Premada Oorali ವಸಂತಾ ಕಾಲಿಗೆ ಇದೇನಾಯ್ತು? ಆತಂಕದಲ್ಲಿ ಫ್ಯಾನ್ಸ್​- ಕುಂಟುತ್ತ ಶಿವಣ್ಣನ ಜೊತೆ ಸಿನಿಮಾ ವೀಕ್ಷಿಸಿದ ರಮಿಕಾ

Published : Oct 28, 2026, 02:16 PM IST
Shiva Rajkumar and Ramika Shivu

ಸಾರಾಂಶ

ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ಯಶಸ್ಸು ಕಂಡ 'ಪ್ರೇಮದ ಊರಲಿ' ಚಿತ್ರತಂಡವನ್ನು ನಟ ಶಿವರಾಜ್‌ಕುಮಾರ್ ಶ್ಲಾಘಿಸಿದ್ದಾರೆ. ಇದೇ ವೇಳೆ ಚಿತ್ರದ ನಾಯಕಿ ರಮಿಕಾ ಶಿವು ಕಾಲಿನ ಗಾಯದೊಂದಿಗೆ ವೇದಿಕೆ ಏರಿದ್ದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಕಿರುತೆರೆಯಿಂದ ಬಂದ ಈ ನಟಿಯ ಮೊದಲ ಸಿನಿಮಾ ಇದಾಗಿದೆ.

ಬೆಂಗಳೂರು: ಪ್ರೇಮದ ಊರಲಿ (Premada Oorali Movie) ಹವಾ ಸೃಷ್ಟಿಸುತ್ತಿರುವುದು ಗೊತ್ತೇ ಇದೆ. ಅತ್ಯಂತ ಕಡಿಮೆ ಬಜೆಟ್​ನ ಚಿತ್ರವೊಂದು ಯಾವುದೇ ಅಬ್ಬರದ ಪ್ರಚಾರವಿಲ್ಲದೇ ಹೇಗೆ ಜನರ ಮನಸ್ಸನ್ನು ಕದಿಯಬಹುದು, ಹೇಗೆ ನವೀರಾದ ಕಥೆಯೊಂದು, ರಕ್ತಪಾತ, ಲಾಂಗು, ಮಚ್ಚು ಇಲ್ಲದೇ ಥಿಯೇಟರ್​ನಲ್ಲಿ ಅಬ್ಬರಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದೆ ಪ್ರೇಮದ ಊರಲಿ. ಈಗಿನ ಯುವ ಪೀಳಿಗೆ ಬಯಸೋದು ಅಶ್ಲೀಲತೆ, ಲಾಂಗು, ಮಚ್ಚು, ಹೀರೋ ಕೈಯಲ್ಲಿ ರಕ್ತಪಾತ, ನಿಮಿಷಕ್ಕೊಂದು ಕೊಲೆ... ಎನ್ನುತ್ತಲೇ ಅದೇ ರೀತಿ ನಾಯಕನ ಕೈಯಲ್ಲಿ ಕೊಲೆ ಮಾಡಿಸುವುದು ಕೆಲ ವರ್ಷಗಳ ಟ್ರೆಂಡ್​ ಆಗಿದೆ. ಆದರೆ, ಅಂಥ ಕೆಲವು ಸಿನಿಮಾಗಳು ತೋಪೆದ್ದು ಹೋಗಿದ್ದು, ಯಾವ ರೀತಿಯ ಸಿನಿಮಾಗಳನ್ನು ಜನರು ಇಷ್ಟಪಡುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದೆ ಪ್ರೇಮದ ಊರಲಿನಂಥ ಕಡಿಮೆ ಬಜೆಟ್​ ಚಿತ್ರಗಳು.

ಏನಾಯ್ತು ಕಾಲಿಗೆ?

