
ಕನ್ನಡ ಚಿತ್ರರಂಗ ಮುತ್ತು, ಪವರ್ ಸ್ಟಾರ್ ಡಾ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ ಒಂದು ವರ್ಷ ಕಳೆದಿದೆ. ಏನಿದು ಅಪ್ಪು ಇಲ್ಲದೆ 365 ದಿನ ಆಯ್ತಾ? ಯಾರಿಂದಲ್ಲೂ ನಂಬಲು ಆಗುತ್ತಿಲ್ಲ. ಗಂಧದ ಗುಡಿ ಸಿನಿಮಾ ರಿಲೀಸ್ ಆಗಿರುವ ಕಾರಣ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ, ಇಲ್ಲೇ ಎಲ್ಲೋ ಹೋಗಿದ್ದಾರೆ, ವಿದೇಶದಲ್ಲಿ ಇದ್ದಾರೆ ಅನ್ನೋ ಭಾವನೆಯಲ್ಲಿ ಅಭಿಮಾನಿಗಳು ದಿನ ಸಾಗಿಸುತ್ತಿದ್ದಾರೆ. ನಿನ್ನೆ ಗಂಧದ ಗುಡಿ ಬಿಡುಗಡೆಯಾಗಿದೆ ಅನ್ನೋ ಸಂಭ್ರಮದಲ್ಲಿ ಮುಳುಗಬೇಕಾ ಅಥವಾ ಇಂದು ಅವರಿಲ್ಲದೆ ಒಂದು ವರ್ಷ ಅನ್ನೋ ಬೇಸರ ಪಡಬೇಕಾ ಗೊತ್ತಾಗುತ್ತಿಲ್ಲ.
ರಾಜ್ಯಾದ್ಯಂತ ಅಪ್ಪು ಸ್ಮರಣೆ ಹೇಗೆ ನಡೆದಿದೆ:
ಕೊಪ್ಪಳ:
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿ ಮಲ್ಲಾಪುರ ಗ್ರಾಮ ಸರ್ಕಾರಿ ಶಾಲೆಯಲ್ಲಿ ಅಪ್ಪು ಪುಣ್ಯಸ್ಮರಣೆ ಕಾರ್ಯಕ್ರಮ ನಡೆದಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಓರ್ವ ನಟನ ಪುಣ್ಯಸ್ಮರಣೆ ಮಾಡಿದ ಶಾಲೆ ಇದು. ಈ ಶಾಲೆ ಏಳಿಗೆ ಬಗ್ಗೆ ಚಿಂತಿಸಿ ಅಪ್ಪು ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಅಪ್ಪು ಭಾವ ಚಿತ್ರಕ್ಕೆ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿದ್ದಾರೆ. ಅಪ್ಪು ಕೊನೆಯ ಸಿನಿಮಾ ಜೇಮ್ಸ್ ಚಿತ್ರೀಕರಣ ಮಾಡುವಾಗ ಈ ಶಾಲೆಗೆ ಭೇಟಿ ಕಟ್ಟು ಬಡ ಮಕ್ಕಳ ಕಲಿಕೆಗೆ ತೊಂದರೆ ಆಗಬಾರದು ಎಂದು ಎರಡು ಸ್ಮಾರ್ಟ್ ಕ್ಲಾಸ್ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಅಪ್ಪು ನೆನೆದು ಪ್ರತಿದಿನ ಕ್ಲಾಸ್ ಆರಂಭವಾಗುತ್ತದೆ. ಕೊಪ್ಪಳ ನಗರದ ಬಸ್ ನಿಲ್ದಾಣದಲ್ಲಿ ಅಭಿಮಾನಿಗಳಿಂದ ಅನ್ನ ಸಂತರ್ಪಣೆ ನಡೆಸಿದ್ದಾರೆ. 1 ಕ್ವಿಂಟಲ್ ಬಗರಖಾನ್, ದಾಲ್ ಚಾ ಮಾಡಿಸಿದ್ದಾರೆ ಅಭಿಮಾನಿಗಳು.
