’ಪಡ್ಡೆಹುಲಿ’ ಅಡ್ಡಾದಲ್ಲೂ ಇದಾರೆ ಈ ಕಿರಿಕ್ ಹುಡುಗ!

Published : Apr 08, 2019, 03:07 PM IST
’ಪಡ್ಡೆಹುಲಿ’ ಅಡ್ಡಾದಲ್ಲೂ ಇದಾರೆ ಈ ಕಿರಿಕ್ ಹುಡುಗ!

ಸಾರಾಂಶ

ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರ ಪಡ್ಡೆಹುಲಿ. ಭಾರೀ ನಿರೀಕ್ಷೆಯ ಒಡ್ಡೋಲಗದಲ್ಲಿ ಈ ಚಿತ್ರ ಇದೇ ಏಪ್ರಿಲ್ 19 ರಂದು ಬಿಡುಗಡೆಯಾಗುತ್ತಿದೆ. ಈ ಮೂಲಕ ಶ್ರೇಯಸ್ ಎಂಬ ಮಾಸ್ ಹೀರೋನ ಆಗಮನವಾಗೋದೂ ಪಕ್ಕಾ ಆಗಿದೆ!

ಬೆಂಗಳೂರು (ಏ. 08): ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರ ಪಡ್ಡೆಹುಲಿ. ಭಾರೀ ನಿರೀಕ್ಷೆಯ ಒಡ್ಡೋಲಗದಲ್ಲಿ ಈ ಚಿತ್ರ ಇದೇ ಏಪ್ರಿಲ್ 19 ರಂದು ಬಿಡುಗಡೆಯಾಗುತ್ತಿದೆ. ಈ ಮೂಲಕ ಶ್ರೇಯಸ್ ಎಂಬ ಮಾಸ್ ಹೀರೋನ ಆಗಮನವಾಗೋದೂ ಪಕ್ಕಾ ಆಗಿದೆ!

ನಟಿ ಮೇಘನಾಗೆ ಮಧ್ಯರಾತ್ರಿಯಲ್ಲಿ ಸಿಕ್ರು ರಿಯಲ್ ಹೀರೋ!

ನಿರ್ದೇಶಕ ಗುರು ದೇಶಪಾಂಡೆ ಈ ಚಿತ್ರವನ್ನು ಪ್ರತೀ ವರ್ಗದ ಪ್ರೇಕ್ಷಕರೂ ಆಕರ್ಷಿತರಾಗುವಂತೆಯೇ ರೂಪಿಸಿದ್ದಾರೆ. ಅದಕ್ಕೆ ತಕ್ಕುದಾಗಿಯೇ ಹಾಡುಗಳೀಗ ಎಲ್ಲೆಡೆ ಹರಿದಾಡುತ್ತಿವೆ. ಈ ಹಾಡುಗಳೇ ಈ ಸಿನಿಮಾದಲ್ಲೇನೋ ವಿಶೇಷವಾದುದ್ದಿದೆ ಎಂಬಂಥಾ ವಿಶ್ವಾಸವನ್ನು ಪ್ರೇಕ್ಷಕರಲ್ಲಿ ಮೂಡಿಸಿದೆ. ಖಂಡಿತಾ ಅಂಥಾ ವಿಶೇಷತೆಗಳು ಪಡ್ಡೆಹುಲಿ ಚಿತ್ರದಲ್ಲಿವೆ.

ಪಾತ್ರವರ್ಗವೇ ಈ ಚಿತ್ರದ ಪ್ರಧಾನ ಆಕರ್ಷಣೆ. ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸುಧಾರಾಣಿಯವರು ನಿರ್ವಹಿಸಿರೋ ಪಾತ್ರಗಳಂತೂ ಪ್ರೇಕ್ಷಕರ ಪಾಲಿಗೆ ಸರ್‍ಪ್ರೈಸ್ ಪ್ಯಾಕೇಜಿನಂತಿವೆಯಂತೆ. ಇನ್ನುಳಿದಂತೆ, ರಕ್ಷಿತ್ ಶೆಟ್ಟಿ ಈ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಅವರ ಪಾತ್ರದ ಬಗ್ಗೆ ಒಂದಷ್ಟು ವಿಚಾರಗಳನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ.

ಲಿಲ್ಲಿಗೆ ಈ ಹಾಡು ಡೆಡಿಕೇಟ್ ಮಾಡಿದ ವಿಜಯ್ ದೇವರಕೊಂಡ!

ರಕ್ಷಿತ್ ಶೆಟ್ಟಿಯವರಿಲ್ಲಿ ಕಿರಿಕ್ ಪಾರ್ಟಿಯ ಪ್ರಸಿದ್ಧ ಪಾತ್ರವಾದ ಕರ್ಣ ಎಂಬ ಹೆಸರಿನ ಪಾತ್ರಕ್ಕೇ ಜೀವ ತುಂಬಿದ್ದಾರಂತೆ. ಇದರಲ್ಲವರು ಸೀನಿಯರ್ ಕಿರಿಕ್ ಪಾರ್ಟಿ. ಈ ಹಿಂದೆ ಕಿರಿಕ್ ಪಾರ್ಟಿ ಚಿತ್ರ ಎಲ್ಲರನ್ನೂ ಸೆಳೆದುಕೊಂಡಿತ್ತಲ್ಲಾ? ಅದರ ಮುಂದುವರೆದ ಭಾಗದಂತಿರೋ ದೃಷ್ಯಾವಳಿಗಳಲ್ಲಿಯೇ ಅವರು ಕಾಣಿಸಿಕೊಂಡಿದ್ದಾರಂತೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!