ಇದಾಗುತ್ತಿದ್ದಂತೆಯೇ ಈ ಚಿತ್ರದ ಕಲಾವಿದರಿಗೆ ಸಕತ್​ ಡಿಮಾಂಡ್​ ಬಂದಿದೆ. ಇದೇ ವೇಳೆ ನಟ ಶಿವರಾಜ್​ ಕುಮಾರ್​ ಅವರು, ಪ್ರೇಮದ ಊರಲಿ ತಂಡವನ್ನು ಕರೆದು ಶ್ಲಾಘಿಸಿದ್ದರು. ಇದೀಗ ಶಿವರಾಜ್​ ಕುಮಾರ್​ ಜೊತೆ ಸೇರಿ ಇಡೀ ತಂಡ ಮತ್ತೊಮ್ಮೆ ಚಿತ್ರ ವೀಕ್ಷಣೆ ಮಾಡಿದೆ. ಈ ಸಂದರ್ಭದಲ್ಲಿ ಪ್ರೇಮದ ಊರಲಿ ವಸಂತಾ ಪಾತ್ರದ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿರೋ ನಟಿ ರಮಿಕಾ ಶಿವು (Ramika Shivu) ಕುಂಟುತ್ತಾ ವೇದಿಕೆ ಮೇಲೆ ಬಂದರು. ಶಿವಣ್ಣ ಏನಾಯ್ತು ಎಂದು ಕೇಳಿದಾಗ, ಕಾಲಿಗೆ ಇಂಜುರಿ ಆಗಿದೆ ಎಂದರು. ಆದರೂ ಅವರು ಆ ನೋವಿನ ನಡುವೆಯೇ ಶಿವರಾಜ್​ ಕುಮಾರ್​ ಅವರ ಬಳಿ ಬಂದು ಲಸ್ತಲಾಘವ ಮಾಡಿದರು. ಸಿನಿಮಾ ತಾರೆಯರು ಫೇಮಸ್​ ಆಗುತ್ತಿದ್ದಂತೆಯೇ, ಅವರ ಪ್ರತಿಯೊಂದು ನಡವಳಿಕೆಮೇಲೆ ಕ್ಯಾಮೆರಾ ಕಣ್ಣು ನೆಟ್ಟಿರುತ್ತದೆ. ಅದೇ ರೀತಿ ಇದೀಗ ನಟಿ ರಮಿಕಾ ಶಿವು ಅವರ ಕಾಲಿನ ಬಗ್ಗೆ ಅವರ ಅಭಿಮಾನಿಗಳು ಚಿಂತಿತರಾಗಿದ್ದಾರೆ.

ನಟಿ ಕುರಿತು

ಇನ್ನು ನಟಿ ರಮಿಕಾ ಶಿವು ಅವರಿಗೆ ಇದು ಮೊದಲ ಸಿನಿಮಾ. ಕನ್ನಡ ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ರಮಿಕಾ ಶಿವು, ಇದೀಗ ಹಿರಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸುವತ್ತ ಹೆಜ್ಜೆ ಇಡುತ್ತಿದ್ದಾರೆ. ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ‘ಪಾರು’ ಹಾಗೂ ‘ನೀನಾದೆ ನಾ’ ಮೂಲಕ ಪ್ರೇಕ್ಷಕರಿಗೆ ಪರಿಚಿತರಾದ ರಮಿಕಾ, ಇದೀಗ ಸಿನಿಮಾಗಳಲ್ಲೂ ತಮ್ಮ ಅಭಿನಯದ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆಯ ಜೊತೆಗೆ ರಮಿಕಾ ಶಿವು ಅವರ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿರುವುದು ಅವರ ಮುಂದಿನ ಸಿನಿ ಪಯಣದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಈಗಾಗಲೇ ಕಿರುತೆರೆಯಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದ ನಟಿ, ಹಿರಿತೆರೆಯಲ್ಲೂ ಭದ್ರವಾಗಿ ನೆಲೆಯೂರುವ ಸೂಚನೆ ನೀಡಿದ್ದಾರೆ. ಮೊದಲ ಸಿನಿಮಾದಲ್ಲೇ ಸಿಕ್ಕ ಯಶಸ್ಸು ಮತ್ತು ಪ್ರೇಕ್ಷಕರ ಪ್ರೀತಿಯಿಂದ ರಮಿಕಾ ಶಿವು ಅವರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಕೇವಲ ಸಿನಿಮಾಗಳ ಸಂಖ್ಯೆಯತ್ತ ಗಮನ ಹರಿಸುವ ಬದಲು, ಕಥೆ ಮತ್ತು ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ನಿರ್ಧಾರದಲ್ಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜಗತ್ತಿನ ಮುಂದೆ ಕನ್ನಡದ ಶಕ್ತಿ ಪ್ರದರ್ಶಿಸಿದ ಯಶ್‌; ‘ರಾಮಾಯಣ’ ಹಾಲಿವುಡ್ ಪ್ರೀಮಿಯರ್‌ನಲ್ಲಿ ರಾಕಿಂಗ್ ಸ್ಟಾರ್ ಭಾಷಣ ವೈರಲ್!
ತಮಿಳು Bigg Bossಗೆ ಕಿಚ್ಚ ಸುದೀಪ್​ಗೆ ಆಫರ್​- ನಿರೂಪಣೆಗೆ ಬರುವಂತೆ ಒತ್ತಾಯ; ಅಭಿಮಾನಿ ವಿಡಿಯೋ ವೈರಲ್​