ಟ್ರಿಕ್ಕೀ ಪ್ಲಾನ್ ಮಾಡಿದ್ದ ನಟಿ ಪ್ರಿಯಾಮಣಿಗೆ ಸಿಕ್ಕಿಬಿದ್ದಿದ್ರಾ ಪುನೀತ್? ಇದ್ದವರಲ್ಲಿ ಗೆದ್ದವರಾರು?

Published : Nov 11, 2024, 02:47 PM ISTUpdated : Nov 11, 2024, 09:27 PM IST
ಟ್ರಿಕ್ಕೀ ಪ್ಲಾನ್ ಮಾಡಿದ್ದ ನಟಿ ಪ್ರಿಯಾಮಣಿಗೆ ಸಿಕ್ಕಿಬಿದ್ದಿದ್ರಾ ಪುನೀತ್? ಇದ್ದವರಲ್ಲಿ ಗೆದ್ದವರಾರು?

ಸಾರಾಂಶ

'ನೋ ನೋ, ಇದಕ್ಕೆ ಆನ್ಸರ್ ಮಾಡೋದಕ್ಕೆ ಆಗೋದೇ ಇಲ್ಲ' ಅಂದ್ಬಿಟ್ರು. ಬಳಿಕ ಪ್ರಿಯಾಮಣಿ 'ಆಕ್ಷನ್ ಅಥವಾ ರೊಮ್ಯಾನ್ಸ್‌' ಎನ್ನಲು ಥಟ್ಟನೇ ಅಪ್ಪು 'ಆಕ್ಷನ್' ಅಂದಿದ್ದಾರೆ. ಬಳಿಕ ಪ್ರಿಯಾಮಣಿ 'ಡಾಟರ್ಸ್ ಅಥವಾ ವೈಫ್' ಎನ್ನಲು ಅಪ್ಪು..

ನಟಿ ಪ್ರಿಯಾಮಣಿ (Priyamani) ಹಾಗೂ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಒಟ್ಟಿಗೇ ಇದ್ದಾರೆ. ಪ್ರಿಯಾಮಣಿ ಅಪ್ಪುವನ್ನು ಸಂದರ್ಶನ ಮಾಡುತ್ತಿದ್ದಾರೆ, ಪವರ್ ಸ್ಟಾರ್ ಒಂಥರಾ ಹಾಟ್ ಸೀಟ್‌ನಲ್ಲಿ ಕುಳಿತಿದ್ದಾರೆ ಎನ್ನಬಹುದು. ಯಾಕಂದ್ರೆ, ನಟಿ ಪ್ರಿಯಾಮಣಿ ಅವರು ಪುನೀತ್ ಅವರಿಗೆ ಭಾರೀ ಕಂಡೀಷನ್ ಹಾಕಿದ್ದಾರೆ. 'ಫಟ್ ಫಟಾ ಅಂತ ಆನ್ಸರ್ ಕೊಡ್ಬೇಕು, ಡಿಪ್ಲೋಮ್ಯಾಟಿಕ್ ಆನ್ಸರ್ ಬೇಡ, ಜಾಸ್ತಿ ಹೊತ್ತು ತಗೋಳ್ಳಂಗಿಲ್ಲ ಫಟ್ ಅಂತ ಹೇಳ್ಬೇಕು' ಅಂತೆಲ್ಲಾ ಕಂಡಿಷನ್ ಹಾಕಿದ್ದಾರೆ. 