ಮೈಸೂರು:
ಮೈಸೂರು ಅಂದ್ರೆ ಅಪ್ಪುಗೆ ತುಂಬಾನೇ ಇಷ್ಟ. ದೇವರಾಜ ಮೊಹಲ್ಲಾ ವಿನೋಬಾ ರಸ್ತೆಯಲ್ಲಿ ಪುಣ್ಯ ಸ್ಮರಣೆ ಮಾಡಿದ್ದಾರೆ. ಅಪ್ಪು ಚಿತ್ರಕ್ಕೆ ಹೂವಿನ ಅಲಂಕಾರ ಮಾಡಿದ್ದು ಸಾವಿರಾರೂ ಮಂದಿ ಸೇರಿಕೊಂಡು ಪೂಜೆ ಸಲ್ಲಿಸಿದ್ದಾರೆ. ಪುಣ್ಯ ಸ್ಮರಣೆ ಹಿನ್ನಲೆಯಲ್ಲಿ ಅನ್ನ ಸಂತರ್ಪಣೆ ಮಾಡಿದ್ದಾರೆ.
ಹುಬ್ಬಳ್ಳಿ:
ಹುಬ್ಬಳ್ಲಿಯಲ್ಲಿರುವ ಚನ್ನಮ್ಮ ವೃತ್ತದಲ್ಲಿ ಅಪ್ಪು ಭಾವ ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಫೋಟೊಗೆ ಬಾಡೂಟದ ನೈವೇದ್ಯ ಅರ್ಪಿಸಿದ್ದು ಆಗಮಿಸಿದ್ದ ಪ್ರತಿಯೊಬ್ಬರಿಗೂ ಸಸಿಗಳ ವಿತರಣೆ ಮಾಡಿದ್ದಾರೆ. ಅಪ್ಪುಗೆ ಪ್ರೀಯವಾದ ಮಟನ್, ಕಬಾಬ್ ನೈವೇದ್ಯ ಇಡಲಾಗಿತ್ತು. ಅಪ್ಪು ಹೆಸರಿನಲ್ಲಿ ಸಮಾಜ ಕಾರ್ಯ ಮಾಡಲು ಶುರು ಮಾಡಿದ್ದಾರೆ.
APPU DEATH ANNIVERSARY ಅಪ್ಪು ಸ್ಮರಣಾರ್ಥ ಅನ್ನುವುದೇ ಕಷ್ಟ: ನಟ ಸುನೀಲ್ ರಾವ್ ಭಾವುಕ
ಕೊಡಗು
ಅಪ್ಪು ಮೊದಲನೇ ವರ್ಷದ ಪುಣ್ಯಸ್ಮರಣೆಯಲ್ಲಿ ಮಡಿಕೇರಿಯಲ್ಲಿ ಅಂಗಾಂಗ ದಾನ, ನೇತ್ರದಾನ ಮತ್ತು ರಕ್ತದಾನ ಶಬಿರ ನಡೆಯುತ್ತಿದೆ.15 ಜನರಿಂದ ನೇತ್ರದಾನಕ್ಕೆ ಸಹಿ, 20 ಕ್ಕೂ ಹೆಚ್ಚು ಜನರಿಂದ ರಕ್ತದಾನ ಮತ್ತು 6 ಜನರಿಂದ ದೇಹದಾನಕ್ಕೆ ಸಹಿ ಮಾಡಿಸಿದ್ದಾರೆ.
Puneeth Rajkumar:'ಅಪ್ಪು'ಗಾಗಿ ವಿಶೇಷ ಮಂಡಕ್ಕಿ ಹಾರ ತಂದ ಅಜ್ಜಿ
ಯಾದಗಿರಿ:
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಗ್ರಾಮದಲ್ಲಿ ಡಾ.ಪುನೀತ್ ರಾಜಕುಮಾರ ಪುತ್ಥಳಿ ಅನಾವರಣ ಮಾಡಿದ್ದಾರೆ.ಅಪ್ಪು ಪುತ್ಥಳಿ ಅನಾವರಣಗೊಳಿಸಿದ ಶಾಸಕ ಶರಣಬಸಪ್ಪ ದರ್ಶನಾಪುರ. ಪುತ್ಥಳಿಗೆ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು ಜೊತೆ ಪುನೀತ್ ಸರ್ಕಲ್ ಉದ್ಘಾನೆ ಮಾಡಿದ್ದಾರೆ. ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ ಸೇರಿ ನೂರಾರು ಜನ ಭಾಗಿಯಾಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.