ಕೊರೋನಾ ಸಂಕಷ್ಟದಲ್ಲಿ ಸಿನಿ ಕಾರ್ಮಿಕರಿಗೆ ನೆರವು

By Kannadaprabha News  |  First Published Jul 7, 2021, 11:43 AM IST
  • ಸಿನಿಮಾ ಕ್ಷೇತ್ರದ ವಿವಿಧ ವಿಭಾಗಗಳ ಕಾರ್ಮಿಕರಿಗೆ ನೆರವು
  • 800ಕ್ಕೂ ಹೆಚ್ಚು ಜನರಿಗೆ ಆಹಾರದ ಕಿಟ್‌ ವಿತರಣೆ

ಕೊರೋನಾ ಕಾರಣಕ್ಕೆ ಕೆಲಸ ಇಲ್ಲದೆ ಸಂಕಷ್ಟದಲ್ಲಿರುವ ಸಿನಿಮಾ ಕ್ಷೇತ್ರದ ವಿವಿಧ ವಿಭಾಗಗಳ ಕಾರ್ಮಿಕರಿಗೆ ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ಪರ್ಪಲ್ ರಾಕ್ ಮತ್ತು ಮಲ್ಟಿ ಬಾಕ್ಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯಿಂದ ರೇಶನ್ ಕಿಟ್‌ಗಳನ್ನು ನೀಡಲಾಯಿತು.

ನಿರ್ಮಾಪಕ ರಮೇಶ್ ರೆಡ್ಡಿ ಅವರು ಸಾಹಸ ಕಲಾವಿದರು, ಬರಹಗಾರರು, ಛಾಯಾಗ್ರಹಣ ವಿಭಾಗದಲ್ಲಿ ಕೆಲಸ ಮಾಡುತ್ತಿರು ವವರು, ಆರ್‌ಪಿಗಳು ಸೇರಿದಂತೆ ಚಿತ್ರರಂಗದ ಬಹುತೇಕ ವಿಭಾಗಗಳ 800ಕ್ಕೂ ಹೆಚ್ಚು ಜನರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದರು.

Tap to resize

Latest Videos

ಬಹುಭಾಷಾ ವಿಡಿಯೋ ಆಲ್ಬಂನಲ್ಲಿ ರಾಗಿಣಿ..

ಸುಧಾ ಮೂರ್ತಿ ಅವರ ಇನ್ಫೋಸಿಸ್ ಪ್ರತಿಷ್ಠಾನದ ಮೂಲಕವೂ ನಿರ್ಮಾಪಕ ರಮೇಶ್ ರೆಡ್ಡಿ ಸಂಕಷ್ಟದಲ್ಲಿದ್ದವರಿಗೆ ನೆರವಾಗಿದ್ದು, ತಮ್ಮ ಸೂರಜ್ ಫಿಲಂಸ್ ಮೂಲಕ ಗಾಳಿಪಟ-2 ಹಾಗೂ 100 ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಪರ್ಪಲ್ ರಾಕ್ ಹಾಗೂ ಮಲ್ಟಿ ಬಾಕ್‌ಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಗಳ ವತಿಯಿಂದ ಕೂಡ ಸಿನಿಮಾ ಕಾರ್ಮಿಕರಿಗೆ ಉಚಿತ ಆಹಾರದ ಕಿಟ್‌ಗಳನ್ನು ಮಾಗಡಿ ರಸ್ತೆಯಲ್ಲಿನ ವೀರೇಶ್ ಚಿತ್ರಮಂದಿರದಲ್ಲಿ ಜು.5ರಂದು ವಿತರಣೆ ಮಾಡಲಾಯಿತು.

ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರೂ, ಯಾವುದೇ ಅಸೋಸಿಯೇಷನ್‌ನಿಂದ ಗುರುತಿನ ಕಾರ್ಡ್ ಹೊಂದಿರದ 200ಕ್ಕೂ ಹೆಚ್ಚು ಮಂದಿಗೆ ರೇಶನ್ ಕಿಟ್‌ಗಳನ್ನು ನೀಡಲಾಯಿತು. ಲೈವ್ ಫಾರ್ ಕರ್ನಾಟಕ ಫಂಡ್ ರೈಸರ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ನೋಡಿದ 2 ಲಕ್ಷಕ್ಕೂ ಹೆಚ್ಚು ಜನರಿಂದ ಬಂದ ನೆರವನ್ನು ಹೀಗೆ ಸಿನಿಮಾ ಕಾರ್ಮಿಕರ ಕಷ್ಟಕ್ಕೆ ಬಳಸಲಾಗಿದೆ.

click me!