
ಬೆಂಗಳೂರು (ಜೂ. 15) ಸೋಶಿಯಲ್ ಮೀಡಿಯಾದಿಂದ ಪ್ರಕಟವಾಗುವ ಸುದ್ದಿಗಳು ಹಾಗೆ. ಎಲ್ಲಿಂದಲೋ ಎಲ್ಲಿಗೋ ಲಿಂಕ್ ಪಡೆದುಕೊಂಡುಬಿಡುತ್ತವೆ.
ಕ್ರಿಯೆ-ಅದಕ್ಕೆ ಕೊಟ್ಟ ಪ್ರತಿಕ್ರಿಯೆ, ನೂರಾರು ಕಮೆಂಟ್ ಗಳು ಮೂಲ ವಿಚಾರವನ್ನೇ ಬದಲಿಸಿಬಿಡುತ್ತವೆ. ಕನ್ನಡ ಚಿತ್ರರಂಗವನ್ನು ಡರ್ಟಿ ಪ್ಲೇಸ್ ಎಂದು ಕರೆದ ವ್ಯಕ್ತಿಯೊಬ್ಬ ನಟ ಚೇತನ್ ಕುಮಾರ್ ಅವರಿಂದ ಕೆಲವು ಬದಲಾವಣೆ ಆರಂಭವಾಗಿದೆ ಎಂದಿದ್ದ. ಕನ್ನಡ ಚಿತ್ರರಂಗದ ಮರುಭೂಮಿಯಲ್ಲಿ ಚೇತನ್ ಅಹಿಂಸಾ ಮಳೆಯಂತೆ ಎಂದು ಕೊಂಡಾಡಿದ್ದ.
ನಟ ಚೇತನ್ ವಿರುದ್ಧ ಬ್ರಾಹ್ಮಣ ಮಂಡಳಿ ದೂರು
ಸುದಿಪ್ಟೊ ಮೊಂಡಲ್ ಎಂಬುವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದ ನಿಮ್ಮ ಅಭಿಮಾನಕ್ಕೆ ಧನ್ಯವಾದ. ಕನ್ನಡ ಚಿತ್ರರಂಗದಲ್ಲಿ ನಾವು ಅತ್ಯುತ್ತಮ ಸಿನಿಮಾ ನಿರ್ಮಾಣ ಮಾಡಿತದ್ದೇವೆ ಮತ್ತು ಮಾಡುತ್ತಿದ್ದೇವೆ ಎಂದು ಹೇಳಿದ್ದರು.
ಈ ಎಲ್ಲ ವಿಚಾರಗಳನ್ನು ಗಮನಿಸಿದ ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಚೇತನ್ ಅವರೇ ನಿಮ್ಮ ಉತ್ತಮ ಕೆಲಸಗಳಿಗಾಗಿ ನಿಮ್ಮನ್ನು ಗೌರವಿಸುತ್ತೇನೆ. ನಿಮ್ಮ ಆಲೋಚನೆ ವಿಧಾನ ಮೊದಲು ಸರಿ ಮಾಡಿಕೊಳ್ಳಿ. ಅನೇಕ ದಿಗ್ಗಜರ ಹುಟ್ಟಿಗೆ ಕಾರಣವಾಗಿದ್ದು ಕನ್ನಡ ಚಿತ್ರರಂಗ. ನಿಮಗೆ ಈ ವಿಚಾರ ಗೊತ್ತಿಲ್ಲದೆ ಏನೂ ಇಲ್ಲ. ಇವತ್ತು ನಾನು ಇಲ್ಲಿರುವ ಸ್ಥಿತಿಗೆ ಚಿತ್ರರಂಗವೇ ಕಾರಣ ಎಂದು ಖಾರವಾಗಿಯೇ ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಮೂರನೇ ವ್ಯಕ್ತಿಯೊಬ್ಬ ಮಾಡಿದ ಟ್ವೀಟ್ ಚಿತ್ರರಂಗದ ಬಗ್ಗೆ ಇಷ್ಟೆಲ್ಲ ಮಾತನಾಡುವ ಕೆಲಸ ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.