ಉತ್ತರದ ಅಂಗಳದಲ್ಲಿ ಕುಳಿತು 'ಕೆಜಿಎಫ್' ರಾಕಿಂಗ್ ಸ್ಟಾರ್ ಯಶ್‌ ಹೇಳಿದ ಮಾತು ಕೇಳಿ ಹೌಹಾರಿದೆ ಜಗತ್ತು!

By Shriram Bhat  |  First Published Mar 18, 2024, 1:02 PM IST

ಮುಂದೊಂದು ದಿನ ಭಾರತೀಯ ಸಿನಿಮಾ, ಹಾಲಿವುಡ್ ಸಿನಿಮಾ ಎಂಬ ಭೇದ-ಭಾವ ಕೂಡ ತೊಲಗಬೇಕು. ಇಡೀ ಜಗತ್ತು ಒಂದು, ಜಾಗತಿಕ ಸಿನಿಮಾ
ಉದ್ಯಮ ಎಂದು ಬದಲಾಗಬೇಕು. ಪ್ರಪಂಚದ ಎಲ್ಲಾ ಭಾಷೆಗಳ ಸಿನಿಮಾವನ್ನು..


ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ ಬಹುಮುಖ್ಯವಾದ ಸಂಗತಿಯೊಂದನ್ನು ಹೇಳಿದ್ದಾರೆ. 'ದಯವಿಟ್ಟು ನಾರ್ತ್-ಸೌತ್ ಎಂದು ವಿಭಾಗ ಮಾಡುವುದನ್ನು ಮರೆತುಬಿಡಿ. ಬಾಲಿವುಡ್ ಸಿನಿಮಾ ಚೆನ್ನಾಗಿರಲ್ಲ, ಅದೂ ಇದೂ ಅಂತ ಹೇಳುವುದನ್ನು ಬಿಟ್ಟು ಸಿನಿಮಾ ಮೂಲಕ ಅಗತ್ಯ ಇರುವವರನ್ನು ಇನ್ಸ್‌ಪಾಯರ್ ಮಾಡಬೇಕು. ಒಂದು ಕೆಜಿಎಫ್ (KGF) ಸಿನಿಮಾ ಎಲ್ಲವನ್ನೂ ಬದಲಾಯಿಸುತ್ತದೆ ಎಂದು ನಾನು ಭಾವಿಸುವುದಿಲ್ಲ. ಸಿನಿಮಾ ಇಂಡಸ್ಟ್ರಿಗೆ ಬಾಲಿವುಡ್ ಕೊಡುಗೆ ಸಾಕಷ್ಟಿದೆ ಎಂಬುದನ್ನು ಯಾವತ್ತೂ ಮರೆಯಬಾರದು. 

ನನ್ನ ಪ್ರಕಾರ, ನಾವೆಲ್ಲರೂ ಈ ಸೌತ್ ಇಂಡಿಯಾ (South Indai)ಹಾಗೂ ನಾರ್ತ್ ಇಂಡಿಯಾ (North India) ಕಾನ್ಸೆಪ್ಟ್‌ ಬಿಟ್ಟು ಭಾರತೀಯ ಸಿನಿಮಾ ಎಂಬ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ಭಾರತದ ಸಿನಿಮಾ ಮೂಲಕ ನಾವು ಜಗತ್ತಿನಲ್ಲಿ ನಮ್ಮ ಪ್ರಭುತ್ವ ಸ್ಥಾಪಿಸಬೇಕು. ಅದಕ್ಕಿಂತ ಹೆಚ್ಚಾಗಿ ಜಾಗತಿಕ ಮಟ್ಟದಲ್ಲಿ ನಾವು ಭಾರತೀಯ ಸಿನಿಮಾಗಳ ಮೂಲಕ  ಇಡೀ ಜಗತ್ತು ನಮ್ಮ ಕಡೆ ತಿರುಗಿ ನೋಡುವಂತೆ ಮಾಡಬೇಕು. ಈ ಸೌತ್-ನಾರ್ತ್ ಸಿನಿಮಾ ವಾರ್ ಮೂಲಕ ನಮಗೆ ಸಿಗುವುದಾದರೂ ಎನಿದೆ? ಸದ್ಯಕ್ಕೆ ಇಡೀ ಭಾರತೀಯ ಸಿನಿಮಾ ಉದ್ಯಮ ಒಂದು ಎಂಬ ಭಾವನೆ ಬರಬೇಕಿದೆ' ಎಂದಿದ್ದಾರೆ ನಟ ಯಶ್. 

