Karavali Controversy: ಟ್ರೈಲರ್ ಲಾಂಚ್‌ಗೆ ಪ್ರಜ್ವಲ್ ಅಬ್ಸೆಂಟ್; ಇದಕ್ಕೆಲ್ಲಾ ಕಾರಣ ಅಲ್ವಾ ಪೇಮೆಂಟ್? ಹಾಗಿದ್ರೆ ಸತ್ಯ ಏನು?

Published : Jul 08, 2026, 08:52 PM IST
Prajwal Devaraj Raj B Shetty

ಸಾರಾಂಶ

ಅದ್ಧೂರಿಯಾಗಿ ಸಿದ್ದವಾಗಿರೋ 'ಕರಾವಳಿ ಸಿನಿಮಾ ಬೇಡದ ಕಾರಣಕ್ಕೆ ಸುದ್ದಿಯಾಗಿದೆ. ತಮ್ಮದೇ ಚಿತ್ರವನ್ನ ಒಬ್ಬ ನಟ ಸಾಯಿಸೋದಕ್ಕೆ ಹೊರಟರಾ? ಅಥವಾ ಸತ್ಯ ಇನ್ನೇನೋ ಇದೆಯಾ? ಇಲ್ಲಿದೆ ಹಲವು ಸಂಗತಿಗಳು.. 

ಕರಾವಳಿ.. ಡೈನಾಮಿಕ್ ಪ್ರಿನ್ಸ್ ದೇವರಾಜ್ (Prajwal Devaraj) ಮತ್ತು ರಾಜ್ ಬಿ ಶೆಟ್ಟಿ (Raj B Shetty) ನಟಿಸಿರೋ ಅದ್ದೂರಿ ಸಿನಿಮಾ. ಅಸಲಿಗೆ ಕರಾವಳಿ ತಂಡ ಅದ್ದೂರಿಯಾಗಿ ಟ್ರೈಲರ್ ಲಾಂಚ್​ಮಾಡೋಕೆ ಪ್ಲಾನ್ ಮಾಡಿತ್ತು. ಆದ್ರೆ ಪ್ರಜ್ವಲ್ ಫ್ಯಾನ್ಸ್ ಬಂದು ಈ ಇವೆಂಟ್‌ಗೆ ಅಡ್ಡಿ ಪಡಿಸಿದ್ದಾರೆ. ಅಷ್ಟಕ್ಕೂ ಏನಿದು ಕರಾವಳಿ ಕದನ..? 'ಇದಕ್ಕೆ ನಮ್ಮ ಇಂಡಸ್ಟ್ರಿ ಉದ್ದಾರ ಆಗಿಲ್ಲ ಅಂದಿದ್ದೇಕೆ ರಾಜ್ ಶೆಟ್ಟಿ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.

ಪ್ರಜ್ವಲ್ ದೇವರಾಜ್ - ರಾಜ್ ಶೆಟ್ಟಿ ನಡುವೆ ಕರಾವಳಿ ಕದನ? ಕರಾವಳಿ ಚಿತ್ರದ ಟ್ರೈಲರ್ ಲಾಂಚ್​ನಲ್ಲಿ ಪ್ರಜ್ವಲ್ ಫ್ಯಾನ್ಸ್ ಗಲಾಟೆ!

ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ನಟಿಸಿರೋ ಕರಾವಳಿ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸದ್ದು ಮಾಡ್ತಾ ಬಂದಿದೆ. ಚಿತ್ರದ ಟೀಸರ್ - ಸಾಂಗ್ಸ್ ನಿರೀಕ್ಷೆ ಮೂಡಿಸಿವೆ. ಆದ್ರೆ ಕರಾವಳಿ ಟ್ರೈಲರ್ ಲಾಂಚ್​ನಲ್ಲಿ ಒಂದು ಕದನ ನಡೆದಿದೆ.

ಟ್ರೈಲರ್ ಬಿಡುಗಡೆಗೆ ಪ್ರಜ್ವಲ್ ಬಂದಿಲ್ಲ. ಇತ್ತ ಅವರ ಫ್ಯಾನ್ಸ್ ಈ ಇವೆಂಟ್ ಗೆ ಬಂದು ಚಿತ್ರತಂಡವರ ಮೇಲೆ ಎಗರಾಡಿದ್ದಾರೆ. ತಳ್ಳಾಟ-ನೂಕಾಟ ನಡೆದು ದೊಡ್ಡ ಹೈಡ್ರಾಮಾನೇ ನಡೆದುಹೋಗಿದೆ.

ರಾಜ್​ ಶೆಟ್ಟಿ ಎಂಟ್ರಿ.. ಕರಾವಳಿಯಲ್ಲಿ ಪ್ರಜ್ವಲ್ ಸೈಡ್​ಲೈನ್..?

ಹೌದು ಈ ಸಿನಿಮಾಗೆ ಪ್ರಜ್ವಲ್ ನಾಯಕನಟ. ಆದ್ರೆ ಚಿತ್ರದ ಮುಖ್ಯವಾದ ಅತಿಥಿ ಪಾತ್ರಕ್ಕೆ ರಾಜ್ ಎಂಟ್ರಿ ಕೊಟ್ಟಿದ್ದಾರೆ. ಶೆಟ್ರು ಬಂದ ಮೇಲೆ ತನ್ನನ್ನ ಕಡೆಗಣಿಸಿದ್ರು ಅಂತ ಪ್ರಜ್ವಲ್​ಗೆ ಅನ್ನಿಸ್ತಾ ಗೊತ್ತಿಲ್ಲ. ಎರಡು ತಿಂಗಳಿಂದ ನಿರ್ದೇಶಕ ಗುರುದತ್ ಗಾಣಿಗ ಫೋನ್ ಸಂಪರ್ಕಕ್ಕೆ ಸಿಕ್ತಿಲ್ಲವಂತೆ ಪ್ರಜ್ವಲ್.

