10 ಕೆಜಿ ತೂಕ ಇಳಿಸಿಕೊಂಡಿದ್ದಾರೆ ರಕ್ಷಿತ್ ಶೆಟ್ಟಿ; ಸಪ್ತ ಸಾಗರದಾಚೆ ಎಲ್ಲೋ ಪ್ರೇಮಕತೆಯ ಸಿನಿಮಾ!

By Kannadaprabha News  |  First Published Mar 18, 2021, 9:22 AM IST

ರಕ್ಷಿತ್ ಶೆಟ್ಟಿ 10 ಕೆಜಿ ತೂಕ ಇಳಿಸಿಕೊಂಡು ಸಣ್ಣ ಆಗಿದ್ದಾರೆ. ಕೇಶ ವಿನ್ಯಾಸ ಬದಲಿಸಿ ಲವರ್ ಬಾಯ್ ಆಗಿದ್ದಾರೆ. ಇದೆಲ್ಲಕ್ಕೂ ಕಾರಣ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ.
 


ಹೇಮಂತ್ ರಾವ್ ನಿರ್ದೇಶನದ ಈ ಚಿತ್ರ ಒಂದು ಗಾಢ ಪ್ರೇಮಕತೆಯ ಸಿನಿಮಾ. ಮೊದಲಾರ್ಧದಲ್ಲಿ 10 ವರ್ಷದ ಹಿಂದಿನ ಕತೆ ನಡೆದರೆ ದ್ವಿತೀಯಾರ್ಧದಲ್ಲಿ ವರ್ತಮಾನದ ಕತೆ ನಡೆಯುತ್ತದೆ. ಅದಕ್ಕಾಗಿ ರಕ್ಷಿತ್ ಶೆಟ್ಟಿ ಮತ್ತೆ 15 ಕೆಜಿ ತೂಕ ಏರಿಸಿಕೊಳ್ಳುತ್ತಾರೆ. ಸ್ವಲ್ಪ ಮೆಚ್ಯೂರ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ.

ಪುಣ್ಯಕೋಟಿ ಸಿನಿಮಾ: ಮತ್ತೊಂದು ವಿಚಾರ ತಿಳಿಸಿದ ರಕ್ಷಿತ್ ಶೆಟ್ಟಿ 

ಚಿತ್ರಕ್ಕೆ ಮುಹೂರ್ತ ಆಗಿದೆ. ಮುಹೂರ್ತದ ದಿನವೇ ರಿಲೀಸ್ ದಿನಾಂಕ ಕೂಡ ಘೋಷಣೆ ಮಾಡಿದ್ದಾರೆ. ಈ ವರ್ಷದ ಕೊನೆಯ ಶುಕ್ರವಾರ ಅಂದ್ರೆ 2021, ಡಿಸೆಂಬರ್ 31ರಂದು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಿಡುಗಡೆಯಾಗಲಿದೆ ಅಂತ ನಾಯಕ ಮತ್ತು ನಿರ್ಮಾಪಕ ರಕ್ಷಿತ್ ಶೆಟ್ಟಿ ಘೋಷಿಸಿದ್ದಾರೆ.

Tap to resize

Latest Videos

undefined

ಸದ್ಯ ವರ್ಕ್‌ಶಾಪ್ ನಡೆಯುತ್ತಿದೆ. ಹೀರೋ ಮತ್ತು ಹೀರೋಯಿನ್ ಪರಿಚಯ ಆಗಿ 4-5ವರ್ಷ ಆಗಿರಬೇಕು. ಅನಂತರ ಕತೆ ನಡೆಯುತ್ತದೆ. ಅದಕ್ಕಾಗಿ ವರ್ಕ್‌ಶಾಪ್ ಎನ್ನುತ್ತಾರೆ ಹೇಮಂತ್ ರಾವ್. ಸಂಬಂಧದ ಸೂಕ್ಷ್ಮತೆ ಮತ್ತು ಸೌಂದರ್ಯ ತೋರಿಸುವ ಯತ್ನವೇ ಈ ಸಿನಿಮಾ ಎಂದು ಅವರು ಹೇಳಿದರು.

ರಕ್ಷಿತ್‌ ಶೆಟ್ಟಿಗೆ ಜೋಡಿಯಾಗಲಿದ್ದಾರೆ ಕರಾವಳಿ ಚೆಲುವೆ ರುಕ್ಮಿಣಿ ವಸಂತ್ 

‘ನಾನು ತೀವ್ರವಾದ ಪ್ರೇಮಕತೆಯ ಸಿನಿಮಾದಲ್ಲಿ ನಟಿಸಿಲ್ಲ. ಅದಕ್ಕಾಗಿ ಈ ಸಿನಿಮಾ ಒಪ್ಪಿಕೊಂಡೆ. ಎರಡು ಟೈಮ್‌ಲೈನ್‌ನಲ್ಲಿ ಕತೆ ನಡೆಯುತ್ತದೆ’ ಎಂದು ರಕ್ಷಿತ್ ಶೆಟ್ಟಿ ಹೇಳಿದರು. ನಾಯಕಿ ರುಕ್ಮಿಣಿ ವಸಂತ್ ಖುಷಿಯಾಗಿದ್ದರು. ‘ಸಿನಿಮಾದ ಪೋಸ್ಟರ್ ನೋಡಿ ನಾನೇ ಹೇಮಂತ್ ರಾವ್ ಅವರಿಗೆ ಫೋನ್ ಮಾಡಿ ಆಡಿಷನ್ ತೆಗೆದುಕೊಳ್ಳಲು ವಿನಂತಿಸಿ ಈ ಸಿನಿಮಾ ತಂಡ ಸೇರಿಕೊಂಡಿದ್ದೇನೆ’ ಎಂದರು.

ಸಪ್ತ ಸಾಗರದಾಚೆ ಎಲ್ಲೋ ಚಿತ್ರಕ್ಕೆ ಪ್ರತಿಭಾವಂತರ ತಂಡವೇ ಸೇರಿಕೊಂಡಿದೆ. ಚರಣ್‌ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಒಂಭತ್ತು ಹಾಡುಗಳಿಗೆ ಕಂಪೋಸ್ ಮಾಡುವ ಜವಾಬ್ದಾರಿ ಇದೆ ಅವರಿಗೆ. ಅದ್ವೈತ್ ಗುರುಮೂರ್ತಿ ಛಾಯಾಗ್ರಾಹಣ ಹೊಣೆ ಹೊತ್ತುಕೊಂಡಿದ್ದಾರೆ. ಈಗಾಗಲೇ ಹೇಮಂತ್ ಅವರಿಗೆ ಮ್ಯೂಸಿಕ್ ಕೊಟ್ಟು, ಇದೇ ಥೀಮ್‌ನಲ್ಲಿ ಛಾಯಾಗ್ರಹಣ ಮಾಡಬೇಕು ಎಂದು ಆರ್ಡರ್ ಕೊಟ್ಟಿದ್ದಾರೆ. ಉಲ್ಲಾಸ್ ಹೈದೂರು ಕಲಾ ನಿರ್ದೇಶನ ಮಾಡುತ್ತಿದ್ದಾರೆ. ಗುಂಡು ಶೆಟ್ಟಿ ಬರವಣಿಗೆಯ ಕಾಣಿಕೆಯ ಜೊತೆ ಸಹ ನಿರ್ದೇಶನ ಮಾಡಲಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ ತಾರಾ ಬಳಗದಲ್ಲಿದ್ದಾರೆ.

 

click me!