ಪ್ರಜ್ವಲ್ ದೇವರಾಜ್‌ ಆ ದೃಶ್ಯ ಬೇಕೆಂದು ನೋಡಲ್ಲ, ನಾನು ಮತ್ತು ಅಮ್ಮ ಅಷ್ಟು ಅತ್ತಿದ್ದೀವಿ: ಪತ್ನಿ ರಾಗಿಣಿ

Published : Mar 25, 2023, 10:30 AM IST
ಪ್ರಜ್ವಲ್ ದೇವರಾಜ್‌ ಆ ದೃಶ್ಯ ಬೇಕೆಂದು ನೋಡಲ್ಲ, ನಾನು ಮತ್ತು ಅಮ್ಮ ಅಷ್ಟು ಅತ್ತಿದ್ದೀವಿ: ಪತ್ನಿ ರಾಗಿಣಿ

ಸಾರಾಂಶ

ವೀರಂ ಟ್ರೈಲರ್ ಲಾಂಚ್‌ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್‌ನ ಹೊಗಳಿದ ರಾಗಿಣಿ. ಕ್ಯೂಟ್ ಜೋಡಿ ಎಂದ ನೆಟ್ಟಿಗರು....

ಕನ್ನಡ ಚಿತ್ರರಂಗದ ಡೈನಾಮಿಕ್ ಕಿಂಗ್ ದೇವರಾಜ್‌ ಪುತ್ರ ಪ್ರಜ್ವಲ್ ನಟಿಸಿರುವ ವೀರಂ ಸಿನಿಮಾ ಏಪ್ರಿಲ್ 7ರಂದು ತೆರೆ ಕಾಣಲಿದೆ. ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತ್ತು. ಸಿನಿಮಾ ತಂಡ, ಮಾಧ್ಯಮ ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ರಿಲೀಸ್ ಮಾಡಲಾಗಿತ್ತು. ಪ್ರಜ್ವಲ್‌ಗೆ ಜೋಡಿಯಾಗಿ ರಚಿತಾ ರಾಮ್, ಅಚ್ಯುತ್ ಕುಮಾರ್ ಮತ್ತು ಶ್ರುತಿ ಅಭಿನಯಿಸಿದ್ದಾರೆ.  

'ನನ್ನ ಪತಿ ಪ್ರಜ್ವಲ್ ದೇವರಾಜ್‌ ವೀರಂ ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿರುವ ಚಿತ್ರತಂಡ, ಮಾಧ್ಯಮ ಮತ್ತು ಅಭಿಮಾನಿಗಳಿಗೆ ವಂದನೆ. ಫ್ಯಾನ್ಸ್‌ ರೆಸ್ಪಾನ್ಸ್‌ ನೋಡಿ ನಾನು ಫುಲ್ ಎಮೋಷನಲ್ ಅಗಿರುವೆ. ಎಷ್ಟು ವರ್ಷಗಳಿಂದ ನಾವು ವೀರಂ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದೀವಿ. ಹೆಂಡತಿಯಾಗಿ ಹೇಳಬೇಕು ಅಂದ್ರೆ ಪ್ರಜ್ವಲ್ ಅವರ ಉದ್ದ ಕೂಡಲು ತುಂಬಾ ಇಷ್ಟವಾಗುತ್ತದೆ. ವೀರಂ ಲುಕ್ ನೋಡಿ ತಕ್ಷಣ ನಾನೇ ಫಿದಾ ಆಗಿ ಬಿಟ್ಟೆ. ಪ್ರಜ್ವಲ್ ಅವರನ್ನು ಡಿಫರೆಂಟ್ ಲುಕ್‌ನಲ್ಲಿ ನೋಡುತ್ತಿರುವ ಪ್ರತಿಯೊಬ್ಬರಿಗೂ ಈ ಸಿನಿಮಾ ತುಂಬಾ ಇಷ್ಟವಾಗುತ್ತದೆ' ಎಂದು ಪತ್ನಿ ರಾಗಿಣಿ ಮಾತನಾಡಿದ್ದಾರೆ.

