100 ಸಿನಿಮಾಗಳಲ್ಲಿ ರಾಜ್ಯಾದ್ಯಂತ ರಂಗಸಮುದ್ರ ಸಿನಿಮಾ ರಿಲೀಸ್ ಆಗುತ್ತಿದೆ. ಪುನೀತ್ ರಾಜ್‌ಕುಮಾರ್ ಒಪ್ಪಿಕೊಂಡ ಚಿತ್ರವಿದು....
‘ಈ ಸಿನಿಮಾ ಕಥೆ ಬರೆಯುವಾಗ ಪುನೀತ್ ರಾಜ್‌ಕುಮಾರ್ ಅವರಿಗಾಗಿ ಜಿಲ್ಲಾಧಿಕಾರಿಗಳ ಪಾತ್ರ ಬರೆದಿದ್ದೆ. ಅವರು ನಮ್ಮಂಥ ಹೊಸಬರ ಸಿನಿಮಾದಲ್ಲಿ ನಟಿಸುತ್ತಾರೋ ಇಲ್ಲವೋ ಅನ್ನುವ ಅನುಮಾನದಲ್ಲಿ ಅವರಿಗೆ ತೋರಿಸಲೆಂದೇ ಸಿನಿಮಾ ಚಿತ್ರೀಕರಿಸಿಕೊಂಡು ಅವರ ಬಳಿ ಹೋಗಿದ್ದೆವು. ಅಪ್ಪು ಸಾರ್ ಸಿನಿಮಾದ ಕಚ್ಚಾ ಕಾಪಿ ನೋಡಿದರು. ಒಂದಿಷ್ಟು ಪ್ರಶ್ನೆ ಕೇಳಿ ಸಿನಿಮಾ ಮೆಚ್ಚಿಕೊಂಡು ನಟಿಸುತ್ತೇನೆ ಎಂದುಬಿಟ್ಟರು. ಅವರು ತೀರಿಕೊಳ್ಳುವ ಹಿಂದಿನ ದಿನ ಅವರ ಜೊತೆ ಮಾತನಾಡಿದ್ದೆ. ನಮ್ಮ ಚಿತ್ರದಲ್ಲಿ ನಟಿಸುವುದಕ್ಕೆ ಡೇಟ್ಸ್ ಕೊಟ್ಟಿದ್ದರು’
- ಈ ಮಾತುಗಳನ್ನು ಹೇಳಿದ್ದು ‘ರಂಗಸಮುದ್ರ’ ಸಿನಿಮಾ ನಿರ್ದೇಶಕ ರಾಜ್‌ಕುಮಾರ್ ಅಸ್ಕಿ.
ನಾನು ನೋಡಿಲ್ಲ ಅಂತ ನಿಮಗ್ಯಾರೂ ಹೇಳಿಲ್ಲವೇ!; 'ಕಾಟೇರ' ಚಿತ್ರದ ಬಗ್ಗೆ ಸುದೀಪ್ ಗೊಂದಲದ ಹೇಳಿಕೆ!
‘ರಂಗಸಮುದ್ರ’ ಸಿನಿಮಾ ಜ.19ಕ್ಕೆ ರಾಜ್ಯಾದ್ಯಂತ ಸುಮಾರು 100 ಸ್ಕ್ರೀನ್‌ಗಳಲ್ಲಿ ತೆರೆಗೆ ಬರಲಿದೆ. ಚಿತ್ರದಲ್ಲಿ ರಂಗಾಯಣ ರಘು ಡೊಳ್ಳು ಕಲಾವಿದನಾಗಿ ನಟಿಸಿದ್ದಾರೆ.
ಮಹೇಶ್ ಬಾಬು ಕೈಯಲ್ಲಿರುವುದು ಸಾಮಾನ್ಯ ಬೀಡಿ ಅಲ್ಲ; ಸತ್ಯ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು
‘ಅಳಿಯುತ್ತಿರುವ ಡೊಳ್ಳು ಕಲೆಯ ಮಹತ್ವ ತಿಳಿಸುವ ಜೊತೆಗೆ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿರುವ ಜಾತಿ ಪಂಥಗಳಾಚೆಗೆ ನಾವೆಲ್ಲ ಒಂದು ಎಂಬ ಭಾವವನ್ನು ಸಿನಿಮಾ ಪ್ರತಿಬಿಂಬಿಸುತ್ತದೆ. ಈ ಸಿನಿಮಾದಲ್ಲಿ ಒಂದು ಗೀತೆಯನ್ನು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಹಾಡಿರುವುದು ಮರೆಯಲಾಗದ ಅನುಭವ’ ಎಂದೂ ರಾಜ್‌ಕುಮಾರ್ ತಿಳಿಸಿದ್ದಾರೆ. ಹೊಯ್ಸಳ ಕೊಣನೂರು ಈ ಚಿತ್ರದ ನಿರ್ಮಾಪಕರು.