ಜೊಮ್ಯಾಟೋ ಬಾಯ್ ಕಾಮರಾಜ್‌ ಪರ ನಿಂತ ದುನಿಯಾ ವಿಜಯ್; ಅನ್ಯಾಯ ಆಗಬಾರದು!

Suvarna News   | Asianet News
Published : Mar 17, 2021, 03:09 PM IST
ಜೊಮ್ಯಾಟೋ ಬಾಯ್ ಕಾಮರಾಜ್‌ ಪರ ನಿಂತ ದುನಿಯಾ ವಿಜಯ್; ಅನ್ಯಾಯ ಆಗಬಾರದು!

ಸಾರಾಂಶ

Zomato ಬಾಯ್ ಕಾಮರಾಜ್‌ ಹಾಗೂ ಯುವತಿ ಹಿತೇಶಾ ಘಟನೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಈ ವಿಚಾರದ ಬಗ್ಗೆ ದುನಿಯಾ ವಿಜಯ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿಯಾಗಿರುವ ಯುವತಿ ಹಿತೇಶಾ ಜೊಮ್ಯಾಟೋದಲ್ಲಿ ಫುಡ್‌ ಆರ್ಡರ್ ಮಾಡಿ, ತಡವಾಗಿ ಬಂದ ಕಾರಣ ಡೆಲಿವರಿ ಬಾಯ್‌ನನ್ನು ಪ್ರಶ್ನಿಸಿದ್ದಾರೆ. ಏನಾಯ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಹಲ್ಲೆಯಾಗಿದೆ. ದೂರು ನೀಡಿದ ಹಿತೇಶಾ ಜೊಮ್ಯಾಟೋ ಡೆಲಿವರಿ ಬಾಯ್ ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದರು. ಆದರೆ, ಹಿತೇಶಾ ಅವರೇ ಫುಡ್ ಲೇಟಾಗಿ ಡೆಲಿವರಿ ಆಗಿದ್ದಕ್ಕೆ ತಮ್ಮ ಹಲ್ಲೆ ಮಾಡಿದ್ದಾಗಿ, ಕಾಮರಾಜ್ ಆರೋಪಿಸಿದ್ದಾರೆ. ತಮ್ಮ ಮೇಲೆ ಹಿತೇಶಾ ಹಲ್ಲೆ ಮಾಡಿದ್ದಾರೆ ಎಂದೇಳಿ ಮಾಡಿದ ವಿಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ  ವೈರಲ್ ಆಗಿತ್ತು.

ಮಹಿಳೆ ಮುಖಕ್ಕೆ ಪಂಚ್ ಮಾಡಿದ್ದ ಜೋಮ್ಯಾಟೋ ಕಾಮರಾಜ ಅರೆಸ್ಟ್ 

ಕಂಪನಿ ಡೆಲಿವರಿ ಬಾಯ್‌ನನ್ನು ಕೆಲಸದಿಂದ ತೆಗೆದುಹಾಕಿರುವುದಕ್ಕೆ ರಾಷ್ಟ್ರ ಮಟ್ಟದಲ್ಲಿಈ ಘಟನೆ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. 

ಬಡವನ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುವಂತೆ ಆಗಬಾರದು. ಕಾಮರಾಜ್ ಕ್ಷಮೆ ಕೇಳಿಯಾಗಿದೆ. ಕಂಪನಿ, ಮನ್ನಿಸಿ ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ನಟರು ಆಗ್ರಹಿಸುತ್ತಿದ್ದಾರೆ. 

ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಸಾರ್ವಜನಿಕರು ಕಾಮರಾಜ್‌ ದೃಷ್ಟಿಯಲ್ಲಿ ಏನು ನಡೆಯಿತು ಕೇಳಬೇಕು ಎಂದು ಜೊಮ್ಯಾಟೋ ಸಂಸ್ಥೆ ಮೇಲೆ ಒತ್ತಡ ತರುತ್ತಿದ್ದಾರೆ. ಕನ್ನಡ ಪರ ಸಂಘಟನೆಗಳು ಕಾಮರಾಜ್‌ ಪರ ನಿಂತು, ಮಾತನಾಡಿರುವ ವೀಡಿಯೋ ಕೇಳಿ ದುನಿಯಾ ವಿಜಯ್, ನಟಿ ಪ್ರಣಿತಾ ಸುಭಾಷ್ ಕೂಡ ಕಾಮರಾಜ್ ಪರ ಧ್ವನಿ ಎತ್ತಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಆಕೆಯೇ ನನಗೆ ಚಪ್ಪಲಿಯಿಂದ ಹೊಡೆದರು: ಝೋಮ್ಯಾಟೋ ಬಾಯ್‌ 

'ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಜೊಮ್ಯಾಟೊ ಹುಡುಗ ಕಾಮರಾಜ್ ಪ್ರಕರಣವನ್ನು ತಿಳಿದುಕೊಂಡೆ. ಕರ್ನಾಟಕ ಪೊಲೀಸರು ನಿಷ್ಪಕ್ಷಪಾತ ತನಿಖೆ ಮಾಡುತ್ತಾರೆ, ಎಂಬ ನಂಬಿಕೆ ನನಗಿದೆ. ಒಂದು ವೇಳೆ ಆತ ನಿರಪರಾಧಿ ಆಗಿದ್ದರೆ, ಆತನ ಬೆಂಬಲಕ್ಕೆ ನಾವೆಲ್ಲ ಬೆನ್ನೆಲುಬಾಗಿ ನಿಲ್ಲೋಣ. ಯಾವುದೇ ಕಾರಣಕ್ಕೂ ಆತನಿಗೆ ಅನ್ಯಾಯ ಆಗಬಾರದು, ಎಂದು ಬಯಸುತ್ತೇನೆ,' ಎಂದು ವಿಜಯ್ ಹೇಳಿದ್ದಾರೆ.

'ಹೇಳಿದ್ದ ಸಮಯಕ್ಕೆ ಫುಡ್ ಡೆಲಿವರಿ ಆಗದಿರಬಹುದು. ಆದರೆ ನ್ಯಾಯ? ಡೆಲಿವರಿ ಬಾಯ್ ಹೇಳಿದ್ದೇ ಸತ್ಯವಾದರೆ ಎದುರಾಳಿ ವಿರುದ್ಧ ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು,' ಎಂದು ಪ್ರಣೀತಾ ಟ್ವೀಟ್ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?