
ಮಾಡಿದ ಸಿನಿಮಾಗಳ ಸಂಖ್ಯೆ ಇಪ್ಪತ್ತು ದಾಟಿಲ್ಲ. ಅಷ್ಟರಲ್ಲೇ ಭಾರತದಲ್ಲಿಯೇ ಹೆಸರುವಾಸಿಯಾದರು. ಯಾರ ಹಂಗಿಗೂ ಬೀಳಲಿಲ್ಲ, ಯಾರ ಮರ್ಜಿಗೂ ಬಾಗಲಿಲ್ಲ. ಸೆಲ್ಫ್ ಮೇಡ್ ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್‌ಗೆ ಹುಟ್ಟುಹಬ್ಬದ ಸಂಭ್ರಮ.
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವನ್ನು ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ಭಾರತದಲ್ಲಿ ಆಚರಣೆ ಮಾಡುತ್ತಿದ್ದಾರೆ ಅಭಿಮಾನಿಗಳು. ಇದು ಯಶ್‌ಗೆ ವಿಶೇಷ ದಿನ ಮಾತ್ರವಲ್ಲ, ತಮಗೂ ವಿಶೇಷವೆಂದು ಪರಿಗಣಿಸಿ ಅಭಿಮಾನಿಗಳು ವಿವಿಧ ರಾಜ್ಯಗಳಲ್ಲಿ ಗಂಟೆಗೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಮನೆಯಲ್ಲಿ ಯಥರ್ವ್‌ಗೆ ಚೌಲ ಮಾಡಿದ ಯಶ್-ರಾಧಿಕಾ ದಂಪತಿ
ಕೊರೋನಾ ಪ್ಯಾಂಡಮಿಕ್‌ನಿಂದ ಆಚರಣೆಗೆ ಬ್ರೇಕ್ ಹಾಕಿರುವ ಯಶ್, ಮನೆಯಲ್ಲಿ ಕುಟುಂಬಸ್ಥರ ಜೊತೆ ಸರಳವಾಗಿ ಹುಟ್ಟಿದಬ್ಬವನ್ನು ಆಚರಣೆ ಮಾಡಿದ್ದಾರೆ. ಕಲರ್‌ಫುಲ್ ಆಗಿ ರೆಡಿಯಾಗಿರುವ ರಾಧಿಕಾ ಮೂಗಿಗೆ ಕೇಕ್ ಮೆತ್ತಿದ್ದಾರೆ. ಯಶ್ ಮುಖವೆಲ್ಲಾ ಕೇಕ್ ಆಗಿದೆ. ಈ ಫೋಟೋದಲ್ಲಿ ಅಭಿಮಾನಿಗಳು ಗಮನ ಸೆಳೆದಿರುವು ರಾಧಿಕಾ ಬರೆದಿರುವ ಸಾಲುಗಳು...
'ಕೆಲವೊಮ್ಮೆ ನಾನು ಯೋಚಿಸುತ್ತೇನೆ ನೀವು ಇಷ್ಟೊಂದು ಪರ್ಫೆಕ್ಟ್ ಆಗಿರಲು ಕಾರಣವೇನು ಎಂದು...ಆನಂತರ ನನಗೆ ತಿಳಿಯುತ್ತದೆ ಇದಕ್ಕೆ ಕಾರಣವೇ ನೀವು. ನಿಮ್ಮ ಪಾಲಿನ ಕೇಕ್ ಕೂಡ ನನಗೆ ಕೊಡುತ್ತೀರಾ ಅದಕ್ಕೆ ಎಂದು. ಹ್ಯಾಪಿ ಬರ್ತಡೇ ಬೆಸ್ಟಿ' ಎಂದು ರಾಧಿಕಾ ಬರೆದುಕೊಂಡಿದ್ದಾರೆ.
ತುಂಟಿ ಐರಾ, ಸೈಲೆಂಟ್ ತಮ್ಮ; ರಾಧಿಕಾ ಪಂಡಿತ್ ಶೇರ್ ಮಾಡಿದ 'ಹೊಸ' ಫೋಟೋ!
ಕಳೆದ ವರ್ಷ ಹುಟ್ಟುಹಬ್ಬಕ್ಕೆ ರಾಧಿಕಾ ಮತ್ತು ಐರಾ ಇಬ್ಬರು ಮನೆಯಲ್ಲಿ ಚಾಕೋಲೇಟ್ ಕೇಕ್ ತಯಾರಿಸಿದ್ದರು. ತುಂಬಾನೇ ಮುದ್ದಾಗಿದ್ದ ಈ ವಿಡಿಯೋವನ್ನು ಯಶ್ ಖಾತೆಯಲ್ಲಿ ಶೇರ್ ಮಾಡಲಾಗಿತ್ತು. ಈ ವರ್ಷದ ಸೆಲೆಬ್ರೇಷನ್‌ನಲ್ಲಿ ಪುತ್ರ ತುಸು ದೊಡ್ಡವನಾಗಿದ್ದಾನೆ. ಈ ಕಾರಣ ಸಂಭ್ರಮಾಚರಣೆ ಹೇಗಿರುತ್ತದೆ ಎಂದು ರಾಧಿಕಾ ಶೇರ್ ಮಾಡುವ ನೆಕ್ಸ್ಟ್ ಅಪ್ಡೇಟ್‌ಗೆ ಕಾಯಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.