Vasuki Vaibhav ಚಿತ್ರಮಂದಿರದಲ್ಲಿ ವಾಸುಕಿ ವೈಭವ್ ಮತ್ತು ಗುಂಪಿನ ನಡುವೆ ಕಿರಿಕ್, ಅವಾಚ್ಯ ಶಬ್ಧಗಳಿಂದ ನಿಂದನೆ!

Published : Oct 04, 2022, 10:15 AM ISTUpdated : Oct 04, 2022, 10:16 AM IST
Vasuki Vaibhav ಚಿತ್ರಮಂದಿರದಲ್ಲಿ ವಾಸುಕಿ ವೈಭವ್ ಮತ್ತು ಗುಂಪಿನ ನಡುವೆ ಕಿರಿಕ್, ಅವಾಚ್ಯ ಶಬ್ಧಗಳಿಂದ ನಿಂದನೆ!

ಸಾರಾಂಶ

ಕಾಂತಾರ ಸಿನಿಮಾ ನೋಡಲು ಬಂದು ಕಿರಿಕ್ ಮಾಡಿಕೊಂಡ ಗುಂಪು. ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ ವಾಸುಕಿ ವೈಭವ್....

ಕನ್ನಡ ಚಿತ್ರರಂಗದವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗುತ್ತಿರುವುದು ಹೊಂಬಾಳೆ ಫಿಲ್ಮ್‌. ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಅಭಿನಯಿಸಿರುವ ಕಾಂತಾರಾ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾ ನೋಡಲು ಸಾಮಾನ್ಯರು ಮಾತ್ರವಲ್ಲದೆ ಸೆಲೆಬ್ರಿಟಿಗಳ ದಂಡೇ ಹೋಗುತ್ತಿದೆ. ಗಾಯಕ ವಾಸುಕಿ ವೈಭವ್ ತಮ್ಮ ಸ್ನೇಹಿತರ ಜೊತೆ ಕಾಂತಾರ ಸಿನಿಮಾ ನೋಡಲು ಹೋಗಿ ಗುಂಪುವೊಂದರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. 

ಏನಿದು ಕಿರಿಕ್:

ಬಿಗ್ ಬಾಸ್ ಸ್ಪರ್ಧಿ, ಸ್ಯಾಂಡಲ್‌ವುಡ್ ಅದ್ಭುತ ಗಾಯಕ ವಾಸುಕಿ ವೈಭವ್ ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಸ್ನೇಹತ ದರ್ಶನ್ ಮತ್ತು ಗೆಳತಿ  ಜೊತೆ ಸಿನಿಮಾ ನೋಡಲು ಹೋಗಿದ್ದಾರೆ. ಈ ಸಮಯದಲ್ಲಿ ಸೀಟಿನಲ್ಲಿ ಕೂರುವ ವಿಚಾರಕ್ಕೆ ಗಲಾಟೆ ಆಗಿದೆ. ನಾಲ್ಕೈದು ಮಂದಿ ವಾಸುಕಿ ಮತ್ತು ಸ್ನೇಹಿತರ ಜೊತೆ ಗಲಾಟೆ ಮಾಡುವುದಲ್ಲ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. 

ವಾಸುಕಿ ಮತ್ತು ಸ್ನೇಹಿತರು ಮೊದಲೇ ಸಿನಿಮಾ ಟಿಕೆಟ್ ತೆಗೆದುಕೊಂಡು ಮೊದಲು ಸೀಟಿನಲ್ಲಿ ಕುಳಿತಿದ್ದರು. ಈ ವೇಲೆ ವಾಸುಕಿ ಕುಳಿತಿದ್ದ ಸೀಟ್‌ ಮುಂದೆ ಹೋಗಲು ನಾಲ್ಕೈದು ಮಂದಿ ಗುಂಪಿನಲ್ಲಿ ಬಂದಿದ್ದಾರೆ. ನಿಧಾನವಾಗಿ ನಡೆಯುತ್ತಿದ್ದ ಕಾರಣ ಬೇಗ ಬೇಗ ಹೋಗುವಂತೆ ವಾಸುಕಿ ಸ್ನೇಹಿತ ದರ್ಶನ್‌ ಗೌಡ ಮತ್ತು ಗೆಳತಿ ಹೇಳಿದ್ದಾರೆ. ಇದರಿಂದ ಕುಪಿತಾರ ನಾಲ್ಕೈದು ಮಂದಿ (ಮುರಳಿ, ಬಸವರಾಜ್‌ ಹಾಗೂ ಸ್ನೇಹಿತರು) ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇದಕ್ಕೆ ಕೋಪಗೊಂಡು ದರ್ಶನ ಮತ್ತು ಗೆಳತಿ ತಿರುಗಿ ಬೈದಿದ್ದಾರೆ. 