ಇಷ್ಟ ಇಲ್ಲ ಅಂದ್ರೆ ಸ್ಕಿಪ್ ಎಂದ ಪುನೀತ್‌ಗೆ, 'ಏನ್ ಸ್ಕಿಪ್? ಇಲ್ಲಿ ಸ್ಕಿಪ್ಪು ಗಿಪ್ಪು ಏನೂ ಇಲ್ಲ.' ಅಂತ ಹೆದರಿಸಿದ್ದಾರೆ ಪ್ರಿಯಾಮಣಿ. ಬಳಿಕ ಅಪ್ಪುವನ್ನು ಎಲ್ಲಾ ಕಂಡಿಷನ್ಸ್‌ಗೆ ಒಪ್ಪಿಸಿ ಬಳಿಕ ಇಂಟರ್‌ವ್ಯೂ ಶುರು ಮಾಡಿದ್ದಾರೆ. ಆದರೆ, ಪುನೀತ್ ನಗುವಿನಲ್ಲೇ ಅವರು ಡಿಪ್ಲೋಮ್ಯಾಟಿಕ್ ಆನ್ಸರ್ ಮಾಡ್ತಾರೆ ಅನ್ನೋದು ಸ್ಪಷ್ಟವಾಗಿದೆ. ಆದರೆ, ಇಂಟರ್‌ವ್ಯೂ ಶುರುವಾಗಿದೆ. ನೋಡುವವರಿಗೆ ಸಹಜವಾಗಿ ಕುತೂಹಲ ಸೃಷ್ಟಿಯಾಗುತ್ತದೆ, ಕಾರಣ, ಪುನೀತ್ ಯಾವ ಪ್ರಶ್ನೆಗೆ ಹೇಗೆ ಉತ್ತರ ಹೇಳುತ್ತಾರೋ ಅಂತ! 

ಸತ್ಯ ಸಾಯೋದಿಲ್ಲ ಒಂದಿನ ಹೊರಗೆ ಬರುತ್ತೆ ಅಂತಾರೆ; ಡಾ ರಾಜ್‌-ವಿಷ್ಣು ವಿಷ್ಯದಲ್ಲೂ ಅದು ನಿಜವಾಗಿದೆ!

ಪ್ರಿಯಾಮಣಿ ಮೊದಲ ಪ್ರಶ್ನೆ 'ಶಿವಣ್ಣ ಅಥವಾ ರಾಘಣ್ಣ' ಎಂಬುದಾಗಿತ್ತು. ಅದಕ್ಕೆ ಕರ್ನಾಟಕ ರತ್ನ ಪುನೀತ್ 'ನೋ ನೋ, ಇದಕ್ಕೆ ಆನ್ಸರ್ ಮಾಡೋದಕ್ಕೆ ಆಗೋದೇ ಇಲ್ಲ' ಅಂದ್ಬಿಟ್ರು. ಬಳಿಕ ಪ್ರಿಯಾಮಣಿ 'ಆಕ್ಷನ್ ಅಥವಾ ರೊಮ್ಯಾನ್ಸ್‌' ಎನ್ನಲು ಥಟ್ಟನೇ ಅಪ್ಪು 'ಆಕ್ಷನ್' ಅಂದಿದ್ದಾರೆ. ಬಳಿಕ ಪ್ರಿಯಾಮಣಿ 'ಡಾಟರ್ಸ್ ಅಥವಾ ವೈಫ್' ಎನ್ನಲು ಅಪ್ಪು 'ವೈಫ್' ಎಂದಿದ್ದಾರೆ. ನಂತರದ 'ಆಕ್ಟ್ ಅಥವಾ ಪ್ರೋಡ್ಯೂಸ್' ಎಂಬಪ್ರಶ್ನೆಗೆ ಪುನೀತ್ 'ಪ್ರೊಡ್ಯೂಸ್' ಎಂದಿದ್ದಾರೆ. 

