ನೋವಿನಲ್ಲಿ ಕಳೆದೋಯ್ತು ವರ್ಷ, ಪುನೀತ ಪರ್ವದಲ್ಲಿ ಶಿವಣ್ಣ ಭಾವುಕ, ರಮ್ಯಾ, ಧ್ರುವ ಸೇರಿ ಗಣ್ಯರು ನುಡಿ!

Published : Oct 21, 2022, 10:08 PM ISTUpdated : Oct 21, 2022, 10:13 PM IST
ನೋವಿನಲ್ಲಿ ಕಳೆದೋಯ್ತು ವರ್ಷ, ಪುನೀತ ಪರ್ವದಲ್ಲಿ ಶಿವಣ್ಣ ಭಾವುಕ, ರಮ್ಯಾ, ಧ್ರುವ ಸೇರಿ ಗಣ್ಯರು ನುಡಿ!

ಸಾರಾಂಶ

ಪುನೀತ್ ರಾಜ್‌ಕುಮಾರ್ ಅಭಿಯನಯದ ಕೊನೆಯ ಗಂಧದ ಗುಡಿ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ಎಲ್ಲಾ ಗಣ್ಯರು ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಭಾವುಕರಾಗಿದ್ದಾರೆ. ಶಿವಣ್ಣ, ರಾಜ್ ಬಿ ಶೆಟ್ಟಿ, ರವಿಚಂದ್ರನ್, ನಟಿ ರಮ್ಯ ಸೇರಿದಂತೆ ಗಣ್ಯರು ಆಡಿದ ಮಾತುಗಳು ಇಲ್ಲಿವೆ.

ಬೆಂಗಳೂರು(ಅ.21):  ಪುನೀತ್ ರಾಜ್‌ಕಮಾರ್ ನಮ್ಮನಗಲಿ ಸರಿಸುಮಾರು ಒಂದು ವರ್ಷ. ಆದರೆ ನೋವು ಮಾತ್ರ ಹಾಗೇ ಇದೆ. ಪುನೀತ್ ಇಲ್ಲ ಅನ್ನೋದು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗದ ಮಾತು. ಇದರ ನಡುವೆ ಪುನೀತ್ ರಾಜ್‌ಕುಮಾರ್ ಅಭಿಯನದ ಕೊನೆಯ ಚಿತ್ರ ಗಂಧದ ಗುಡಿ ಪ್ರಿ ರೀಲಿಸ್ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ಹಲವು ಗಣ್ಯರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಶಿವರಾಜ್ ಕುಮಾರ್, ಒಂದು ವರ್ಷ ಹೇಗೆ ಹೋಯಿತು ಅನ್ನೋದು ನೆಪಿಸಿಕೊಳ್ಳೋದೇ ಕಷ್ಟ. ನೋವಿನಲ್ಲೇ ವರ್ಷ ಕಳೆಯಿತು. ಎಲ್ಲಾ ಚಿತ್ರರಂಗದವರಿಗೆ, ಅಭಿಮಾನಿಗಳಿಗೆ ನೋವಿದೆ. ನಮ್ಮ ದುಃಖದಲ್ಲಿ ನೀವೆಲ್ಲಾ ಪಾಲ್ಗೊಂಡಿದ್ದು ನಮಗೆ ಧೈರ್ಯ ಮೂಡಿಸಿತು ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. ಅಪ್ಪಾಜಿ ಹಾಗೂ ನಾನು ಗಂಧದ ಗುಡಿ ಸಿನಿಮಾ ಮಾಡಿದ್ದೇವು. ಇದೀಗ ಅಪ್ಪು ಮಾಡಿದ್ದಾನೆ. ಕಾಡು ಎಷ್ಟು ಮುಖ್ಯ ಅಂತ ಗಂಧದಗುಡಿಯಲ್ಲಿ ನೀವೆಲ್ಲಾ ನೋಡಿ. ನನ್ನ ಡ್ಯಾನ್ಸ್ ಸೂಪರ್ ಎಂದು ಅಪ್ಪು ಹೇಳುತ್ತಿದ್ದ. ಆದರೆ ನಾನು ಅಪ್ಪು ಡ್ಯಾನ್ಸ್ ಫ್ಯಾನ್ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. 

ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಅಪ್ಪು ಕುರಿತು ಮಾತನಾಡಿದ್ದಾರೆ. ಎಲ್ಲರೂ ಅಪ್ಪು ಅಗಲಿಕೆ ನೋವು ಇನ್ನೂ ಮಾಸಿಲ್ಲ ಎಂದಿದ್ದಾರೆ.  ಪುನೀತ ಪರ್ವದಲ್ಲಿ ಪಾಲ್ಗೊಂಡ ನಟ ನಿರ್ದೇಶಕ ರಾಜ್ ಬಿ ಶೆಟ್ಟಿ, ಅಪ್ಪು ಕುರಿತು ಮಾತನಾಡಿದ್ದಾರೆ. ಪರ್ವ ಅಂದ್ರೆ ಹಬ್ಬ. ಈ ಪುನೀತ ಹಬ್ಬದಲ್ಲಿ ನಾವಿದ್ದೇವೆ.ನಾನು ನನ್ನ ಸಿನಿ ಜೀವನವನ್ನೇ ಅವರಿಗೆ ಅರ್ಪಿಸಬೇಕು ಎಂದರು. ನನ್ನ ಒಂದು ಮೊಟ್ಟೆ ಕಥೆ ಸಿನಿಮಾ ನೋಡಿ ಮನೆಗೆ ಕರೆದು ಪ್ರಶಂಸಿದ್ದರು.  ಅವರ ಮನೆಗೆ ಹೋದೆ. ಈಗ ಅಪ್ಪು ಸರ್ ಬಗ್ಗೆ ಮಾತಾಡೋಕೆ ವೇಧಿಕೆ ಮೇಲೆ ಬಂದಿದ್ದೇನೆ. ನಾವು ಅವರ ಬದುಕನ್ನ ಕೊಂಡಾಡೋಣ. ಅವರ ಹಾಗೇ ಬದುಕೋಣ. ನಾನು ಅಣ್ಣಾವ್ರನ್ನು ನೋಡಿ ಬೆಳೆದಿದ್ದೇನೆ ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.

PUNEETH PARVA ಪುನೀತ್ ಅಭಿಯನದ ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಸಿಎಂ ಬೊಮ್ಮಾಯಿ!

ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಟ ಧೃವ ಸರ್ಜಾ, ಪವರ್ ಹೌಸ್‌ಗೆ ನಮಸ್ಕಾರ ಎಂದು ಮಾತು ಆರಭಿಸಿದರು. ಇಷ್ಟೇ ಅಲ್ಲ ಪುನೀತ್ ರಾಜ್‌ಕುಮಾರ್ ಸಿನಿಮಾದ ಜೈಲಾಗ್ ಹೊಡೆದರು.  ನಾನು ಅಪ್ಪ ಸರ್ ಅಭಿಮಾನಿ ಎಂದು ಮಾತು ಆರಂಭಿಸಿದ ನಟ ದುನಿಯಾ ವಿಜಯ್ , ಅಪ್ಪು ಸರ್ ಕುರಿತು ಮಾತನಾಡಲು ತುಂಬಾ ನೋವಾಗುತ್ತೆ. ಸೂರ್ಯ ಚಂದ್ರ ಇರೋ ವರೆಗೂ ಅಪ್ಪು ಪರ್ವ ಇದ್ದೇ ಇರುತ್ತೆ..ಕರ್ನಾಟಕಕ್ಕೆ ಒಬ್ಬನೇ ರಾಜ ಕುಮಾರ ಅದು ಪುನೀತ್ ಸರ್ ಎಂದು ದುನಿಯಾ ವಿಜಯ್ ಹೇಳಿದ್ದಾರೆ.
 
