
1997ರಲ್ಲಿ ತಾಯಿ ಸಾಹೇಬಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಹರೀಶ್ ರಾಜ್ 48ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಗೂ 12 ಕನ್ನಡ ಧಾರಾವಾಹಿ, 7 ಹಿಂದಿ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಹಲವು ವರ್ಷಗಳ ಸಿನಿ ಜರ್ನಿಯಲ್ಲಿ ಹರೀಶ್ ಆಯ್ಕೆ ಮಾಡಿಕೊಂಡಿರುವ ಪಾತ್ರಗಳೆಲ್ಲಾ ಒಂದಕ್ಕಿಂತ ಒಂದು ಭಿನ್ನವಾಗಿದೆ.
ಇದೀಗ ಎರಡು ಸೂಪರ್ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುವ ಮೂಲಕ 50 ಸಿನಿಮಾಗಳನ್ನು ಪೂರೈಸುತ್ತಾರೆ. ಸಿಂಪಲ್ ಸುನಿ ನಿರ್ದೇಶನದ 'ಸಖತ್' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. '2020 ಲಾಕ್‌ಡೌನ್ ಅನಿರೀಕ್ಷಿತ ಬದಲಾವಣೆಗಳನ್ನು ತಂದಿದೆ. ಸಖತ್ ಚಿತ್ರದಲ್ಲಿ ನಾನು ಸ್ವಾಮಿಜಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವೆ. ಈಗ ಪರಿಸ್ಥಿತಿಯಲ್ಲಿ ಹೀರೋ ಹೇಗೆ ಜೀವನ ನಡೆಸುತ್ತಾನೆ ಕಷ್ಟಗಳನ್ನು ಎದುರಿಸುತ್ತಾನೆ ಅವನಿಗೆ ನಾನು ಹೇಗೆ ಸಹಾಯ ಮಾಡುವೆ ಎಂಬುವುದು ಕಥೆ. ಚಿತ್ರಕ್ಕಾಗಿ ನಾನು ಸಂಪೂರ್ಣವಾಗಿ ಬದಲಾಗಿರುವೆ' ಎಂದು ಹರೀಶ್ ರಾಜ್ ಹೇಳಿದ್ದಾರೆ.
ಎರಡು ಕೊರೋನಾ ವೈರಸ್ ವ್ಯಾಕ್ಸಿನ್ ತೆಗೆದುಕೊಂಡಿರುವ ಹರೀಶ್ ರಾಜ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಧಾರಾವಾಹಿ ಚಿತ್ರೀಕರಣ ಮುಗಿಸಿದ್ದಾರೆ. ಕೈಯಲ್ಲಿ ಮತ್ತೊಂದು ಸಿನಿಮಾ ಪ್ರಾಜೆಕ್ಟ್ ಇದ್ದು, ಶೀಘ್ರದಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಇನ್ನು ಗಣೇಶ ಹಬ್ಬದ ದಿನ ಪೊಲೀಸ್ ಲುಕ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ, ಯಾವ ಚಿತ್ರದಲ್ಲಿ ಹರೀಶ್ ಪೊಲೀಸ್ ಪಾತ್ರ ಎಂದು ಕುತೂಹಲ ಹೆಚ್ಚಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.