ನಟಿ ಶ್ರೀನಿಧಿ ಫೋಟೋ ನೋಡಿ ರಕ್ಷಿತ್ ಹೇಳಿದ್ದೇನು? 'ಏನ್ ನಡೀತಿದೆ ಶೆಟ್ರೇ..' ಎಂದು ಕಾಲೆಳೆದ ಫ್ಯಾನ್ಸ್

By Shruthi Krishna  |  First Published Mar 28, 2023, 4:03 PM IST

ನಟಿ ಶ್ರೀನಿಧಿ ಶೆಟ್ಟಿ ಫೋಟೋಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರ ಮಾತುಕತೆ ನೋಡಿ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ. 


ಸ್ಯಾಂಡಲ್ ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ನಟಿ ಶ್ರೀನಿಧಿ ಶೆಟ್ಟಿ ಇಬ್ಬರೂ ಸದ್ದು ಮಾಡುತ್ತಿದ್ದಾರೆ. ಇಬ್ಬರ ಟ್ವಿಟ್ಟರ್ ಮಾತುಕತೆ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ ಅವರ ಹಾಗೆ ಸುಮ್ಮನೆ ಪೋಸ್ಟ್‌ಗೆ ಸಿಂಪಲ್ ಸ್ಟಾರ್ ಕಾಮೆಂಟ್ ಮಾಡಿರುವುದು ಈಗ ವೈರಲ್ ಆಗಿದೆ. ಅಷ್ಟಕ್ಕೂ ಏನಿದು ಇಬ್ಬರೂ ಶೆಟ್ರ ಮಾತುಕತೆ ಅಂತಿರಾ? ರಕ್ಷಿತ್ ಶೆಟ್ಟಿ ಮತ್ತು ಶ್ರೀನಿಧಿ ಶೆಟ್ಟಿ ಇಬ್ಬರೂ ಟ್ವಿಟ್ಟರ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ಇಬ್ಬರ ಕ್ಯೂಟ್ ಮಾತುಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಅಷ್ಟೆಯಲ್ಲ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 

ಇಬ್ಬರ ಮಾತುಕತೆ ನೋಡಿ ಫ್ಯಾನ್ಸ್ ಅನಿಸುತ್ತಿದೆ ಯಾಕೋ ಇದು...ಎಂದು ಹೇಳುತ್ತಿದ್ದಾರೆ. ನಟಿ ಶ್ರೀನಿಧಿ ಶೆಟ್ಟಿ ಇತ್ತೀಚೆಗೆ ಒಂದು ಪೋಸ್ಟ್ ಶೇರ್ ಮಾಡಿದ್ದರು. ಪರ್ಪಲ್ ಬಣ್ಣದ ಡ್ರೆಸ್ ಧರಿಸಿದ್ದ ಶ್ರೀನಿಧಿ ಶೆಟ್ಟಿ ಸಿಂಪಲ್ ಲುಕ್‌ನ ಸುಂದರ ಪೋಟೋ ಹಂಚಿಕೊಂಡಿದ್ದರು. ಫೋಟೋಗೆ ಹಾಗೆ ಸುಮ್ಮನೆ ಎಂದು ಕ್ಯಾಪ್ಷನ್ ಮಾಡಿದ್ದರು. ಶ್ರೀನಿಧಿ ಶೆಟ್ಟಿ ಫೋಟೋಗೆ ಸಿಂಪಲ್ ಸ್ಟಾರ್ ಕಾಮೆಂಟ್ ಮಾಡಿದ್ದಾರೆ. 'ಹೌದಾ ಶೆಟ್ರೆ ಗೊತ್ತಾಯಿತು' ಎಂದು ತುಳುವಿನಲ್ಲಿ ಹೇಳಿದ್ದಾರೆ. ರಕ್ಷಿತ್ ಕಾಮೆಂಟ್‌ಗೆ ಶ್ರೀನಿಧಿ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. 'ಗೊತ್ತಾಯಿತಾ ಶೆಟ್ರೆ, ಯಾರಿಗೂ ಹೇಳಬೇಡಿ ಎಂದು' ಹೇಳಿದ್ದಾರೆ.

