
ಇತ್ತೀಚೆಗೆ ಕಿರುಚಿತ್ರದ ಪ್ರದರ್ಶನ ಜತೆಗೆ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ಜ್ಯೋತ್ಸನಾ ವೆಂಕಟೇಶ್, ಸಾತ್ವಿಕಾ ಶಾಸ್ತ್ರಿ, ಶೇಸಿನ್ ಪ್ರವೀಣ್, ದಿಯಾ ಬಿಹಾನಿ, ಕೀರ್ತನರಾಜ್, ಉಷಾ, ದಿವ್ಯಾ ಅಶೋಕ್ ಕುಮಾರ್ ಚಿತ್ರದ ಮುಖ್ಯ ಪಾತ್ರಧಾರಿಗಳು.
10 ಕೆಜಿ ತೂಕ ಇಳಿಸಿಕೊಂಡಿದ್ದಾರೆ ರಕ್ಷಿತ್ ಶೆಟ್ಟಿ; ಸಪ್ತ ಸಾಗರದಾಚೆ ಎಲ್ಲೋ ಪ್ರೇಮಕತೆಯ ಸಿನಿಮಾ!
ಆ್ಯಸಿಡ್ ದಾಳಿಗೆ ಒಳಗಾದ ಹುಡುಗಿ, ಅತ್ಯಾಚಾರಕ್ಕೆ ಗುರಿಯಾದ ಹುಡುಗಿ, ಖಿನ್ನತೆಯಿಂದ ಬಳಲುತ್ತಿರುವ ಬಾಲಕಿ, ನಟನೆ ಮಾಡಲು ಅವಕಾಶಕ್ಕಾಗಿ ಕಾಯುತ್ತಿರುವ ಪ್ರತಿಭಾವಂತೆ... ಹೀಗೆ ಐದು ವಿಭಿನ್ನ ಸ್ತರದ ಹೆಣ್ಣು ಮಕ್ಕಳ ಸುತ್ತ ಸಾಗುವ ಈ ಕತೆಯಲ್ಲಿ ಆಯಾ ಕ್ಷೇತ್ರದಲ್ಲಿ ಈ ಹುಡುಗಿಯರು ಎದುರಿಸುವ ಶೋಷಣೆ ಮತ್ತು ದೌರ್ಜನ್ಯದಿಂದ ಹೇಗೆ ಮುಕ್ತರಾಗುತ್ತಾರೆ, ಅದಕ್ಕಾಗಿ ಒಬ್ಬ ಮಹಿಳೆ ಇವರಿಗೆ ಹೇಗೆ ಧೈರ್ಯ ತುಂಬುತ್ತಾಳೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು.
ಹುಟ್ಟುಹಬ್ಬದ ಸಂಭ್ರಮ ಅಭಿಮಾನಿಗಳು ಕೊಟ್ಟ ಕಾಣಿಕೆ: ಪುನೀತ್‌ರಾಜ್‌ಕುಮಾರ್
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ನಿರ್ದೇಶಕ ಎಎಂಆರ್ ರಮೇಶ್ ಆಗಮಿಸಿ ಚಿತ್ರ ವೀಕ್ಷಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ‘ಸಾಮಾಜಿಕ ಉದ್ದೇಶ ಇಟ್ಟುಕೊಂಡು ಈ ಕಿರುಚಿತ್ರ ಮಾಡಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಚಿತ್ರವನ್ನು ತಲುಪಿಸಬೇಕು ಎನ್ನುವ ಕಾರಣಕ್ಕೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರವನ್ನು ತಯಾರಿಸಿದ್ದೇವೆ’ ಎಂದರು ಪ್ರಿಯಾ ದೇವರಾಜ್. ಚಿತ್ರಕ್ಕೆ ಅರ್ಜುನ್ ಗೌಡ ಛಾಯಾಗ್ರಾಹಣ ಮಾಡಿದ್ದಾರೆ. ತಮ್ಮ ಮಗಳ ಸಿನಿಮಾ ನಿರ್ಮಾಣದ ಸಾಹಸಕ್ಕೆ ಮಮತಾ ದೇವರಾಜ್ ಮೆಚ್ಚುಗೆ ಸೂಚಿಸಿದರು. ಸದ್ಯದಲ್ಲೇ ಈ ಕಿರುಚಿತ್ರವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.