Puneeth Rajkumar ಅ.9ಕ್ಕೆ ಗಂಧದಗುಡಿ ಟ್ರೈಲರ್‌ ಬಿಡುಗಡೆ!

Published : Oct 07, 2022, 11:20 AM IST
Puneeth Rajkumar ಅ.9ಕ್ಕೆ ಗಂಧದಗುಡಿ ಟ್ರೈಲರ್‌ ಬಿಡುಗಡೆ!

ಸಾರಾಂಶ

ಸೋಷಿಯಲ್ ಮೀಡಿಯಾ ಗಂಧದ ಗುಡಿ ಟ್ರೈಲರ್ ರಿಲೀಸ್ ದಿನಾಂಕ ಅನೌನ್ಸ್ ಮಾಡಿದ ಅಶ್ವಿನಿ ಪುನೀತ್. 

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯಿಸಿರುವ ಕೊನೆ ಸಿನಿಮಾ ಗಂಧದ ಗುಡಿ ಅಕ್ಟೊಬರ್ 28ರಂದು ಬಿಡುಗಡೆಯಾಗುತ್ತಿದೆ. ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಇದಾಗಿದ್ದು ಅಪ್ಪುನ ಕೊನೆಯ ಬಾರಿ ಟಿವಿಯಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಅಕ್ಟೋಬರ್ 9ರಂದು ಗಂಧದ ಗುಡಿ ಟ್ರೈಲರ್ ರಿಲೀಸ್‌ಗೆ ಸಜ್ಜಾಗಿದೆ ಎಂದು ಅಪ್ಪು ಪತ್ನಿ ಅಶ್ವಿನಿ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.

ನಟ ಪುನೀತ್‌ರಾಜ್‌ಕುಮಾರ್‌ ಅವರ ಕನಸಿನ ದೃಶ್ಯ ವೈಭವ ಎನಿಸಿಕೊಂಡಿರುವ ‘ಗಂಧದಗುಡಿ’ ಚಿತ್ರದ ಟ್ರೇಲರ್‌ ಇದೇ ಅಕ್ಟೋಬರ್‌ 9ರಂದು ಬಿಡುಗಡೆ ಆಗುತ್ತಿದೆ. ಈ ಬಗ್ಗೆ ಸ್ವತಃ ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ಒಂದು ಅದ್ಭುತ ಪಯಣಕ್ಕೆ ಕ್ಷಣಗಣನೆ ಪ್ರಾರಂಭವಾಗುತ್ತಿದೆ. ಗಂಧದಗುಡಿ ಟ್ರೇಲರ್‌ ಅ.9ಕ್ಕೆ ಬೆಳಗ್ಗೆ 10 ಗಂಟೆಗೆ ಪಿಆರ್‌ಕೆ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಆಗುತ್ತಿದೆ’ ಎಂದು ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಅವರು ಬರೆದುಕೊಂಡಿದ್ದಾರೆ. 

ಅಮೋಘವರ್ಷ ನಿರ್ದೇಶನದ ಈ ಚಿತ್ರವು ರಾಜ್ಯದ ವನ್ಯ-ಜೀವಿ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ತೆರೆ ಮೇಲೆ ತರಲಿದೆ. ಸದ್ಯಕ್ಕೆ ಚಿತ್ರದ ಹೊಸ ಪೋಸ್ಟರ್‌ ಜತೆಗೆ ಟ್ರೇಲರ್‌ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದ್ದು, ಪುನೀತ್‌ ಅವರ ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚಾಗಿದೆ. 

ಕ್ಯಾಮರಾ ಹಿಡಿದ ಅಪ್ಪು:

ಕೆಲವು ದಿನಗಳ ಹಿಂದೆ ಗಂಧದ ಗುಡಿ ಸಿನಿಮಾದ ಸಣ್ಣ ವಿಡಿಯೋ ಕ್ಲಿಪ್ ವೈರಲ್ ಆಗಿತ್ತು. ಹೆಗಲ ಮೇಲೆ ಪುನೀತ್ ಕ್ಯಾಮೆರಾ ಹಿಡಿದು ಕಾಡಿನಲ್ಲಿ ಚಿತ್ರೀಕರಣ ಮಾಡುತ್ತಿರುವುದು.ಅಪ್ಪು ಮುಖದಲ್ಲಿ ನಗು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಮಗುವಿನ ರೀತಿ ಅಪ್ಪು ಸಣ್ಣ ಪುಟ್ಟ ವಿಚಾರಕ್ಕೂ ಗಮನ ಕೊಟ್ಟು ಪ್ರಶ್ನೆ ಕೇಳುತ್ತಿರುವುದು ಎಲ್ಲರಿಗೂ ಇಷ್ಟ ಅಗಿದ್ದಾರೆ.

