ಫ್ಯಾನ್ಸ್ ಪುಂಡಾಟ ಕಾರಣಕ್ಕೆ ದರ್ಶನ್ 'ಕರಿಯ' ಚಿತ್ರದ ನೈಟ್ ಶೋ ಕ್ಯಾನ್ಸಲ್ ಮಾಡಿದ ಪೊಲೀಸರು!

By Shriram Bhat  |  First Published Aug 30, 2024, 6:47 PM IST

20 ವರ್ಷಗಳ ಹಿಂದೆ ಬಿಡುಗಡೆ ಕಂಡಿದ್ದ ನಟ ದರ್ಶನ್ ಅಭಿನಯದ ಕರಿಯ ಚಿತ್ರವನ್ನು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ  ಪ್ರಸನ್ನ ಚಿತ್ರಮಂದಿರದಲ್ಲಿ ಮರುಬಿಡುಗಡೆ ಮಾಡಲಾಗಿದೆ. ಪ್ರೇಮ್ ನಿರ್ದೇಶನದ ಈ ಚಿತ್ರವು ಅಂದು ಸೂಪರ್ ಹಿಟ್ ದಾಖಲಿಸಿತ್ತು. ಈಗ ಮತ್ತೆ..


ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ 'ಪ್ರಸನ್ನ' ಚಿತ್ರಮಂದಿರದ ಬಳಿ ದರ್ಶನ್ ಫ್ಯಾನ್ಸ್ ಗಳ ಪುಂಡಾಟ ನಡೆದಿದೆ. ಬರೋಬ್ಬರಿ 20 ವರ್ಷಗಳ ನಟ ದರ್ಶನ್ (Actor Darshan) ಅಭಿನಯದ 'ಕರಿಯ' ಚಿತ್ರ ರೀ-ರಿಲೀಸ್ ಆಗಿದೆ. ಮಾರ್ನಿಂಗ್ ಶೋ ಸೇರಿದಂತೆ ಎಲ್ಲಾ ಶೋಗಳು ಹೌಸ್‌ಫುಲ್ ಆಗಿದ್ದು, ನಟ ದರ್ಶನ್ ಅಭಿಮಾನಿಗಳು ಜಾತ್ರೆಯಂತೆ ಅಲ್ಲಿ ಸೇರಿದ್ದಾರೆ. ದರ್ಶನ್ ಸ್ನೇಹಿತ ಹಾಗು ಸ್ಯಾಂಡಲ್‌ವುಡ್ ನಟ ವಿನೋದ್ ಪ್ರಭಾಕರ್ ಸಹ ಪ್ರಸನ್ನ ಚಿತ್ರಮಂದಿರಕ್ಕೆ ಕರಿಯ ಚಿತ್ರ ನೋಡಲು ಬಂದಿದ್ದರು. 

ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ, ಕರಿಯ ಚಿತ್ರದ ರಾತ್ರಿ ಪ್ರದರ್ಶನಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಕಾರಣ, ನಟ ದರ್ಶನ್ ಅಭಿಮಾನಿಗಳು ಸಿಕ್ಕಾಪಟ್ಟೆ ಕ್ರೇಜ್ ಆಗಿದ್ದು, ಪ್ರಸನ್ನ ಥಿಯೇಟರ್‌ ಬಳಿ ನೂಕುನುಗ್ಗಲು ಸೃಷ್ಟಿಯಾಗಿದೆ. ಜೊತೆಗೆ, ತಮ್ಮ ನೆಚ್ಚಿನ ನಟ 'ಡಿ ಬಾಸ್' ಪರ ಅಭಿಮಾನಿಗಳು ಘೋಷಣೆ ಕೂಗುತ್ತಿದ್ದಾರೆ. ಸಾಲದು ಎಂಬಂತೆ, ಕೆಲವರು ಪುಂಡಾಟ ಮಾಡಿ ಪೊಲೀಸರ ಲಾಠಿ ಚಾರ್ಜ್ ಬಿಸಿಯನ್ನೂ ಅನುಭವಿಸಿದ್ದಾರೆ ಎನ್ನಲಾಗಿದೆ.

Tap to resize

Latest Videos

 ನೂರೆಂಟು ವಿಘ್ನಗಳನ್ನು ದಾಟಿ ತೆರೆಗೆ ಬಂದಿತ್ತು ವಿಷ್ಣುವರ್ಧನ್-ಸುಹಾಸಿನಿ ಜೋಡಿ 'ಬಂಧನ'..!

ಈ ಹಿನ್ನೆಲೆಯಲ್ಲಿ ರಾತ್ರಿ 10:30 ಕ್ಕೆ ಇದ್ದ ಕರಿಯ ಚಿತ್ರದ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ. ಅಭಿಮಾನದ ನೆಪದಲ್ಲಿ ದರ್ಶನ್ ಫ್ಯಾನ್ಸ್‌ಗಳ ಪುಂಡಾಟಿಕೆ ಮಿತಿಮೀರಿದೆ ಎನ್ನಲಾಗಿದೆ. ಹೀಗಾಗಿ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದ ಬಳಿ ಇರುವ ಪೊಲೀಸರು ರಾತ್ರಿ ಪ್ರದರ್ಶನ ರದ್ದು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರ ಬಳಿ ಪೊಲೀಸರು ಬೀಡು ಬಿಟ್ಟಿದ್ದಾರೆ. 

20 ವರ್ಷಗಳ ಹಿಂದೆ ಬಿಡುಗಡೆ ಕಂಡಿದ್ದ ನಟ ದರ್ಶನ್ ಅಭಿನಯದ ಕರಿಯ ಚಿತ್ರವನ್ನು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ  ಪ್ರಸನ್ನ ಚಿತ್ರಮಂದಿರದಲ್ಲಿ ಮರುಬಿಡುಗಡೆ ಮಾಡಲಾಗಿದೆ. ಪ್ರೇಮ್ ನಿರ್ದೇಶನದ ಈ ಚಿತ್ರವು ಅಂದು ಸೂಪರ್ ಹಿಟ್ ದಾಖಲಿಸಿತ್ತು. ಈಗ ಮತ್ತೆ ಬಿಡುಗಡೆ ಕಂಡಿರುವ ಕರಿಯ ಚಿತ್ರವು ಮತ್ತೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸದ್ಯ ನಟ ದರ್ಶನ್ ಅವರು, ಅಶ್ಲೀಲ ಮೆಸೇಜ್ ಕಳುಹಿಸಿ ಕೊಲೆಯಾಗಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೇಸ್ ಆರೋಪಿಯಾಗಿ ಬಳ್ಳಾರಿ ಜೈಲಿನಲ್ಲಿ ಇದ್ದಾರೆ. 

ದರ್ಶನ್ ಫ್ಯಾನ್ಸ್ ಜತೆ 'ಕರಿಯ' ನೋಡಲು ಬಂದ ನಟ ವಿನೋದ್ ಪ್ರಭಾಕರ್ ಹೇಳಿದ್ದೇನು..?

click me!