
ಸಿನಿಮಾ ಪ್ರಚಾರ, ಮಾರುಕಟ್ಟೆಮಾಡುವ ಜತೆಗೆ ಡಿಜಿಟಲ್ ಕಂಟೆಂಟ್‌ಗಳನ್ನು ರೂಪಿಸುವುದು ಇದರ ಉದ್ದೇಶ. ಅಂದರೆ ವಿಶೇಷವಾದ ಪೋಸ್ಟರ್, ಟೀಸರ್, ಟ್ರೇಲರ್, ಹಾಡುಗಳ ಮೂಲಕ ಚಿತ್ರಗಳ ಪ್ರಚಾರಕ್ಕೆ ನೆರವಾಗುವ ಜೊತೆಗೆ ಪ್ರಯೋಗಾತ್ಮಕ ಚಿತ್ರಗಳಿಗೆ ಡಿಜಿಟಲ್ ಕಂಟೆಂಟ್ ರೂಪಿಸುವುದು ಮುಖ್ಯ ಉದ್ದೇಶ. ಇದಕ್ಕಾಗಿ ನಿರ್ದೇಶಕ ಮಂಡಳಿ ರಚನೆಯಾಗಿದ್ದು, ನಿರ್ದೇಶಕರಾದ ಯೋಗಿ ಜಿ ರಾಜ್, ನರೆನ್, ಲಿಖಿತಾ ಹಾಗೂ ಕಾರ್ತಿಕ್ ಗೌಡ ನಿರ್ದೇಶಕ ಮಂಡಳಿಯಲ್ಲಿ ಇದ್ದಾರೆ.
ಡಿಜಿಟಲ್ ಸೇರಿದಂತೆ ಎಲ್ಲ ವಲಯಗಳಲ್ಲೂ ಸಿನಿಮಾಗಳ ಪ್ರಚಾರ ಮತ್ತು ಮಾರುಕಟ್ಟೆತುಂಬಾ ಅಗತ್ಯವಿದೆ. ಲಾಕ್ ಡೌನ್ ಹೊತ್ತಿನಲ್ಲಿ ನನಗೆ ಹೀಗೊಂದು ಹುಟ್ಟಿಕೊಂಡು ಅದು ಕಿ ಆರ್ ಜಿ ಕನ್ವೆಷನ್ ಹೆಸರಿನಲ್ಲಿ ಜಾರಿಯಾಗುತ್ತಿದೆ. ವಿವಿಧ ರೀತಿಯಲ್ಲಿ ಪ್ರಚಾರದ ಮೂಲಕ ಚಿತ್ರಗಳನ್ನು ಮಾರುಕಟ್ಟೆಮಾಡುವುದು ಇದರ ಮುಖ್ಯ ಉದ್ದೇಶ.-ಕಾರ್ತಿಕ್ ಗೌಡ, ಕೆ ಆರ್ ಜಿ ಸ್ಟುಡಿಯೋ
ಸಿನಿಮಾ ವಿತರಣೆಗಾಗಿ ಕೆ ಆರ್ ಜಿ ಸ್ಟುಡಿಯೋ ಹುಟ್ಟಿಕೊಂಡು ಮೂರು ವರ್ಷಗಳಾಗುತ್ತಿವೆ. ಈಗಾಗಲೇ 49 ಚಿತ್ರಗಳನ್ನು ವಿತರಣೆ ಮಾಡಿ, 50ನೇ ಚಿತ್ರದ ವಿತರಣೆಯ ಹೊಸ್ತಿನಲ್ಲಿ ನಿಂತಿದೆ. ಈ ಹೊತ್ತಿನಲ್ಲಿ ಕೆ ಆರ್ ಜಿ ವತಯಿಂದ ಹೀಗೊಂದು ವಿನೂತನ ಪ್ರಚಾರ ಮತ್ತು ಮಾರುಕಟ್ಟೆಯ ಕಾರ್ಯಕ್ರಮ ರೂಪಿಸಿದೆ.
ಹೊಂಬಾಳೆ ಫಿಲ್ಮ್ಸ್‌ಗೆ 6 ನೇ ವರ್ಷದ ಸಂಭ್ರಮ; ಹೀಗಿತ್ತು ಸ್ಯಾಂಡಲ್‌ವುಡ್ ತಾರೆಯರ ಸಮಾಗಮ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.