
ಸಂತೋಷ್ ಆನಂದ್‌ರಾಮ್ ನಿರ್ದೇಶನದ ಈ ಚಿತ್ರಕ್ಕೆ ಶೂಟಿಂಗ್ ಮುಗಿದಿದ್ದು, ಈಗ ಆಡಿಯೋ ಮೂಲಕ ಅಪ್ಪು ಅಭಿಮಾನಿಗಳಲ್ಲಿ ಸಂಭ್ರಮ ತುಂಬಿಸಲು ಹೊರಟಿದೆ ಚಿತ್ರತಂಡ.
ಚಿತ್ರೀಕರಣ ಮುಗಿಯಿತು; ಧಾರವಾಡದ ದೇವಸ್ಥಾನದಲ್ಲಿ ಪುನೀತ್ ದಂಪತಿ!
ಕನ್ನಡದ ಜತೆಗೆ ತೆಲುಗಿನಲ್ಲೂ ಈ ಸಿನಿಮಾ ಬಿಡುಗಡೆ ಆಗಲಿದ್ದು, ಚಿತ್ರದ ಮೊದಲ ಹಾಡು ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ಅನಾವರಣಗೊಳ್ಳುತ್ತಿದೆ. ಪವರ್ ಆಫ್ ಯೂತ್ ಎನ್ನುವ ಈ ಹಾಡಿಗೆ ಸಂತೋಷ್ ಆನಂದ್‌ರಾಮ್ ಅವರೇ ಸಾಹಿತ್ಯ ಬರೆದಿದ್ದು, ಎಸ್ ಎಸ್ ತಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಶುಭ ಕೋರಿದ ಪೂರಿ ಜಗನ್ನಾಥ್
ನಿರ್ದೇಶಕ ಪೂರಿ ಜಗನ್ನಾಥ್ ಅವರು ಪುನೀತ್ ಅವರನ್ನು ತಮ್ಮದೇ ಸ್ಟೈಲಿನಲ್ಲಿ ತೆಲುಗು ಚಿತ್ರರಂಗಕ್ಕೆ ಸ್ವಾಗತ ಮಾಡಿದ್ದಾರೆ. ‘ಕನ್ನಡ ಕಂಠೀರವ ಡಾ. ರಾಜ್‌ಕುಮಾರ್ ವಾರಸ್ದಾರ, ಮೈ ಹೀರೋ ಪುನೀತ್ ರಾಜ್‌ಕುಮಾರ್ ಲವ್ ಯೂ ಆ್ಯಂಡ್ ಯುವರ್ ಫ್ಯಾಮಿಲಿ. ವೆಲ್‌ಕಮ್ ಟು ತೆಲುಗು ಸಿನಿಮಾ’ ಎಂದು ಟ್ವೀಟ್ ಮಾಡುವ ಮೂಲಕ ಪುನೀತ್ ರಾಜ್‌ಕುಮಾರ್ ಅವರಿಗೆ ಶುಭ ಕೋರಿದ್ದಾರೆ. ಆ ಮೂಲಕ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಅಪ್ಪು ಸಿನಿಮಾ ಮಾಡಿದ್ದನ್ನೂ ಕೂಡ ಪೂರಿ ಜಗನ್ನಾಥ್ ನೆನಪಿಸಿಕೊಂಡಿದ್ದಾರೆ.
ಸೈಲೆಂಟ್ ಆಗಿ ಬರ್ತಿದ್ದಾನೆ 'ಯುವರತ್ನ'; ಹಬ್ಬಕ್ಕೆ ವಿಶೇಷ ಗಿಫ್ಟ್!
ತೆಲುಗು ಚಿತ್ರರಂಗದ ನಿರ್ದೇಶಕ ಪೂರಿ ಅವರ ಈ ಟ್ವೀಟ್ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟುವೈರಲ್ ಆಗುತ್ತಿದೆ. ‘ಯುವರತ್ನ’ ಚಿತ್ರ ‘ಕೆಜಿಎಫ್’ ಚಿತ್ರದ ನಿರ್ಮಾಪಕರ ನಿರ್ಮಾಣದ ಸಿನಿಮಾ ಎನ್ನುವ ಕಾರಣಕ್ಕೆ ಟಾಲಿವುಡ್‌ನಲ್ಲೂ ಯುವರತ್ನ ಸಾಕಷ್ಟುಕ್ರೇಜ್ ಹುಟ್ಟಿಸುತ್ತಿದೆ. ಸಯ್ಯೇಷಾ ನಾಯಕಿಯಾಗಿ ನಟಿಸಿದ್ದು, ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.