ಕಾಂತಾರ 2 ಸ್ಕ್ರಿಪ್ಟ್ ರೆಡಿಯಾಗ್ತಿದೆ; ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ನಿರ್ಮಾಪಕ ವಿಜಯ್ ಕಿರಗಂದೂರು

Published : Jan 21, 2023, 03:55 PM IST
ಕಾಂತಾರ 2 ಸ್ಕ್ರಿಪ್ಟ್ ರೆಡಿಯಾಗ್ತಿದೆ; ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ನಿರ್ಮಾಪಕ ವಿಜಯ್ ಕಿರಗಂದೂರು

ಸಾರಾಂಶ

ನಿರ್ಮಾಪಕ ವಿಜಯ್ ಕಿರಗಂದೂರು ಕಾಂತಾರ 2 ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ರಿವೀಲ್ ಮಾಡಿದ್ದಾರೆ. 

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದೆ. ಕಳೆದ ವರ್ಷ ಬಿಡುಗಡೆಯಾದ ಈ ಸಿನಿಮಾ ಕೋಟಿ ಕೋಟಿ ಬಾಚಿಕೊಂಡಿತ್ತು. ಕಾಂತಾರ ಸಕ್ಸಸ್ ಬಳಿಕ ಕಾಂತಾರ  2 ಬರುತ್ತೆ ಎನ್ನುವ ಸುದ್ದಿ ಕೂಡ ವೈರಲ್ ಆಗಿದೆ. ಕಾಂತಾರ ನೋಡಿ ಎಂಜಾಯ್ ಮಾಡಿದ ಅಭಿಮಾನಿಗಳು ಪಾರ್ಟ್-2ಗಾಗಿ ಕಾಯುತ್ತಿದ್ದಾರೆ. ಕಾಂತಾರ ಯಾವಾಗ ಬರುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ಯಾನ್ ಇಂಡಿಯಾದ ಅತೀ ದೊಡ್ಡ ಬ್ಲಾಕ್ ಬಸ್ಟರ್ ಕಾಂತಾರ ಸಿನಿಮಾದ ಪಾರ್ಟ್ 2 ಬಗ್ಗೆ ಬಿಗ್ ಅಪ್ ಡೇಟ್ ನೀಡಿದ್ದಾರೆ ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು. 

ಕಾಂತಾರ ಪಾರ್ಟ್ 2 ಯಾವಾಗ ಬರುತ್ತೆ ಎನ್ನುವ ಕುತೂಹಲದ ನಡುವೆಯೇ ನಿರ್ಮಾಪಕ ವಿಜಯ್ ಕಿರಗಂದೂರು ಕಾಂತಾರ 2 ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ರಿವೀಲ್ ಆಗಿದೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಕಿರಗಂದೂರು ಮಾತನಾಡಿದ್ದಾರೆ. 'ರಿಷಬ್ ಶೆಟ್ಟಿ ಸದ್ಯ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ಚಿತ್ರಕ್ಕಾಗಿ ಸಂಶೋಧನೆ  ಮಾಡಲು ಎರಡು ತಿಂಗಳ ಕಾಲ ತಮ್ಮ ಬರವಣಿಗೆ ತಂಡದೊಂದಿಗೆ ಕರಾವಳಿ ಕರ್ನಾಟಕದ ಕಾಡುಗಳಿಗೆ ಹೋಗಿದ್ದಾರೆ' ಎಂದು ಹೇಳಿದ್ದಾರೆ. 'ಜೂನ್ ತಿಂಗಳಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಕೆಲವು ದೃಶ್ಯಗಳಿಗೆ ಮಲೆಗಾಲದ ಅವಶ್ಯಕತೆ ಇದೆ. ಹಾಗಾಗಿ ಮಲೆಗಾದಲ್ಲಿ ಚಿತ್ರೀಕರಣ ಮಾಡುತ್ತೇವೆ. ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚಿತ್ರವನ್ನು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುವುದು ನಮ್ಮ ಉದ್ದೇಶವಾಗಿದೆ' ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ.

Kantara; ಸಕ್ಸಸ್ ಬಳಿಕ ಹರಕೆ ತೀರಿಸಿದ ಚಿತ್ರತಂಡ; ರಿಷಬ್ ಮತ್ತು ತಂಡವನ್ನು ಅಪ್ಪಿಕೊಂಡ ದೈವ

ಕಾಂತಾರ ತಂಡ ಇತ್ತೀಚಿಗಷ್ಟೆ ಸೂಪರ್ ಸಕ್ಸಸ್ ಆದ ಕಾರಣಕ್ಕೆ ಹರಕೆ ತೀರಿಸಿದ್ದಾರೆ. ಇಡೀ ತಂಡ ಮಂಗಳೂರಿಗೆ ತೆರಳಿ ದೈವಗೆ ಹರಕೆ ತೀರಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಇದನ್ನು ಶೇರ್ ಮಾಡಿದ್ದಾರೆ. ಮಂಗಳೂರಿನಲ್ಲಿ ನಡೆದ ಭೂತಕೋಲದಲ್ಲಿ ಚಿತ್ರತಂಡ ಭಾಗಿಯಾಗಿ ವಿಶೇಷ ಹರಕೆ ತೀರಿಸಿದೆ. ನಿರ್ಮಾಪಕ ವಿಜಯ್ ಕಿರಂಗದೂರು, ಕಾರ್ತಿಕ್ ಗೌಡ, ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ, ಸಪ್ತಮಿ ಗೌಡ ಸೇರಿದಂತೆ ಎಲ್ಲರೂ ಭಾಗಿಯಾಗಿದ್ದರು. ದೈವ ನರ್ತಕ ಇಡೀ ತಂಡವನ್ನು ಅಪ್ಪಿಕೊಂಡ ದೃಶ್ಯ ರೋಮಾಂಚನಕಾರಿಯಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಕಾಂತಾರ ಸಿನಿಮಾದಲ್ಲಿ ದೈವ ನರ್ತಕನಾಗಿ ರಿಷಬ್ ಶೆಟ್ಟಿ ಪೊಲೀಸ್ ಅಧಿಕಾರಿ ಹಾಗೂ ಊರಿನವರನ್ನು ಅಪ್ಪಿಕೊಂಡ ಹಾಗೆ ಹರಕೆ ತೀರಿಸುವ ವೇಳೆಯೂ ದೈವ ನರ್ತಕ ರಿಷಬ್ ಶೆಟ್ಟಿಯನ್ನು ಅಪ್ಪಿಕೊಂಡಿದೆ.

ದುಬೈ ಪ್ರವಾಸದಲ್ಲಿ 'ಕಾಂತಾರ' ಶಿವ; ಪತ್ನಿ, ಮಕ್ಕಳ ಜೊತೆ ರಿಷಬ್ ಶೆಟ್ಟಿ ಮಸ್ತ್ ಮಜಾ

ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬಾಚಿಕೊಂಡಿದೆ. ಸ್ಯಾಂಡಲ್ ವುಡ್ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಪರಭಾಷೆಯಲ್ಲೂ ಕೋಟಿ ಕೋಟಿ ಬಳಿಕೆ ಮಾಡಿದೆ. ಕಾಂತಾರ 2 ಕೂಡ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣುತ್ತಾ ಎಂದು ಕಾದುನೋಡಬೇಕಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