'ರಮ್ಯಾ ಅಥವಾ ರಕ್ಷಿತಾ' ಎಂಬ ಪ್ರಿಯಾಮಣಿ ಪ್ರಶ್ನೆಗೆ 'ಏಯ್, ಇಬ್ಬರೂ, ಪಾಪ ಹೆಂಗ್ರಿರೀ? ಇಬ್ಬರೂ' ಎಂದಿದ್ದಾರೆ. ಅದಕ್ಕೆ ಪ್ರಿಯಾಮಣಿ ಪಟ್ಟುಬಿಡದೇ 'ನೋ ನೋ, ಇದಕ್ಕೇ ನಾನು ಮೊದಲೇ ಹೇಳಿದ್ದು, ಯಾರಾದ್ರೂ ಒಬ್ರನ್ನ ಹೇಳಲೇಬೇಕು' ಅಂತಾರೆ. ಅದಕ್ಕೆ ಪುನೀತ್ 'ರಮ್ಯಾರಕ್ಷಿತಾ, & ರಕ್ಷಿತಾರಮ್ಯಾ' (Ramya and Rakshitha) ಅಂತಾರೆ. 

'ಗೋವಿಂದಾಯ ನಮಃ' ಕೋಮಲ್ ಕುಮಾರ್ ಸಂಕಷ್ಟದ ವೇಳೆ ಪತ್ನಿ ಅನುಸೂಯಾ ಮಾಡಿದ್ದೇನು?

ಒಟ್ಟಿನಲ್ಲಿ, ತಮಾಷೆಗಾಗಿ ನಡೆದ ಈ ಇಂಟರ್‌ವ್ಯೂದಲ್ಲಿ ಸಹಜವಾಗಿಯೇ ಪುನೀತ್ ಎಲ್ಲೂ ಸಿಕ್ಕಿಹಾಕಿಕೊಳ್ಳುವುದಿಲ್ಲ. ಅಪ್ಪು ಉದ್ಧೇಶ ಯಾರಿಗೂ ನೋವಾಗಬಾರದು ಎಂಬುದಷ್ಟೇ ಆಗಿದೆ ಅಂತ ಸಂದರ್ಶನ ನೋಡಿದ ಯಾರಿಗಾದರೂ ಅನ್ನಿಸದೇ ಇರದು! ಪ್ರಿಯಾಮಣಿ ಕೂಡ ಅಷ್ಟೇ, ಅವರಿಗೆ ಮೊದಲೇ 'ಯಾರಿಗೂ ನಿನ್ನ ಉತ್ತರದಿಮದ ನೋವಾಗುವುದಿಲ್ಲ, ಭಯ ಬೇಡ' ಎಂಬ ಅಭಯ ನೀಡಿಯೇ ಪ್ರಶ್ನೆ ಕೇಳಿದ್ದಾರೆ, ಉತ್ತರ ಪಡೆದಿದ್ದಾರೆ. 

ಇನ್ನು, ನಟಿ ರಕ್ಷಿತಾ ಜೊತೆ ಪವರ್ ಸ್ಟಾರ್ ಪುನೀತ್ ಅವರು ತಮ್ಮ ಮೊಟ್ಟಮೊದಲ ಚಿತ್ರ 'ಅಪ್ಪು'ದಲ್ಲಿ ನಟಿಸಿದ್ದಾರೆ. ಇನ್ನು ರಮ್ಯಾ ಜೊತೆ ಪುನೀತ್ 'ಅಭಿ' ಮತ್ತು 'ಆಕಾಶ್' ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ಸಿನಿಮಾಗಳೂ ಸೂಪರ್ ಹಿಟ್ ಆಗಿವೆ. ರಕ್ಷಿತಾ ಹಾಗೂ ರಮ್ಯಾ ಇಬ್ಬರೂ ಕೂಡ ಪುನೀತ್ ಜೋಡಿಯಾಗಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ ಸಿನಿಮಾ ಮೂಲಕವೇ ಕನ್ನಡ ಸಿನಿಮಾ ಉದ್ಯಮಕ್ಕೆ ಬಂದಿದ್ದಾರೆ. 

ಅನುಶ್ರೀ ಮುಂದೆ ಮೈಸೂರಿನ ಶಕ್ತಿಧಾಮದಲ್ಲಿ ಪತ್ನಿ ಗೀತಾಗೆ ಕಣ್ಣೀರು ಹಾಕಿಸಿದ ಶಿವಣ್ಣ!

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