

By Vaishnavi Chandrashekar  |  First Published Sep 25, 2024, 4:28 PM IST

ಪದೇ ಪದೇ ನೆಪೋಟಿಸಂ ಬಗ್ಗೆ ಮಾತನಾಡುವ ಜನರಿಗೆ ಕಿವಿ ಮಾತು ಹೇಳಿದೆ ನಟಿ ರಕ್ಷಿತಾ ಪ್ರೇಮ್......
 


ಕನ್ನಡ ಚಿತ್ರರಂಗದ ಕ್ರೇಜಿ ಕ್ವೀನ್ ರಕ್ಷಿತಾ ಇಂದಿಗೂ ಎಂದೆಂದಿಗೂ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಕ್ರೇಜಿ ಕ್ವೀನ್. 2002ರಲ್ಲಿ ಅಪ್ಪು ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟ ರಕ್ಷಿತಾ ಕೊನೆಯ ಸಿನಿಮಾ 2007ರಲ್ಲಿ ಬಿಡುಗಡೆ ಕಂಡ ತಾಯಿಯ ಮಡಿಲು. ಅಲ್ಲಿಯವರೆಗೂ ಪ್ರತಿಯೊಂದು ಸಿನಿಮಾ ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಕಂಡಿದೆ. 2022ರಲ್ಲಿ ಸಹೋದರರನ್ನು ಲಾಂಚ್‌ ಮಾಡಿದ ಏಕ್‌ ಲವ್ ಯಾ ಸಿನಿಮಾದಲ್ಲಿ ಸ್ಪೆಷಲ್ ಎಂಟ್ರಿ ಕೊಟ್ಟಿದ್ದರು. ಅದು ಬಿಟ್ಟರೆ ಸಂಪೂರ್ಣವಾಗಿ ನಿರ್ಮಾಪಕಿಯಾಗಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ರಕ್ಷಿತಾ ಜಡ್ಜ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎರಡು ಬೇರೆ ಬೇರೆ ಇನ್ನಿಂಗ್ಸ್‌ ಆದರೂ ಜನಪ್ರಿಯತೆ ಯಾವತ್ತೂ ಕಡಿಮೆ ಆಗಿಲ್ಲ.

40 ವರ್ಷದ ರಕ್ಷಿತಾ ತಮ್ಮ ಜೀವನನ್ನು ಹೇಗೆ ನೋಡುತ್ತಾರೆ ಎಂದು ರ್ಯಾಪಿಡ್ ರಶ್ಮಿ ಪ್ರಶ್ನೆ ಮಾಡಿದಾಗ '40 ವರ್ಷದಲ್ಲಿ ನಾನು ಜೀವನವನ್ನು ಹೇಗೆ ನೋಡುತ್ತಿರುವೆ?...ಜೀವನದಲ್ಲಿ ಯಾವುದೂ ಸುಲಭವಲ್ಲ. ಒಂದು ನಿಮಿಷ ಯೋಚನೆ ಮಾಡಿದಾಗ ಗೊತ್ತಾಗುತ್ತದೆ ಯಾವುದೂ ಸುಲಭವಾಗಿ ಬಂದಿಲ್ಲ ಪ್ರತಿಯೊಂದನ್ನು ಕಷ್ಟಪಟ್ಟು ಗಳಿಸಿದ್ದೀನಿ. ಇಂಡಸ್ಟ್ರಿ ಬ್ಯಾಗ್ರೌಂಡ್‌ನಿಂದ ಬಂದಿರುವ ಹುಡುಗಿ ಅಂತ ಹಿಂದಿನಿಂದ ಕೊಂಚ ಪುಶ್ ಇತ್ತು ಬಿಟ್ಟರೆ ಬೇರೆ ಏನೂ ಇಲ್ಲ' ಎಂದು ರಕ್ಷಿತಾ ಉತ್ತರಿಸಿದ್ದಾರೆ.

