
ಮೇಲುಕೋಟೆ(ಸೆ.13): ಖ್ಯಾತ ಚಲನಚಿತ್ರ ನಟಿ ರಚಿತಾ ರಾಮ್ ಮೇಲುಕೋಟೆಗೆ ಭೇಟಿ ನೀಡಿ ತಮ್ಮ ಮನೆ ದೇವರಾದ ಶ್ರೀ ಚೆಲುವನಾರಾಯಣಸ್ವಾಮಿ ದರ್ಶನ ಪಡೆದು ವಿಶೇಷಪೂಜೆ ಸಲ್ಲಿಸಿದ್ದಾರೆ.
ಭಕ್ತಿಯಿಂದ ಹಣೆಗೆ ಮೂರುನಾಮ ಧರಿಸಿ ಸ್ವಾಮಿಯ ದರ್ಶನ ಪಡೆದರು. ಪ್ರತಿವರ್ಷ ತಪ್ಪದೇ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆಯುವ ರಚಿತಾ ರಾಮ್ ಈ ವರ್ಷವೂ ಸ್ವಾಮಿಯ ದರ್ಶನ ಪಡೆದು ಸತ್ಸಂಪ್ರದಾಯವನ್ನು ಮುಂದುವರೆಸಿದ್ದಾರೆ. ನಾಮಧರಿಸಿದ ಫೋಟೋವನ್ನು ಫೇಸ್‌ಬುಕ್ ಪೇಜ್ ಮೂಲಕ ಹಂಚಿಕೊಂಡ ನಟಿ ನಾಮಧರಿಸುವ ಮಹತ್ವವನ್ನು ಅಭಿಮಾನಿಗಳಿಗೆ ಮನವರಿಕೆ ಮಾಡಿದ್ದಾರೆ.
ನಟಿ ರಚಿತಾ ರಾಮ್‌ಗೆ ಕಾಂಚೀವರಂ ಸೀರೆ ಗಿಫ್ಟ್ ಕೊಟ್ಟ ಕಂಗಣಾ ರಣಾವತ್ 'ತಲೈವಿ' ತಂಡ!
ಇಂದೂ ದೇಗುಲಕ್ಕೆ ಪ್ರವೇಶವಿಲ್ಲ:
ಸರ್ಕಾರ ವೀಕೆಂಡ್ ಕರ್ಫ್ಯೂ ವಾಪಸ್ ಪಡೆದಿದೆಯಾದರೂ ಶನಿವಾರ ಮತ್ತು ಭಾನುವಾರ ಮೇಲುಕೋಟೆಯಲ್ಲಿ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ಬೆಟ್ಟದ ದೇವಾಲಯದಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.