ಪಶ್ಚಿಮ ಘಟ್ಟದ ದಟ್ಟ ಕಾಡುಗಳ ಶರಾವತಿ ಕಣಿವೆ ಪ್ರದೇಶದಲ್ಲಿ ನಟಿ ಸಂಯುಕ್ತಾ ಹೊರನಾಡು ಬೈಕಿಂಗ್ ಸಾಹಸದಲ್ಲಿ ತೊಡಗಿದ್ದಾರೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಗಾಗಿ ‘ವೈಲ್ಡ್ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಡಾಕ್ಯುಮೆಂಟರಿಯೊಂದನ್ನು ಮಾಡುತ್ತಿದ್ದಾರೆ.
ಅದರಲ್ಲಿ ಸಂಯುಕ್ತಾ ಹೊರನಾಡು ಹಾಗೂ ಅಂಕಿತಾ ಕುಮಾರ್ ನಟಿಸುತ್ತಿದ್ದಾರೆ. ಇದರ ಶೂಟಿಂಗ್ ಜೋಗ, ಶರಾವತಿ ಕಣಿವೆ ಪ್ರದೇಶ ಮೊದಲಾದೆಡೆ ನಡೆಯುತ್ತಿದೆ.
ಈ ಬಗ್ಗೆ ಮಾತನಾಡಿದ ಸಂಯುಕ್ತಾ, ‘ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳ ನಡುವೆ ಮುಂಜಾನೆ ನಾಲ್ಕು ಗಂಟೆ ಹೊತ್ತಿಗೆ ಶೂಟಿಂಗ್ ಶುರುವಾದಾಗ ಎಲ್ಲೆಡೆ ಮಂಜು. ಈ ಚಿತ್ರಕ್ಕಾಗಿ ನಾನು ಬೈಕ್ ರೈಡಿಂಗ್ ಕಲಿತೆ. ಕಾಡಿನ ಮಧ್ಯ ಮಂಜಿನ ನಡುವೆ ರೈಡಿಂಗ್ ಅದ್ಭುತ ಅನುಭವ.
ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್, KGF 2 ರಿಲೀಸ್ ಸುಳಿವು ಕೊಟ್ಟ ನಿರ್ದೇಶಕ
ಈ ಚಿತ್ರದಲ್ಲಿ ನಾನು ಮತ್ತು ಅಂಕಿತಾ ಬೈಕ್ ಟ್ರಾವೆಲ್ ಕ್ರೇಜ್ ಇರುವ ಹುಡುಗಿಯರು. ಅಷ್ಟಾಗಿ ಪ್ರವಾಸಿಗರ ಗಮನಸೆಳೆಯದ ಪ್ರವಾಸೋದ್ಯಮ ಜಾಗಗಳಿಗೆ ನಾವು ಭೇಟಿ ನೀಡಿ ಅಲ್ಲಿನ ಸೌಲಭ್ಯ, ವಿಶೇಷತೆಗಳನ್ನು ಎಕ್‌ಸ್ಪ್ಲೋರ್ ಮಾಡುತ್ತೀವಿ. ಮುಂದಿನ ತಿಂಗಳು ಈ ವೀಡಿಯೋ ರಿಲೀಸ್ ಆಗಲಿದೆ’ ಎಂದರು.
ಈವರೆಗೆ ಹೆಚ್ಚಿನವರು ಎಕ್‌ಸ್ ಪ್ಲೋರ್ ಮಾಡಿರದ ಟೂರಿಸ್‌ಟ್ ಜಾಗಗಳ ಬಗ್ಗೆ ಪ್ರಚಾರ ಕೊಡುವುದು ಈ ವಿಡಿಯೋದ ಉದ್ದೇಶ. ವೈಲ್‌ಡ್ ಕರ್ನಾಟಕ ಚಿತ್ರದ ಅಮೋಘವರ್ಷ ಅವರ ಜೊತೆಗೆ ಕೆಲಸ ಮಾಡಿದ್ದು ಮರೆಯಲಾರದ ಅನುಭವ. ? ಸಂಯುಕ್ತಾ ಹೊರನಾಡು