ಡ್ಯಾನ್ಸ್ ಮೂಲಕ ವೇದಿಕೆ ಹತ್ತಿದ ನಟಿ ರಮ್ಯಾ, ಅಪ್ಪು ಜೊತೆಗಿನ ಹಲವು ನೆನಪುಗಳನ್ನು ಬಿಚ್ಚಿಟ್ಟರು. ಇದು ತುಂಬಾ ಭಾವುಕದ ಕ್ಷಣ ಎಂದರು. ಶೂಟಿಂಗ್ ವೇಳೆ ಅಪ್ಪು ನಡೆದುಕೊಳ್ಳುತ್ತಿದ್ದ ರೀತಿ, ವ್ಯಕ್ತಿತ್ವದ ಕುರಿತು ರಮ್ಯ ಮಾತನಾಡಿದರು. ಶೂಟಿಂಗ್ ಮಾಡುವಾಗ ಅಪ್ಪು ಅವರೇ ಡಾನ್ಸ್ ಹೇಳಿಕೊಡುತ್ತಿದ್ದರು. ನನಗೆ ಡ್ಯಾನ್ಸ್ ಸ್ಟೆಪ್ ಬರುತ್ತಿಲ್ಲ ಅಂದಾಗ ಮಾಸ್ಟರ್ ಬಳಿ ಹೋಗಿ ಕೆಲ ಸ್ಟೆಪ್ ಬದಲಾಯಿಸುತ್ತಿದ್ದರು. ಇವತ್ತು ಈ ವೇಧಿಕೆ ಮೇಲೆ‌ ಇದ್ದೇನೆ ಅಂದ್ರೆ ಅದಕ್ಕೆ ಅಣ್ಣಾವ್ರ ಕುಟುಂಬನೇ ಕಾರಣ ಎಂದು ರಮ್ಯಾ ಹೇಳಿದರು.

ನಟಿ ಹಾಗೂ ಸಂಸದೆ ಸುಮಲತಾ ಅಪ್ಪು ಸಂಸ್ಕಾರ, ಅಪ್ಪು ನಡತೆಯನ್ನು ಕೊಂಡಾಡಿದರು. ಒಂದು ವರ್ಷ ಹೇಗೆ ಕಳೆಯಿತು ಅನ್ನೋದು ಅರ್ಥ ಆಗಲಿಲ್ಲ. ಕನ್ನಡ ಚಿತ್ರರಂಗಕ್ಕೆ ನನ್ನ ಪರಿಚಯಿಸಿದ್ದು ರಾಜ್ ಕುಮಾರ್ ಪಾರ್ವತಮ್ಮ‌ ಅವರು. ಅಪ್ಪು ತಾಯಿ ಆಗಿ ದೊಡ್ಮನೆ ಹುಡುಗ ಸಿನಿಮಾದಲ್ಲಿ ನಟಿಸಿದ್ದೆ. ಅಪ್ಪು ಅಂದರೆ ಅಂಬರೀಶ್‌ಗೆ ತುಂಬಾ ಇಷ್ಟ. ಅಪ್ಪು ಪರಿಸರ ಪ್ರೇಮಿಯಾಗಿದ್ದರು ಎಂದು ಸುಮಲತಾ ಹೇಳಿದರು.
 
ಇದು ಸಂಭ್ರಮ ಅಲ್ಲ, ಮಹಾ ಸಂಗಮ ಎಂದು ನಟ ರವಿಚಂದ್ರನ್ ಹೇಳಿದರು.  ಇವತ್ತಿನ ಕಾರ್ಯಕ್ರಮಕ್ಕೆ ಅಪ್ಪುಗಾಗಿ ಎಲ್ಲರೂ ಬಂದಿದ್ದಾರೆ.ರಾಜ್ ಕುಮಾರ್ ಅಪ್ಪುಗೆಯಿಂದ ಒಬ್ಬ ಕಲಾವಿದನಾದೆ. ಅಪ್ಪು ಅಪ್ಪುಗೆಯಿಂದ ನಾನು ಅದೃಷ್ಟವಂತನಾದೆ. ಗಂಧದಗುಡಿ ಅಂದ್ರೆ ಡಾ.‌ರಾಜ್ ಕುಮಾರ್ ಎಂದು ರವಿಚಂದ್ರನ್ ಹೇಳಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Kichcha Sudeep: ರಣಹದ್ದಿನ ಬಗ್ಗೆ ಕಿಚ್ಚ ಸುದೀಪ್‌ ಹೇಳಿದ್ದೇನು? ನಿಜ ಏನು?
BBK 12 ಫಿನಾಲೆ ಬೆನ್ನಲ್ಲೇ ಹೊಸ ವಿವಾದ, ಗಿಲ್ಲಿ ನಟ ಅಶ್ವಿನಿ ಗೌಡ ಫ್ಯಾನ್ಸ್ ನಡುವೆ ಭಾಷೆ ಜೊತೆ ಜಾತಿ ಜಗಳ..!