ಹಾರರ್‌ ಥ್ರಿಲರ್‌ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಆದ ಪ್ರಜ್ವಲ್ ದೇವರಾಜ್; 'ಮಾಫಿಯಾ' ಮೊದಲೇ ಮತ್ತೊಂದು ಪ್ರಾಜೆಕ್ಟ್‌

'ಪ್ರಜ್ವಲ್ ಮತ್ತು ರಚಿತಾ ರಾಮ್ ಕೆಮಿಸ್ಟ್ರಿ ತುಂಬಾ ಕ್ಯೂಟ್ ಆಗಿದೆ. ಈ ಕಾಂಬಿನೇಷನ್‌ನ ಮೊದಲ ಸಲ ತೆರೆ ಮೇಲೆ ನೋಡುತ್ತಿರುವುದು. ನಾನು ಮನೆಯಲ್ಲಿ ಪ್ರಜ್ವಲ್‌ನ ನೋಡಿದರೆ ಅವರು ತುಂಬಾ ರೊಮ್ಯಾಂಟಿಕ್ ಗಂಡ ಮೋಸ್ಟ್‌ ಲವಿಂಗ್ ಗಂಡ ಆದರೆ ಟ್ರೈಲರ್‌ ನೋಡುವಾಗ ನನಗೆ ತುಂಬಾ ಭಯ ಆಯ್ತು. ನನ್ನ ಮಾವನವರ ರೀತಿ ಕಣ್ಣಲ್ಲಿ ಎಲ್ಲಾ ಹೇಳುತ್ತಾರೆ...ಅದಕ್ಕೂ ನಾನು ಫಿದಾ ಆಗಿರುವೆ. ಈ ಸಿನಿಮಾದಲ್ಲಿ ತುಂಬಾ ಎಲಿಮಿಂಟ್‌ಗಳಿದೆ...ಆಕ್ಷನ್ ಇದೆ ಹಾಗೂ ಎಮೋಷನ್ ಇದೆ. ಶ್ರುತಿ ಅವರ ಜೊತೆ ಆಗಿರುವ ಸೀನ್‌ಗಳನ್ನು ಬೇಕೆಂದು ನೋಡಿಲ್ಲ ಅಷ್ಟು ಚೆನ್ನಾಗಿದೆ ನಾನು ಅಮ್ಮ ತುಂಬಾ ಅತ್ತಿದ್ದೀವಿ. ಈ ಸಿನಿಮಾ ಬಗ್ಗೆ ನಾನು ಗ್ಯಾರೆಂಟಿ ಕೊಡ್ತೀನಿ ಸಿನಿಮಾ ನೋಡಿ. ನಾನೇ ಎಲ್ಲಾ ಹೇಳಿದರೆ ಸಿನಿಮಾ ನೋಡಲ್ಲ ನೀವು. ಇಡೀ ತಂಡ ತುಂಬಾ ಕಷ್ಟ ಪಟ್ಟು ಸಿನಿಮಾ ಮಾಡಿದ್ದಾರೆ' ಎಂದು ರಾಗಿಣಿ ಹೇಳಿದ್ದಾರೆ.  