1 ಕೋಟಿ ಪೇಮೆಂಟ್.. ಟ್ರೈಲರ್ ಲಾಂಚ್​ಗೆ ಪ್ರಜ್ವಲ್ ಅಬ್ಸೆಂಟ್..!

ಹೌದು, ಪೇಮೆಂಟ್ ವಿಷ್ಯಕ್ಕೆ ಪ್ರಜ್ವಲ್ ಮುನಿಸಿಕೊಂಡಿದ್ದಾರಾ? ಆದ್ರೆ ಸಿಕ್ಕ ಮಾಹಿತಿ ಪ್ರಕಾರ ಕರಾವಳಿ ನಿರ್ಮಾಪಕರು ನಟ ಪ್ರಜ್ವಲ್‌ಗೆ ಬರೊಬ್ಬರಿ 1 ಕೋಟಿ ಪೇಮೆಂಟ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಆದ್ರೆ ಕೋಟಿ ಪೇಮೆಂಟ್ ಪಡೆದ ನಟ ಟ್ರೈಲರ್ ಲಾಂಚ್​ಗೆ ಅಬ್ಸೆಂಟ್ ಆಗಿದ್ದಾರೆ ಏಕೆ? ಈ ವಿವಾದ ಅಸಲಿಯತ್ತೇನು?

'ಇದಕ್ಕೆ ನಮ್ಮ ಚಿತ್ರರಂಗ ಉದ್ದಾರ ಆಗಿಲ್ಲ..' ರಾಜ್ ಶೆಟ್ಟಿ ಬೇಸರ..!

ಹೌದು, ಟ್ರೈಲರ್ ಲಾಂಚ್​ನಲ್ಲಿ ನಡೆದ ಗಲಾಟೆ, ಪ್ರಜ್ವಲ್ ಮುನಿಸಿನ ಪ್ರಸಂಗದಿಂದ ರಾಜ್ ಶೆಟ್ಟಿ ಸಿಕ್ಕಾಪಟ್ಟೆ ಅಪ್ಸೆಟ್ ಆಗಿದ್ದಾರೆ. ಇದಕ್ಕೇ ನಮ್ಮ ಚಿತ್ರರಂಗ ಉದ್ದಾರ ಆಗಿಲ್ಲ' ಅಂತ ನೋವು ತೋಡಿಕೊಂಡಿದ್ದಾರೆ.

ಪ್ರಜ್ವಲ್ ದೇವರಾಜ್ ಇಷ್ಟು ವರ್ಷ ಚಿತ್ರರಂಗದಲ್ಲಿದ್ರೂ ಒಂದು ವಿವಾದ ಕೂಡ ಮಾಡಿಕೊಂಡವರಲ್ಲ. ಆದ್ರೆ ಕರಾವಳಿ ವಿಚಾರದಲ್ಲಿ ಇಂಥಾ ವಿವಾದ ಯಾಕಾಯ್ತು ಅನ್ನೋ ಪ್ರಶ್ನೆ ಚಿತ್ರಪ್ರಿಯರನ್ನ ಕಾಡ್ತಾ ಇದೆ.

ಒಟ್ಟಿನಲ್ಲಿ, ಅದ್ಧೂರಿಯಾಗಿ ಸಿದ್ದವಾಗಿರೋ 'ಕರಾವಳಿ ಸಿನಿಮಾ ಬೇಡದ ಕಾರಣಕ್ಕೆ ಸುದ್ದಿಯಾಗಿದೆ. ತಮ್ಮದೇ ಚಿತ್ರವನ್ನ ಒಬ್ಬ ನಟ ಸಾಯಿಸೋದಕ್ಕೆ ಹೊರಟರಾ? ಅಥವಾ ಸತ್ಯ ಇನ್ನೇನೋ ಇದೆಯಾ? ಸತ್ಯ ಸಂಗತಿ ತಿಳಿಯೋತನಕ ಎಲ್ಲರನ್ನೂ ಯಾವುದೋ ಒಂದು ಅನುಮಾನ ಕಾಡೋದಂತೂ ಸತ್ಯ! ಈ ವಿಷಯದ ಬಗ್ಗೆ ಪ್ರಜ್ವಲ್ ದೇವರಾಜ್ ಏನ್ ಹೇಳ್ತಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.

ಹೆಚ್ಚಿನ ಮಾಗಿತಿಗೆ ‘ಸಿನಿಮಾ ಹಂಗಾಮ’ ನೋಡಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕರಾವಳಿ ವಿವಾದಕ್ಕೆ ಹೊಸ ತಿರುವು: ಪತಿ ಪ್ರಜ್ವಲ್ ದೇವರಾಜ್ ಪರ ನಿಂತ ಪತ್ನಿ ರಾಗಿಣಿ ಚಂದ್ರನ್
'ಕಾಂತಾರ' ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್: ಮುಂದಿನ ಭಾಗದ ಕಥೆಯ ರಹಸ್ಯ ಬಯಲು!