Tap to resize

Latest Videos

undefined

ಬೀದಿ ನಾಯಿ ಪ್ರಾಣ ಉಳಿಸಿದ ಸೋನು ಗೌಡ; ನಿನ್ನಲ್ಲೂ ಒಳ್ಳೆ ಗುಣಗಳಿದೆ ಎಂದು ಕೊಂಡಾಡುತ್ತಿರುವ ನೆಟ್ಟಿಗರು!

ನೆಪೋಟಿಸಂ:

ಇವತ್ತಿಗೂ ನನಗೆ ನೆಪೋಟಿಸಂ ಪದದ ಅರ್ಥವೇ ಗೊತ್ತಿಲ್ಲ..ಏಕೆಂದರೆ ಇಂಜಿನಿಯರ್‌ ಮಕ್ಕಳು ಇಂಜಿನಿಯರ್ ಆಗುತ್ತಾರೆ ಅದು ಅವರ ತಾಕತ್ತು, ಡಾಕ್ಟರ್ ಮಕ್ಕಳು ಚೆನ್ನಾಗಿ ಓದಿ ಡಾಕ್ಟರ್ ಆಗುತ್ತಾರೆ ಹೀಗಿರುವಾಗ ಕಲಾವಿದರ ಮಕ್ಕಳು ಏನಾಗಬೇಕು? ಮೊದಲ ಸಿನಿಮಾ ಅಂತ ಮಕ್ಕಳಿಗೋಸ್ಕರ ಮಾಡಬೇಕು ಆದರೆ ಅದಾದ ಮೇಲೆ ಏನು ಮಾಡಬೇಕು? ನೆಪೋಟಿಸಂನಿಂದ ಯಾರೂ ಸೂಪರ್ ಸ್ಟಾರ್ ಆಗುವುದಿಲ್ಲ ಏಕೆಂದರೆ ಬ್ಯಾಗ್ರೌಂಡ್ ಇರುವುದು ಒಂದು ಪುಶ್ ಅಥವಾ ಧೈರ್ಯ ಕೊಡುತ್ತದೆ ಅಷ್ಟೇ...ನಮ್ಮ ಜೀವನ ನಾವೇ ನೋಡಿಕೊಳ್ಳಬೇಕು..ಈಗಿನ ಜನರೇಷನ್‌ನಲ್ಲಿ ಕನ್ನಡ, ತೆಲುಗು, ತಮಿಳು ಅಂತ ಇಲ್ಲ ಭಾರತೀಯ ಸಿನಿಮಾರಂಗ ಅಂತ ಒಂದೇ ಇರುವುದು. ಕನ್ನಡದಲ್ಲಿ ನಿಮ್ಮ ಅಪ್ಪ ಇದ್ದಾರೆ ಆದರೆ ನೀವು ತೆಲುಗು ಚಿತ್ರಕ್ಕೆ ಹೋದರೆ ಏನು ಮಾಡಲು ಆಗುತ್ತದೆ. ನನ್ನ ಪ್ರತಿಯೊಂದು ಹೆಜ್ಜೆಯನ್ನು ನೋಡಿದಾಗ ಒಂದು ಒಳ್ಳೆ ಜರ್ನಿಯಾಗಿರುತ್ತಾರೆ ಆದರೆ ಅದರಲ್ಲಿ ಏನಾದರೂ ಬದಲಾವಣೆ ಮಾಡಬೇಕು ಅನ್ನೋದಾದರೆ ಏನೂ ಮಾಡಲ್ಲ ಆದರೆ ನಾನು ಇನ್ನು ಹೆಚ್ಚು ತಾಳ್ಮೆಯನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತೀನಿ ಎಂದು ರಕ್ಷಿತಾ ಹೇಳಿದ್ದಾರೆ. 

30 ದಾಟಿದರೂ ಮದುವೆಯಾಗದೆ ಇರಲು ಈ ವ್ಯಕ್ತಿನೇ ಕಾರಣ; ಕೊನೆಗೂ ಸತ್ಯ ಬಾಯಿಬಿಟ್ಟ ಅನುಪಮಾ ಗೌಡ!

click me!