Tap to resize

Latest Videos

ಸ್ಟಾರ್ ನಟಿ ಸಿನಿಮಾ ನಟನೆಗೂ ಮೊದಲು ಯಾಕೆ ನೆಲದ ಮೇಲಿನ ವಾಂತಿ ಒರೆಸಿದ್ದರು, ಕಸ ಗುಡಿಸಿದ್ದರು?

ಮುಂದೊಂದು ದಿನ ಭಾರತೀಯ ಸಿನಿಮಾ, ಹಾಲಿವುಡ್ ಸಿನಿಮಾ ಎಂಬ ಭೇದ-ಭಾವ ಕೂಡ ತೊಲಗಬೇಕು. ಇಡೀ ಜಗತ್ತು ಒಂದು, ಜಾಗತಿಕ ಸಿನಿಮಾ
ಉದ್ಯಮ (World Cinema) ಎಂದು ಬದಲಾಗಬೇಕು. ಪ್ರಪಂಚದ ಎಲ್ಲಾ ಭಾಷೆಗಳ ಸಿನಿಮಾವನ್ನು ಆ ದೇಶ ಈ ದೇಶ ಎಂಬ ಮೆಂಟಾಲಿಟಿಯನ್ನೂ ಸಹ ಮರೆತು ನಮ್ಮ ಜಗತ್ತಿನ ಸಿನಿಮಾ, ಎಲ್ಲವೂ ನಮ್ಮದೇ ಸಿನಿಮಾ ಎಂಬ ಭಾವನೆಗೆ ಬದಲಾಗಬೇಕು. ಆದರೆ ಸದ್ಯಕ್ಕೆ ನಾವು ಭಾರತದ ಸಿನಿಮಾ ಎಂಬ ಸ್ಟೆಪ್ ತೆಗದುಕೊಂಡು ಮುನ್ನಗ್ಗಬೇಕು. ಮುಂದೆ ಜಾಗತಿಕ ಸಿನಿಮಾ ಎಂಬ ಕಾನ್ಸೆಪ್ಟ್‌ಗೆ ಇದು ಮುನ್ನಡಿಯಾಗಬೇಕು' ಎಂದಿದ್ದಾರೆ ನಟ ಯಶ್. 

ಕನ್ನಡ ಚಿತ್ರರಂಗದ 'ಮರ್ಯಾದೆ ಪ್ರಶ್ನೆ' ಬಗ್ಗೆ ಯಾರೂ ಮಾತಾಡಿರ್ಲಿಲ್ಲ; ಎಂಥ ಉತ್ತರ ಸಿಕ್ತು ನೋಡಿ!

ಅಂದಹಾಗೆ, ಜಾಗತಿಕ ಮಟ್ಟದಲ್ಲಿ 'ಕೆಜಿಎಫ್' ಸರಣಿ ಸಿನಿಮಾಗಳ ಮೂಲಕ ಪ್ರಸಿದ್ಧಿ ಪಡೆದಿರುವ ನಟ ಯಶ್, ಸದ್ಯ ಟಾಕ್ಸಿಕ್' ಸಿನಿಮಾ ಶೂಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಗೀತೂ ಮೋಹನ್‌ದಾಸ್ (Geetu Mohandas)ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಟಾಕ್ಸಿಕ್ ಸಿನಿಮಾ ಶೂಟಿಂಗ್ ಶುರುವಾಗಿದೆ. ಎಲ್ಲಿ ನಡೆಯುತ್ತಿದೆ, ಎಸ್ಟು ಶೆಡ್ಯೂಲ್ ಇದೆ ಎಂಬ ಮಾಹಿತಿಗಳೆಲ್ಲವೂ ರಿವೀಲ್ ಆಗಿಲ್ಲ. ಒಟ್ಟಿನಲ್ಲಿ, ಯಶ್ ಸಂದರ್ಶನದಲ್ಲಿ ಹೇಳಿರುವ ಮಾತುಗಳು ಭಾರೀ ಮೆಚ್ಚುಗೆ ಪಡೆದಿವೆ. 

ಬಾಹುಬಲಿ ಸಿನಿಮಾದ ಮಹಾ ಸೀಕ್ರೆಟ್ ಹೇಳಿಬಿಟ್ರು ರಾಣಾ ದಗ್ಗುಬಾಟಿ; ರಾಜಮೌಳಿ ಸುಮ್ಮನಿರ್ತಾರಾ?

click me!