ರಾಣಾ ದಗ್ಗುಬಾಟಿ ನಿರ್ಮಾಣದ ಹೊಸ ಚಿತ್ರಕ್ಕೆ Vasuki Vaibhav ಸಂಗೀತ

ಮತ್ತೆ ಸುಮ್ಮನಾಗದ ಗುಂಪು ಇಂಟರ್ವಲ್‌ನಲ್ಲಿ ಮತ್ತೆ ಬೇಕೆಂದು ಕಿರಿಕ್ ತೆಗೆದಿದ್ದಾರೆ. ಏನ್ ಗುರಾಯಿಸುತ್ತಿದ್ದೀರಾ ಅಂತ ಕೇಳಿದ್ದಾರೆ. ಈ ನಡುವೆ ಎರಡೂ ಗುಂಪಿನ ನಡುವೆ ಮಾತಿನ ಚಕ್ಕಮಿಕ್ಕಿ ನಡೆದಿದೆ, ಪರಿಸ್ಥಿತಿ ಹದಗೆಡುತ್ತಿದ್ದಂತೆ ವಾಸುಕಿ ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ದೂರು ನೀಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಪೊಲೀಸರು ಊರ್ವಶಿ ಚಿತ್ರಮಂದಿರಕ್ಕೆ ಬಸವರಾಜ್‌, ಮುರುಳಿ ಮತ್ತು ಸ್ನೇಹಿತರನ್ನು ಸ್ಟೇಷನ್‌ಗೆ ಕರೆದುಕೊಂಡು ಹೋಗಿದ್ದಾರೆ. ಕಲಾಸಿಪಾಳ್ಯ ಪೊಲೀಸರು ಇಬ್ಬರೂ ಕಡೆಯವರನ್ನು ಕೂರಿಸಿ ಕೇಸ್ ಮಾಡುವುದು ಬೇಡ ಎಂದು ಹೇಳಿದ್ದಾರೆ. ನಮಗೆ ಕೇಸ್ ಆಗುವುದು ಏನೂ ಬೇಡ ಆದರೆ ನಾಲ್ಕೈದು ಮಂದು ನಮಗೆ ಸಾರಿ ಕೇಳಬೇಕು ಅಷ್ಟೇ ಸಾಕು ಎಂದಿದ್ದಾರೆ. ಬಳಿಕ ವಾಸುಕಿ ವೈಭವ್ ಸ್ನೇಹಿತರಿಗೆ ಗುಂಪು ಕ್ಷಮೆ ಕೇಳಿ ಕ್ಷಮೆ ಪತ್ರ ಬರೆದುಕೊಟ್ಟಿದ್ದಾರೆ.

ಪನ್ನಗಾ ಅವರಿಗೆ ನಾನು ತಲೆ ತಿಂದಷ್ಟು ಯಾರೂ ತಿಂದಿರುವುದಿಲ್ಲ: ವಾಸುಕಿ ವೈಭವ್

ವಾಸುಕಿ ಸ್ನೇಹಿತ ದರ್ಶನ್ ಗೌಡ ಮತ್ತೆ ದೂರು ದಾಖಲಿಸಿದ್ದಾರೆ. ದೂರಿನ್ವಯ ಎಸ್‌ಸಿಆರ್‌ (non cagniceble report) ದಾಖಲಿಸಿಕೊಂಡಿದ್ದಾರೆ. ಮುರಳಿ, ಬಸವರಾಜ್‌ ಮತ್ತು ಸ್ನೇಹಿತರ ವಿರುದ್ಧ ಎಸ್‌ಸಿಆರ್‌ ದಾಖಲಾಗಿದೆ. ಪೊಲೀಸರು ಮತ್ತೊಮ್ಮೆ ಕ್ಷಮೆ ಪತ್ರ ಬರೆಸಿಕೊಂಡಿದ್ದಾರೆ. ಕೆಲವು ಗಂಟೆಗಳ ಕಾಲ ವಾಸುಕಿ ವೈಭವ್ ಮತ್ತು ನಿರ್ದೇಶಕ ಪನ್ನಗಾಭರಣ ಠಾಣೆಯಲ್ಲಿದ್ದರು. ಇಬ್ಬರ ನಡುವೆ ಸಂಧಾನ ಮಾಡಿ ಕಲಾಸಿಪಾಳ್ಯ ಪೊಲೀಸರು ಕಳುಹಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?