Puneeth Rajkumar ರಾಣಾ ದಗ್ಗುಬಾಟಿ ಆಫೀಸ್‌ನಲ್ಲಿ ಅಪ್ಪು ಪುತ್ಥಳಿ!

ಟೀಸರ್‌ಗೆ ಒಂದೇ ದಿನ 30 ಲಕ್ಷ ವ್ಯೂ:

ನಟ ಪುನೀತ್‌ರಾಜ್‌ಕುಮಾರ್(Puneeth Rajkumar) ಅವರ ಬಹುದೊಡ್ಡ ಕನಸು ‘ಗಂಧದಗುಡಿ’(Gandhada gudi) ಸಾಕ್ಷ್ಯ ಚಿತ್ರ. ಇದರ ಟೈಟಲ್ ಟೀಸರ್(Title teaser) ಒಂದೇ ದಿನಕ್ಕೆ 30 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.  ಈ ಮೂಲಕ ಯೂಟ್ಯೂಬ್‌ನಲ್ಲಿ ದಾಖಲೆ ಮಾಡಿದೆ. ಮೂರು ಲಕ್ಷದ ಎಪ್ಪತ್ತೈದು ಸಾವಿರ ಲೈಕ್ಸ್ ಬಂದಿದ್ದು, ಒಂದೇ ಒಂದು ಡಿಸ್ ಲೈಕ್ ಕೂಡ ಬಂದಿಲ್ಲ. ಅಷ್ಟರ ಮಟ್ಟಿಗೆ ಪುನೀತ್‌ರಾಜ್‌ಕುಮಾರ್ ಅವರ ಗಂಧದಗುಡಿ ಕನ್ನಡಿಗರಲ್ಲಿ ಕ್ರೇಜ್ ಹಾಗೂ ಕುತೂಹಲ ಹುಟ್ಟಿಸಿದೆ.

ಪುನೀತ್ ರಾಜ್‌ಕುಮಾರ್ ಜನ್ಮದಿನ ಇನ್ಮುಂದೆ 'ಸ್ಫೂರ್ತಿ ದಿನ'; ಸಿಎಂ ಬೊಮ್ಮಾಯಿ ಘೋಷಣೆ

ವಿಡಿಯೋ ಕೊನೆಯಲ್ಲಿ ಅಪ್ಪು ಆಕಾಶ ನೋಡುತ್ತಿರುವ ವಿಡಿಯೋ ತೋರಿಸಿ 2022ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. Based on true Events ಎಂದು ಆರಂಭದಲ್ಲಿ ಹೇಳಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ಟಾರ್ಚ್‌ ಆನ್ ಮಾಡುವ ಮೂಲಕ ವಿಡಿಯೋ ಆರಂಭವಾಗುತ್ತದೆ. ಆನಂತರ ಗನ್ ಲೋಡ್ (Gun Load) ಮಾಡಿಕೊಳ್ಳುವುದು, ಬುಡು ಬುಡುಕೆಯವರು ಏನೋ ಪೂಜೆ ಮಾಡುವುದು... ಹೀಗೆ ಒಂದಾದ ಮೇಲೊಂದು ದೃಶ್ಯಗಳು ಅದ್ಭುತವಾಗಿದೆ. ಚಲಿಸುತ್ತಿರುವ ಮೋಡಿಗಳು, ಹಸಿರು ಬಣ್ಣದ ಹಾವು, ಕೊಡಲಿ ಹಿಡಿದುಕೊಂಡು ನಡೆಯುತ್ತಿರುವ ಅರಣ್ಯ ಅಧಿಕಾರಿಗಳು...ಪದೇ ಪದೇ ಈ ಟೈಟಲ್ ಟೀಸರ್ ನೋಡಬೇಕು ಎಂದೆನಿಸುವುದರಲ್ಲಿ ಅನುಮಾವಿಲ್ಲ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?