
ಕನ್ನಡ ಚಿತ್ರರಂಗದ ಅದ್ಭುತ ನಟ ಸಂಚಾರಿ ವಿಜಯ್ (Sanchri Vijay) ನಟಿಸಿರುವ ಕೊನೆಯ ಚಿತ್ರ 'ಪುಕ್ಸಟ್ಟೆ ಲೈಫ್' ಬಿಡುಗಡೆ ಆಗುತ್ತಿದೆ. ನಿನ್ನೆ ಚಿತ್ರದ ಪ್ರೀಮಿಯರ್ ಶೋ ಮೈಸೂರಿನಲ್ಲಿ ಇತ್ತು. ಒಂದು ಕುರ್ಚಿಗೆ ಸಂಚಾರಿ ವಿಜಯ್ ಎಂದು ಹೆಸರು ಬರೆದು, ಗೆಳೆಯರು ಮೀಸಲಿಟ್ಟಿದ್ದರು.
ಮೈಸೂರಿನಲ್ಲಿ ನಡೆದಿರುವ ಪ್ರೀಮಿಯರ್ ಶೋನಲ್ಲಿ ಸೀಟ್ ಮೀಸಲಿಟ್ಟಿರುವ ಫೋಟೋವನ್ನು ವಿಜಯ್ ಸ್ನೇಹಿತರು ಹಂಚಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದ ನಟನಿಗೆ ಚಿತ್ರತಂಡ ಈ ರೀತಿ ಗೌರವ ಸಲ್ಲಿಸಿದೆ. ಫೋಟೋ ವೈರಲ್ ಅಗುತ್ತಿದ್ದಂತೆ ಸಿನಿ ರಸಿಕರು ಚಿತ್ರತಂಡ ಮಾಡಿರುವುದನ್ನು ನೋಡಿ ಭೇಷ್ ಎಂದಿದ್ದಾರೆ.
'ಪುಕ್ಸಟ್ಟೆ ಲೈಫ್ ಪುರುಸೊತ್ತೇ ಇಲ್ಲ' (Puksatte Lifu Pursotte Illa) ಚಿತ್ರದಲ್ಲಿ ಸಂಚಾರಿ ಮುಸ್ಲಿಂ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಳ ಮಧ್ಯಮ ವರ್ಗದ ಹುಡುಗನ ಪಾತ್ರ ಇದಾಗಿದ್ದು, ಬೀಗ ರಿಪೇರಿ ಮಾಡುವ ಕೆಲಸ ಮಾಡುತ್ತಿರುತ್ತಾರೆ. ಸಂಚಾರಿ ಥಿಯೇಟರ್‌ನಲ್ಲಿರುವ ನಟರು, ತಂತ್ರಜ್ಞರು ಸೇರಿ ಮಾಡಿರುವ ಸಿನಿಮಾ ಇದು ಎಂದು ಈ ಹಿಂದೆಯೇ ಸ್ವತಃ ವಿಜಯ್ ಅವರೇ ಹೇಳಿದ್ದರು.
ಕೆಳ ಮಧ್ಯಮ ವರ್ಗದ ಹುಡುಗ ದುಡ್ಡಿನ ಆಸೆಗಹೆ ಬಿದ್ದರೆ ಏನಾಗುತ್ತದೆ? ಯಾವೆಲ್ಲಾ ಸಮಸ್ಯೆ ಶುರುವಾಗುತ್ತದೆ, ಎಂಬುವುದು ಕತೆ. ರಂಗಾಯಣ ರಘು ಹಾಗೂ ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ರಘು ದೀಕ್ಷಿತ್ ಸಹೋದರ ವಾಸು ದೀಕ್ಷಿತ್ ಸಂಗೀತ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.