ಮೊದಲ ಕಾರು ಕೊಂಡಾಗ ಸಾಥ್ ನೀಡಿದ್ದ ರಕ್ಷಿತ್, ಇದೀಗ ಮತ್ತೊಂದು ಐಷಾರಾಮಿ ಕಾರು ಕೊಂಡ ರಶ್ಮಿಕಾ

Suvarna News   | Asianet News
Published : Jan 07, 2021, 02:20 PM IST
ಮೊದಲ ಕಾರು ಕೊಂಡಾಗ ಸಾಥ್ ನೀಡಿದ್ದ ರಕ್ಷಿತ್, ಇದೀಗ ಮತ್ತೊಂದು ಐಷಾರಾಮಿ ಕಾರು ಕೊಂಡ ರಶ್ಮಿಕಾ

ಸಾರಾಂಶ

ಹೊಸ ಕಾರು ಖರೀದಿಸುವ ಮೂಲಕ ನ್ಯಾಷನಲ್ ಕ್ರಶ್‌ ಮತ್ತೊಮ್ಮೆ ಹೆಡ್‌ಲೈನ್‌‌ನಲ್ಲಿ ಮಿಂಚುತ್ತಿದ್ದಾರೆ. ಮನೆಗೆ ಬಂದಿರುವ ಹೊಸ ಅತಿಥಿ ಹೇಗಿದೆ ಗೊತ್ತಾ?  

ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗವನ್ನು ಆಳುತ್ತಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹೊಸ ವರ್ಷಕ್ಕೆ ಹೊಸ ಅತಿಥಿಯನ್ನು ಬರ ಮಾಡಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಸಂಭಾವನೆ ಕೋಟಿ ಮುಟ್ಟಿದೆ ಅಂದ್ಮೇಲೆ ಮನೆಗೆ ಬಂದ ಅತಿಥಿ ಬೆಲೆಯೂ ಅಷ್ಟೇ ಇರಬೇಕಲ್ವಾ? 

ಕೊನೆಗೂ ರಶ್ಮಿಕಾ ಪೋಸ್ಟ್‌ಗೆ ಕಾಮೆಂಟ್ ಮಾಡಿದ ರಕ್ಷಿತ್ ಶೆಟ್ಟಿ! 

ಹೌದು ನಟಿ ರಶ್ಮಿಕಾ ಮಂದಣ್ಣ ಸುಮಾರು 85 ಲಕ್ಷದಿಂದ  1 ಕೋಟಿವರೆಗೂ ಬೆಲೆ ಇರುವ ಮ್ಯಾಟ್ ಬ್ಲಾಕ್ ಬಣ್ಣದ ರೇಂಜ್‌ ರೋವರ್ ಸ್ಟೋರ್ಟ್ಸ್‌ ಕಾರು ಖರೀದಿಸಿದ್ದಾರೆ.  ಕಾರು ಜೊತೆ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಸಂತಸ ಹಂಚಿಕೊಂಡಿದ್ದಾರೆ.

ರಶ್ಮಿಕಾ ಪೋಸ್ಟ್:
'ಹಾ..ನಾನು ಸಾಮಾನ್ಯವಾಗಿ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುವುದಿಲ್ಲ ಆದರೆ ನನ್ನ ಈ ಜರ್ನಿಯಲ್ಲಿ ನೀವೆಲ್ಲರೂ ಭಾಗಿಯಾಗಿರುವ ಕಾರಣ ಈ ವಿಷಯವನ್ನು ನಾನು ಹೇಳಿಕೊಳ್ಳಲೇ ಬೇಕು. ಈ ಹಿಂದೆ ನಾನು ಎಂದೂ ಇಂಥದ್ದೊಂದು ಕೆಲಸ ಮಾಡುವ ಸಾಮರ್ಥ್ಯವಿರುತ್ತದೆ ಎಂದು ಕಲ್ಪಿಸಿಯೂ ಕೊಂಡಿರಲಿಲ್ಲ.  ಏರ್ಪೋರ್ಟ್‌ಗೆ ಓಡುವ ಗಡಿಬಿಡಿಯಲ್ಲಿ 2 ನಿಮಿಷ ತೆಗೆದುಕೊಂಡು ಈ ಫೋಸ್‌ ಕೊಟ್ಟಿರುವೆ. ನನ್ನ ಜರ್ನಿಯಲ್ಲಿ ಒಂದು ಭಾಗವಾಗಿದ್ದ ನಿಮಗೆ  ತುಂಬಾ ಥ್ಯಾಂಕ್ಸ್. ಇದು ನಿಮಗಾಗಿ' ಎಂದು ರಶ್ಮಿಕಾ ಫೋಟೋ ಶೇರ್ ಮಾಡಿಕೊಂಡಿದ್ದಾರೆ. 

ಆಡಿ ಒಡತಿಯಾದ ರಶ್ಮಿಕಾ ಮಂದಣ್ಣ 

ಮೊದಲ ಕಾರು ಕೊಂಡ ಸಂಭ್ರಮ!
ಕಿರಿಕ್ ಪಾರ್ಟಿ ಸಿನಿಮಾ ಚಿತ್ರೀಕರಣ ವೇಳೆ 2017ರಲ್ಲಿ ನಟಿ ರಶ್ಮಿಕಾ ಮಂದಣ್ಣ ಕೆಂಪು ಬಣ್ಣದ ಆಡಿ ಕಾರು ಖರೀದಿ ಮಾಡಿದ್ದರು. ಆಗ ಕಾರು ಕೊಳ್ಳುವುದು ರಶ್ಮಿಕಾ ಮಂದಣ್ಣ ಅವರ ಬಹು ದೊಡ್ಡ ಕನಸಾಗಿತ್ತು. ಅಂದು ನಟ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥವಾಗಿದ್ದ ಕಾರಣ ಅವರೊಟ್ಟಿಗೇ  ಹೋಗಿ ಕಾರು ಖರೀದಿಸಿದ್ದರು. ಆ ಸಂಭ್ರಮವನ್ನು ಫೋಟೋ ಮೂಲಕ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?