'ವೀರಂ' ಚಿತ್ರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಅವರ ಅಭಿಮಾನಿಯಾಗಿ ಪ್ರಜ್ವಲ್ ಕಾಣಿಸಿಕೊಂಡಿದ್ದು, ಕೈಯಲ್ಲಿ ವಿಷ್ಣು ಅವರ ಟ್ಯಾಟೂ (Tattoo) ಹಾಕಿಸಿಕೊಂಡಿದ್ದಾರೆ. ಇದು ಚಿತ್ರದ ಹೈಪ್ ಕ್ರಿಯೇಟ್ ಮಾಡಿದೆ. ಖದರ್‌ ಕುಮಾರ್‌ (Khadar Kumar) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಈಗಾಗಲೇ ಚಿತ್ರದ ಟೀಸರ್​ ಮತ್ತು ಪೋಸ್ಟರ್​ಗಳ ಮೂಲಕ 'ವೀರಂ'  ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ಈ ಚಿತ್ರವು ಮಾಸ್ ಅಂಶಗಳೊಂದಿಗೆ ಔಟ್ ಮತ್ತು ಔಟ್ ಕಮರ್ಷಿಯಲ್ ಎಂಟರ್ಟೈನರ್ ಆಗಿದ್ದು, ಪ್ರಜ್ವಲ್ ಚಿತ್ರಕ್ಕಾಗಿ ಉದ್ದ ಕೂದಲು ಬಿಟ್ಟಿದ್ದಾರೆ. ಕಳೆದ ವರ್ಷ ಕೋವಿಡ್ ಸಮಯದಲ್ಲಿ ಚಿತ್ರದ ಚಿತ್ರೀಕರಣ ಮುಗಿದಿದ್ದು, ಬೆಂಗಳೂರಿನ ಹೊರವಲಯದಲ್ಲಿ ಹಾಗೂ ವಿಶೇಷವಾಗಿ ನಿರ್ಮಿಸಲಾದ ದೊಡ್ಡ ಸೆಟ್‌ಗಳಲ್ಲಿ ವ್ಯಾಪಕವಾಗಿ ಚಿತ್ರೀಕರಣ ನಡೆಸಲಾಗಿತ್ತು.

Prajwal Devaraj: ಡೈನಾಮಿಕ್ ಪ್ರಿನ್ಸ್ ಹೊಸ ಚಿತ್ರಕ್ಕೆ ಪನ್ನಗ ಭರಣ ಆಕ್ಷನ್ ಕಟ್

ಲವಿತ್​ ಕ್ಯಾಮೆರಾ ಕೈಚಳಕ, ಅನೂಪ್​ ಸಿಳೀನ್​ ಸಂಗೀತ ಸಂಯೋಜನೆ, ರವಿಚಂದ್ರನ್​ ಸಂಕಲನ, ಡಿಫರೆಂಡ್​ ಡ್ಯಾನಿ ಸಾಹಸ ನಿರ್ದೇಶನ 'ವೀರಂ' ಚಿತ್ರಕ್ಕಿದೆ. ಈ ಹಿಂದೆ 'ಡಾಟರ್​ ಆಫ್​ ಪಾರ್ವತಮ್ಮ' ಚಿತ್ರವನ್ನು ನಿರ್ಮಾಣ ಮಾಡಿದ್ದ ಶಶಿಧರ್​ ಕೆ.ಎಂ. ಅವರು 'ವೀರಂ' ಚಿತ್ರವನ್ನು ಪಕ್ಕಾ ಮಾಸ್​ ಶೈಲಿಯಲ್ಲಿ ನಿರ್ಮಿಸುತ್ತಿದ್ದು, ಚಿತ್ರವನ್ನು ನೋಡಲು ಪ್ರಜ್ವಲ್​ ದೇವರಾಜ್​ ಅಭಿಮಾನಿಗಳು​ ಕಾಯುತ್ತಿದ್ದಾರೆ. ಮಾತ್ರವಲ್ಲದೇ ಈ ಚಿತ್ರವು 2023ರಲ್ಲಿ ಬಿಡುಗಡೆಯಾಗುತ್ತಿರುವ ಪ್ರಜ್ವಲ್ ಅಭಿನಯದ ಮೊದಲ ಚಿತ್ರವಾಗಿದೆ. ಇನ್ನು ಪ್ರಜ್ವಲ್ ಕೈಯಲ್ಲಿ ಸಾಲು ಸಾಲು ಚಿತ್ರಗಳಿದ್ದು, 'ಮಾಫಿಯಾ' (Mafia), 'ಗಣ' (Gana), ಸೇರಿದಂತೆ ಪನ್ನಗಭರಣ (Pannaga Bharana) ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