Tap to resize

Latest Videos

ಅಭಿಮಾನಿಗಳ ಪ್ರತಿಕ್ರಿಯೆ

ಇಬ್ಬರ ಈ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರ ಕಾಮೆಂಟ್‌ಗೆ ಅಭಿಮಾನಿಗಳು ತರಹೇವಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. 'ಏನ್ ನಡೀತಿದೆ ಶೆಟ್ರೆ..' ಎಂದು ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ಏನೋ ಬೇರೆ ವಾಸನೆ ಬರ್ತಿದೆ ಶೆಟ್ರೆ' ಎಂದು ಹೇಳಿದ್ದಾರೆ. ಮತ್ತೋರ್ವ ಪ್ರತಿಕ್ರಿಯೆ ನೀಡಿ, 'ತಲೆಗೆ ಹುಳ ಬಿಟ್ರಲ್ಲಾ ಶೆಟ್ರೆ' ಎಂದು ಹೇಳಿದ್ದಾರೆ. ಮತ್ತೊಬ್ಬರು, 'ಏನಾದ್ರು ಹೊಸ ಸುದ್ದಿ ಇದಿಯಾ', 'ಜೋಡಿ ಚೆನ್ನಾಗಿದೆ' ಎಂದು ಕಾಮೆಂಟ್ ಮಾಡಿ ಶೆಟ್ರ ಕಾಲೆಳೆಯುತ್ತಿದ್ದಾರೆ. 

ಎಲ್ಲವೂ ಸತ್ಯವಲ್ಲ, ಈ 4 ಚಿತ್ರಗಳು ನಿದ್ದೆ ಇಲ್ಲದಂತೆ ಮಾಡಿವೆ; ರಕ್ಷಿತ್ ಶೆಟ್ಟಿ ಟ್ವೀಟ್ ವೈರಲ್

ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಿ, ಚೆನ್ನಾಗಿರುತ್ತೆ ಎಂದು ಅನೇಕರು ಹೇಳುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಕಾಮೆಂಟ್ ಮಾಡಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಕ್ಷಿತ್ ಜೊತೆ ಶ್ರೀನಿಧಿ ಸಿನಿಮಾ ಮಾಡುತ್ತಿದ್ದಾರಾ ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಿತ್ ಮುಂದಿನ ಸಿನಿಮಾದಲ್ಲಿ ಶ್ರೀನಿಧಿ ನಟಿಸಿದ್ರೂ ಅಚ್ಚರಿ ಇಲ್ಲ. ಕೆಜಿಎಫ್ ಸಿನಿಮಾ ಬಳಿಕ ಶ್ರೀನಿಧಿ ಕನ್ನಡದಲ್ಲಿ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಶ್ರೀನಿಧಿ ಶೆಟ್ಟಿ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಒಂದೊಳ್ಳೆ ಸಿನಿಮಾಗಾಗಿ ಕಾಯುತ್ತಿರುವ ಶ್ರೀನಿಧಿ ಸಿಂಪಲ್ ಸ್ಟಾರ್ ಜೊತೆ ನಟಿಸಿದ್ರೂ ಅಚ್ಚರಿ ಇಲ್ಲ.

ಹಾಗೆ ಸುಮ್ಮನೆ 🌸💌 pic.twitter.com/puEcIijsVS

— Srinidhi Shetty (@SrinidhiShetty7)

'ಕೆಜಿಎಫ್' ಬೆಡಗಿ ಶ್ರೀನಿಧಿ ಶೆಟ್ಟಿಯ ಸಂಭಾವನೆ ಎಷ್ಟು ಗೊತ್ತಾ?: ಕೇಳಿದ್ರೆ ಶಾಕ್ ಆಗುತ್ತೆ

ಇನ್ನೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 777 ಚಾರ್ಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ರಕ್ಷಿತ್ ಮುದ್ದು ನಾಯಿ ಜೊತೆ ನಟಿಸಿದ್ದರು. ಪ್ಯಾನ್ ಇಂಡಿಯಾ ಮಟ್ಟದ್ದಲ್ಲಿ ಬಂದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಬಾಕ್ಸ್ ಆಫೀಸ್ ನಲ್ಲೂ ಭ್ರಜರಿ ಕಮಾಯಿ ಮಾಡಿತ್ತು. ಸದ್ಯ ರಕ್ಷಿತ್ 'ಸಪ್ತಾ ಸಾಗರದಾಚೆ' ಎಲ್ಲೋ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ರಿಚರ್ಡ್ ಆಂಟನಿ ಸಿನಿಮಾಗೆ ತಯಾರಿ ನಡೆಸುತ್ತಿದ್ದಾರೆ. ಸದ್ಯ ರಿಚರ್ಡ್ ಆಂಟ ಪ್ರಾರಂಭಿಸಲಿದ್ದಾರೆ. 

click me!