ನಿಖಿಲ್‌ ಕುಮಾರ್‌ ಹೊಸ ಚಿತ್ರಕ್ಕೆ ನಂದಕಿಶೋರ್‌ ನಿರ್ದೇಶನ;ಶಿವಣ್ಣನಿಗೆ ಜೋಡಿಯಾದ ಪೊಗರು ನಿರ್ದೇಶಕ

Kannadaprabha News   | Asianet News
Published : Mar 18, 2021, 09:46 AM ISTUpdated : Mar 18, 2021, 10:15 AM IST
ನಿಖಿಲ್‌ ಕುಮಾರ್‌ ಹೊಸ ಚಿತ್ರಕ್ಕೆ ನಂದಕಿಶೋರ್‌ ನಿರ್ದೇಶನ;ಶಿವಣ್ಣನಿಗೆ ಜೋಡಿಯಾದ ಪೊಗರು ನಿರ್ದೇಶಕ

ಸಾರಾಂಶ

ನಟ ನಿಖಿಲ್‌ ಕುಮಾರ್‌ ಚಿತ್ರವನ್ನು ನಂದ ಕಿಶೋರ್‌ ನಿರ್ದೇಶನ ಮಾಡುತ್ತಿದ್ದಾರೆ. ‘ರೈಡರ್‌’ ನಂತರ ನಿಖಿಲ್‌ ಮುಂದಿನ ಸಿನಿಮಾ ಯಾವುದು, ಧ್ರುವ ಸರ್ಜಾ ನಟನೆಯ ‘ದುಬಾರಿ’ ನಂತರ ನಂದಕಿಶೋರ್‌ ಯಾರಿಗೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಎಂಬುದಕ್ಕೆ ಉತ್ತರ ಸಿಕ್ಕಿದೆ.

 ‘ಪೊಗರು’ ಚಿತ್ರದ ಆ್ಯಕ್ಷನ್‌ ಇಮೇಜ್‌ಗೆ ಫಿದಾ ಆಗಿರುವ ನಿಖಿಲ್‌ ಕುಮಾರ್‌ ಅವರು ನಂದಕಿಶೋರ್‌ ಜತೆ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ. ‘ದುಬಾರಿ’ ಚಿತ್ರದ ನಂತರ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಸೆಟ್ಟೇರಲಿದೆ. ಅತ್ತ ನಿಖಿಲ್‌ ಕೂಡ ‘ರೈಡರ್‌’ ಮುಗಿಸಿಕೊಂಡು ಬರಲಿದ್ದಾರೆ.

ಈ ನಡುವೆ ನಂದಕಿಶೋರ್‌ ಅವರು ಶಿವರಾಜ್‌ಕುಮಾರ್‌ ಅವರಿಗೂ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಈ ಚಿತ್ರ ಮೂಡಿ ಬರಲಿದೆ. ಕತೆ ಓಕೆ ಆಗಿದೆ. ತೆಲುಗಿನ ಗೌತಮ್‌ ರೆಡ್ಡಿ ಹಾಗೂ ಕಾರ್ತಿ ಚಿಲಕುರಿ ಹಾಗೂ ವಿವೇಕ್‌ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರಿಯದರ್ಶಿನಿ ರಾಮ್‌ ಈ ಚಿತ್ರಕ್ಕೆ ಕತೆ ಬರೆಯುತ್ತಿದ್ದಾರೆ. ಈಗಾಗಲೇ ಶಿವಣ್ಣ ಕತೆ ಒಪ್ಪಿಕೊಂಡಿದ್ದಾರೆ.

ಪೊಗರು ನೋಡಲು ನಿರ್ದೇಶಕ ಕೊಟ್ಟ 10 ಕಾರಣಗಳು! 

ಪಕ್ಕಾ ಆ್ಯಕ್ಷನ್‌ ಹಾಗೂ ಸೆಂಟಿಮೆಂಟ್‌ ಸಿನಿಮಾ ಇದಾಗಿದೆ. ‘ಶಿವಣ್ಣ ಅವರ ಜತೆಗೆ ಸಿನಿಮಾ ಮಾಡುತ್ತಿದ್ದೇನೆ. ಕತೆ ಕೇಳಿದ್ದಾರೆ. ಯಾವ ನಂಬರ್‌ ಸಿನಿಮಾ, ಯಾವಾಗ ಶೂಟಿಂಗ್‌ ಎಂಬಿತ್ಯಾದಿ ವಿಚಾರಗಳು ಇನ್ನೆರಡು ದಿನದಲ್ಲಿ ಗೊತ್ತಾಗಲಿದೆ. ಯಾಕೆಂದರೆ ನಾನು ಶಿವಣ್ಣ ಚಿತ್ರಕ್ಕೆ ಹೋಗುವ ಮುನ್ನ ಧ್ರುವ ಸರ್ಜಾ ನಟನೆಯ ‘ದುಬಾರಿ’ ಹಾಗೂ ನಿಖಿಲ್‌ ಕುಮಾರ್‌ ಅವರ ನಟನೆಯ ಚಿತ್ರವನ್ನು ಮುಗಿಸಬೇಕಿದೆ. ಹೀಗಾಗಿ ಯಾವುದು, ಯಾವಾಗ ಸೆಟ್ಟೇರುತ್ತದೆ ಎಂಬುದು ಶೀಘ್ರದಲ್ಲಿ ಗೊತ್ತಾಗಲಿದೆ. ಎರಡು ಸಿನಿಮಾ ಕನ್ನಡದ ಜತೆಗೆ ಬೇರೆ ಭಾಷೆಗಳಲ್ಲೂ ಬರಲಿದೆ’ ಎನ್ನುತ್ತಾರೆ ನಿರ್ದೇಶಕ ನಂದಕಿಶೋರ್‌.

ನಂದಕಿಶೋರ್‌ ನಿರ್ದೇಶನದ ಶಿವಣ್ಣ ನಟನೆಯ ಚಿತ್ರಕ್ಕೆ ದೊಡ್ಡ ಬಜೆಟ್‌ ಹಾಗೂ ದೊಡ್ಡ ತಾರಾಗಣ ಇರಲಿದೆಯಂತೆ. ‘ವೇದ’ ಹಾಗೂ ತೆಲುಗು ನಿರ್ದೇಶಕ ರಾಮ್‌ ಧುಲಿಪುಡಿ ನಿರ್ದೇಶನದ ಚಿತ್ರವನ್ನು ಮುಗಿಸಿ ನಂದಕಿಶೋರ್‌ ಚಿತ್ರಕ್ಕೆ ಜತೆಯಾಗಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!